Side Effects Of Curd: ಈ ಆರೋಗ್ಯ ಸಮಸ್ಯೆಗಳಿದ್ರೆ ಯಾವುದೇ ಕಾರಣಕ್ಕೂ ಮೊಸರನ್ನು ತಿನ್ನಲೇ ಬಾರದು
Side Effects Of Curd : ಮೊಸರು ಎಂದರೆ ಯಾರಿಗೇ ತಾನೇ ಎಷ್ಟ ಇಲ್ಲ ಹೇಳಿ. ಮೊಸರಿನ ಸೇವನೆಯಿಂದ ಹಾಗೂ ಅದರ ಬಳಕೆಯಿಂದ ಹಲವಾರು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಕೂದಲಿನ ಮತ್ತು ತ್ವಚೆಯ ಆರೋಗ್ಯಕ್ಕೆ ಮೊಸರು ಹೇಳಿ ಮಾಡಿಸಿದ ವಸ್ತು ಎಂದರೆ ತಪ್ಪಲ್ಲ. ಆದರೂ ಕೂಡ ಮೊಸರನ್ನು ಬಳಸುವುದರಿಂದ ಕೆಲ ಸಮಸ್ಯೆಗಳು ಉಂಟಾಗುತ್ತದೆ.
ಪ್ರತಿದಿನ ಮೊಸರಿನ ಸೇವನೆಯು ನಾವು ತಿನ್ನುವ ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗಿಸುವುದಲ್ಲದೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.ಮೊಸರಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳಿರುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಪ್ರತಿದಿನ ಮೊಸರು ಸೇವಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.
2/ 10
ಆದರೂ, ಕೆಲವು ರೀತಿಯ ಸಮಸ್ಯೆಗಳಿರುವ ಜನರು ಮೊಸರನ್ನು ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ, ಏಕೆಂದರೆ ಅಂತಹ ಸಮಸ್ಯೆ ಇರುವವರು ಮೊಸರನ್ನು ತಿನ್ನುವುದರಿಂದ ಸಮಸ್ಯೆ ಇನ್ನಷ್ಟು ಹದಗೆಡುತ್ತದೆ. ಹಾಗಾದ್ರೆ ಯಾವ ಸಮಸ್ಯೆಯಿಂದ ಬಳಲುತ್ತಿರುವವರು ಮೊಸರನ್ನು ತಿನ್ನಬಾರದು ಎಂಬುದು ಇಲ್ಲಿದೆ.
3/ 10
ಜೀರ್ಣಕ್ರಿಯೆಯ ಸಮಸ್ಯೆಯನ್ನು ಹೊಂದಿರುವವರು ಮೊಸರನ್ನು ಸೇವನೆ ಮಾಡುವುದು ಉತ್ತಮವಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ. ಅಜೀರ್ಣ ಅಥವಾ ಆಸಿಡ್ ರಿಫ್ಲಕ್ಸ್ ಸಮಸ್ಯೆಗಳನ್ನು ಹೊಂದಿದ್ದರೆ, ನಿಮ್ಮ ಜೀರ್ಣಕ್ರಿಯೆಯು ನಿಧಾನವಾಗುತ್ತದೆ, ಈ ಕಾರಣದಿಂದ ಮೊಸರನ್ನು ಸೇವನೆ ಮಾಡಬೇಡಿ.
4/ 10
ತೀವ್ರವಾದ ಕೀಲು ನೋವಿನಿಂದ ಬಳಲುತ್ತಿರುವವರು ಮೊಸರನ್ನು ತಿನ್ನಬಾರದು ಎಂದು ವೈದ್ಯರು ಹೇಳುತ್ತಾರೆ. ಈ ರೀತಿಯ ಸಮಸ್ಯೆ ಇರುವವರು ಹೆಚ್ಚಾಗಿ ಮೊಸರು ಸೇವಿಸುವುದರಿಂದ ಅವರ ನೋವು ಹೆಚ್ಚಾಗುತ್ತದೆ.ಸಂಧಿವಾತ ಇರುವವರು ಮೊಸರನ್ನು ಸೇವಿಸದಿರುವುದು ಉತ್ತಮ ಎನ್ನಲಾಗುತ್ತದೆ.
5/ 10
ಅಸ್ತಮಾದಿಂದ ಬಳಲುತ್ತಿರುವವರು ಮತ್ತು ಉಸಿರಾಟದ ತೊಂದರೆ ಇರುವವರು ಅಪ್ಪಿ ತಪ್ಪಿಯು ಮೊಸರು ತಿನ್ನಬಾರದು. ಅದು ಅವರ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ .
6/ 10
ಅಸ್ತಮಾ ಇರುವವರು ಮೊಸರು ತಿನ್ನಲು ಬಯಸಿದರೆ ಹಗಲಿನಲ್ಲಿ ಮಾತ್ರ ಸೇವನೆ ಮಾಡುವುದು ಉತ್ತಮ.ರಾತ್ರಿಯಲ್ಲಿ ಮೊಸರು ತಿನ್ನುವುದು ಆರೋಗ್ಯಕ್ಕೆ ಉತ್ತಮ..ರಾತ್ರಿ ಮೊಸರು ತಿನ್ನುವುದರಿಂದ ಉಸಿರಾಡಲು ಹೆಚ್ಚು ಕಷ್ಟವಾಗುತ್ತದೆ.
7/ 10
ಅನೇಕ ಜನರು ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಮೊಸರನ್ನು ಸೇವಿಸಬಾರದು.ಯಾಕೆಂದರೆ ಮೊಸರು ಅಸಿಡಿಟಿಯನ್ನು ಹೆಚ್ಚು ಮಾಡುತ್ತದೆ.
8/ 10
ಜೊತೆಗೆ ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಸಹ ಮೊಸರು ತಿಂದರೆ ಗಂಟಲಿನ ಸಮಸ್ಯೆ ಮತ್ತು ನೆಗಡಿ ಉಂಟಾಗಬಹುದು. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಮೊಸರನ್ನು ಕಡಿಮೆ ಮಾಡುವುದು ಉತ್ತಮ.
9/ 10
ಲ್ಯಾಕ್ಟೋಸ್ ಸಮಸ್ಯೆ ಹೊಂದಿರುವ ಜನರು ಮೊಸರನ್ನು ಜೀರ್ಣಿಸಿಕೊಳ್ಳಬಹುದು, ಆದರೆ ಹಾಲನ್ನು ಅಲ್ಲ ಎಂದು ಅಧ್ಯಯನಗಳು ಸಾಬೀತು ಮಾಡಿವೆ. ಹಾಗಾಗಿ ಮೊಸರನ್ನು ಸಹ ಕಡಿಮೆ ಸೇವನೆ ಮಾಡುವುದು ಉತ್ತಮ.
10/ 10
ಈ ಸಮಸ್ಯೆಗಳಿಂದ ಬಳಲುತ್ತಿರುವವರು ರಾತ್ರಿ ವೇಳೆ ಮೊಸರು ಸೇವಿಸಬಾರದು. ಮೊಸರು ಸೇವನೆಯಿಂದ ಅತಿಸಾರ ಉಂಟಾಗುವ ಅಪಾಯವಿದೆ ಹಾಗಾಗಿ ಮೇಲೆ ತಿಳಿಸಿದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮೊಸರನ್ನು ಸೇವನೆ ಮಾಡದಿರುವುದು ಉತ್ತಮ.