ಇನ್ನು ರಸ್ತೆ ಬದಿಯಲ್ಲಿ ಇರುವ ಕಬ್ಬಿನ ಅಂಗಡಿಯಲ್ಲಿ ಒಬ್ಬ ವ್ಯಕ್ತಿ ಮಾತ್ರ ವ್ಯಾಪಾರ ಮಾಡುತ್ತಾನೆ. ಅವನೇ ಯಂತ್ರಕ್ಕೆ ಕಬ್ಬು ಹಾಕಿ ಆನ್ ಮಾಡಿ, ಹಾಲನ್ನು ಲೋಟಕ್ಕೆ ಹಾಕಿ ಗ್ರಾಹಕರಿಗೆ ನೀಡುತ್ತಾನೆ. ಹೀಗೆ ಎಲ್ಲವನ್ನೂ ಮುಟ್ಟುವ ವ್ಯಕ್ತಿ ಕೈಗೆ ಕ್ಲೀನ್ಗಾಗಿ ಗ್ಲೌಸ್ ಕೂಡಾ ಹಾಕಿರುವುದಿಲ್ಲ. ನಂತರ ಜ್ಯೂಸ್ ತಯಾರಿಸಿದ ಕೈಯಲ್ಲೇ ಅದನ್ನು ಸೇವನೆ ಮಾಡಲು ಸಹ ಕೊಡುತ್ತಾರೆ.
ಇನ್ನು ಕೆಂಪಾದ ಕಬ್ಬಿನಿಂದ ಮಾಡಿದ ಕಬ್ಬಿನ ರಸವನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ ಎನ್ನುತ್ತಾರೆ ತಜ್ಞರು. ಈ ರೀತಿಯ ಕಬ್ಬಿನ ಹಾಲನ್ನು ಸೇವನೆ ಮಾಡುವುದರಿಂದ ನಿಮಗೆ ಅತಿ ಸಾರ ಮತ್ತು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರಬಹುದು. ಇನ್ನು ಅದರಲ್ಲಿ ಬಳಸುವಂತಹ ಐಸ್ನ ಗುಣಮಟ್ಟ ಸಹ ಆರೋಗ್ಯದ ತೊಂದರೆ ಕಾರಣವಾಗ್ಬಹುದು. ಇದರಿಂದ ಗಂಟಲು ನೋವು, ಕೆಮ್ಮು, ಶೀತ ಉಂಟಾಗಬಹುದು.