Watermelon: ಕೆಂಪಾಗಿ, ಸ್ವೀಟ್​ ಆಗಿರುವ ಕಲ್ಲಂಗಡಿ ಸೆಲೆಕ್ಟ್​ ಮಾಡೋಕೆ ಇಲ್ಲಿದೆ ನೋಡಿ ಟ್ರಿಕ್ಸ್

ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ನೋಡಿದಾಗ ಖರೀದಿಸುವ ಅಂತ ಆಗೋದು ಸಹಜ. ಆದ್ರೆ ಖರೀದಿಸುವಾಗ ಆ ಹಣ್ಣು ಸಿಹಿ ಇರಬಹುದಾ? ಹಣ್ಣಾಗಿದ್ಯಾ? ಎಂಬ ಹಲವಾರು ಪ್ರಶ್ನೆಗಳು ಸಹ ಮೂಡುತ್ತದೆ. ಹಾಗಿದ್ರೆ ಇದನ್ನೆಲ್ಲಾ ತಿಳ್ಕೊಳ್ಬೇಕಾದ್ರೆ ಈ ಲೇಖನವನ್ನು ಓದಿ.

First published:

  • 18

    Watermelon: ಕೆಂಪಾಗಿ, ಸ್ವೀಟ್​ ಆಗಿರುವ ಕಲ್ಲಂಗಡಿ ಸೆಲೆಕ್ಟ್​ ಮಾಡೋಕೆ ಇಲ್ಲಿದೆ ನೋಡಿ ಟ್ರಿಕ್ಸ್

    ಬೇಸಿಗೆಕಾಲ ಬಂತೆಂದರೆ ಸಾಕು, ರಸ್ತೆ ಬದಿಗಳಲ್ಲಿ ರಾಶಿ ರಾಶಿ ಕಲ್ಲಂಗಡಿ ಮತ್ತು ಖರಬುಜ ಹಣ್ಣುಗಳನ್ನು ಇಟ್ಟುಕೊಂಡು ಮಾರಲು ಕುಳಿತಿರುವವರನ್ನು ಮತ್ತು ಅವುಗಳನ್ನು ಖರೀದಿಸಲು ಜನರ ಗುಂಪನ್ನು ಸಹ ನಾವು ನೋಡಬಹುದು. ಬೇಸಿಗೆ ಕಾಲದಲ್ಲಿ ಮನಸ್ಸಿಗೆ ಮತ್ತು ದೇಹಕ್ಕೆ ತಂಪು ನೀಡುವ ಹಣ್ಣುಗಳು ಎಂದರೆ ಅವುಗಳು ಈ ಕಲ್ಲಂಗಡಿ ಮತ್ತು ಖರ್ಬುಜ..

    MORE
    GALLERIES

  • 28

    Watermelon: ಕೆಂಪಾಗಿ, ಸ್ವೀಟ್​ ಆಗಿರುವ ಕಲ್ಲಂಗಡಿ ಸೆಲೆಕ್ಟ್​ ಮಾಡೋಕೆ ಇಲ್ಲಿದೆ ನೋಡಿ ಟ್ರಿಕ್ಸ್

    ಆದರೆ ಇದರ ಮಧ್ಯೆ ಕಲ್ಲಂಗಡಿ ಹಣ್ಣನ್ನು ಖರೀದಿ ಮಾಡುವಾಗ ಜನರು ಅದರ ಬಣ್ಣ ಮತ್ತು ರುಚಿಯ ಬಗ್ಗೆ ತುಂಬಾನೇ ಜಾಗರೂಕತೆ ಮತ್ತು ಕಾಳಜಿ ವಹಿಸುವುದನ್ನು ನಾವು ನೋಡಿರುತ್ತೇವೆ. ‘ಕಲ್ಲಂಗಡಿ ಹಣ್ಣು ಕೆಂಪಾಗಿದೆಯೇ? ಹಣ್ಣು ರುಚಿಯಾಗಿದೆಯೇ?’ ಅಂತೆಲ್ಲಾ ಪ್ರಶ್ನೆಗಳನ್ನು ನಾವು ಕಲ್ಲಂಗಡಿ ಹಣ್ಣನ್ನು ಖರೀದಿಸುವಾಗ ಆ ಮಾರಾಟಗಾರರಿಗೆ ಕೇಳುತ್ತೇವೆ.

    MORE
    GALLERIES

  • 38

    Watermelon: ಕೆಂಪಾಗಿ, ಸ್ವೀಟ್​ ಆಗಿರುವ ಕಲ್ಲಂಗಡಿ ಸೆಲೆಕ್ಟ್​ ಮಾಡೋಕೆ ಇಲ್ಲಿದೆ ನೋಡಿ ಟ್ರಿಕ್ಸ್

    ಎಷ್ಟೇ ಆದರೂ ಅದರ ರುಚಿ ಮತ್ತು ಬಣ್ಣವನ್ನು ನಮಗೆ ಸ್ವಲ್ಪ ಅದನ್ನು ಕತ್ತರಿಸಿ ನೋಡಿದರೆ ಅರ್ಥವಾಗುತ್ತೆ. ಆದರೆ ಈಗೆಲ್ಲಾ ಕಲ್ಲಂಗಡಿ ಹಣ್ಣನ್ನು ಖರೀದಿಗೂ ಮುಂಚೆ ಕತ್ತರಿಸುವುದಕ್ಕೆ ಹೋಗುವುದಿಲ್ಲ. ಆದರೆ ಇಲ್ಲಿ ಮೂರು ಸಲಹೆಗಳಿವೆ ನೋಡಿ, ಅವುಗಳನ್ನು ನೀವು ಫಾಲೋ ಮಾಡಿದ್ರೆ ನಿಮಗೆ ಕಲ್ಲಂಗಡಿ ಬಣ್ಣ ಮತ್ತು ರುಚಿಯನ್ನು ಕ್ಷಣ ಮಾತ್ರದಲ್ಲಿ ತಿಳಿದುಕೊಳ್ಳಬಹುದು.

    MORE
    GALLERIES

  • 48

    Watermelon: ಕೆಂಪಾಗಿ, ಸ್ವೀಟ್​ ಆಗಿರುವ ಕಲ್ಲಂಗಡಿ ಸೆಲೆಕ್ಟ್​ ಮಾಡೋಕೆ ಇಲ್ಲಿದೆ ನೋಡಿ ಟ್ರಿಕ್ಸ್

    ಮಾರುಕಟ್ಟೆಯಲ್ಲಿ ನೀವು ನೋಡುವ ಹೊಳೆಯುವ ಕಲ್ಲಂಗಡಿಗಳು ನೀವು ಯೋಚಿಸುವಷ್ಟು ಸಿಹಿಯಾಗಿ ಮತ್ತು ಕೆಂಪು ಬಣ್ಣದ್ದಾಗಿ ಇರದೇ ಸಹ ಇರಬಹುದು. ಆದರೆ ಅವು ನಿಜವಾಗಿಯೂ ಕೆಂಪು ಮತ್ತು ಸಿಹಿಯಾಗಿವೆಯೇ ಅಂತ ನೋಡಲು ಸಾಧ್ಯವಾದಷ್ಟು ಭಾರವಾದ ಕಲ್ಲಂಗಡಿಯನ್ನು ಆರಿಸಿಕೊಳ್ಳಿ, ಏಕೆಂದರೆ ಅಂತಹ ಕಲ್ಲಂಗಡಿಯಲ್ಲಿ ಸರಾಸರಿ 92 ಪ್ರತಿಶತದಷ್ಟು ನೀರು ಇರುತ್ತದೆ, ಇದು ತುಂಬಾ ರಸಭರಿತವಾಗಿರುತ್ತದೆ.

    MORE
    GALLERIES

  • 58

    Watermelon: ಕೆಂಪಾಗಿ, ಸ್ವೀಟ್​ ಆಗಿರುವ ಕಲ್ಲಂಗಡಿ ಸೆಲೆಕ್ಟ್​ ಮಾಡೋಕೆ ಇಲ್ಲಿದೆ ನೋಡಿ ಟ್ರಿಕ್ಸ್

    ಮಾಗಿದ ಕಲ್ಲಂಗಡಿಯನ್ನು ಕಂಡು ಹಿಡಿಯುವ ಮತ್ತೊಂದು ಮಾರ್ಗವೆಂದರೆ ಮೇಲ್ಭಾಗದಲ್ಲಿ ಕೈಯಿಂದ ಗುಮ್ಮಿರಿ. ಮಾಗಿದ ಕಲ್ಲಂಗಡಿಗೆ ಹಾಗೆ ಹೊಡೆದಾಗ ನಿಮಗೆ ಜೋರಾದ ಶಬ್ದ ಬರುತ್ತದೆ. ಹೆಚ್ಚು ಹಣ್ಣಾದ ಕಲ್ಲಂಗಡಿ ಟೊಳ್ಳು ಅಥವಾ ಸಮತಟ್ಟಾದ ಶಬ್ದವನ್ನು ಹೊಂದಿರುತ್ತದೆ. ಈ ರೀತಿಯಾಗಿ, ನೀವು ಅದರ ಶಬ್ದದ ಮೂಲಕ ಸಹ ಕಲ್ಲಂಗಡಿ ಸಿಹಿಯಾಗಿದೆಯೇ ಅಂತ ತಿಳಿದುಕೊಳ್ಳಬಹುದು.

    MORE
    GALLERIES

  • 68

    Watermelon: ಕೆಂಪಾಗಿ, ಸ್ವೀಟ್​ ಆಗಿರುವ ಕಲ್ಲಂಗಡಿ ಸೆಲೆಕ್ಟ್​ ಮಾಡೋಕೆ ಇಲ್ಲಿದೆ ನೋಡಿ ಟ್ರಿಕ್ಸ್

    ನೀವು ಖರೀದಿಸಲು ಯೋಜಿಸುತ್ತಿರುವ ಕಲ್ಲಂಗಡಿಯಲ್ಲಿ ಎಲ್ಲೋ ಒಂದು ಕಡೆ ಕತ್ತರಿಸಿದ ಗುರುತು ಅಥವಾ ಕತ್ತರಿಸಿಟ್ಟಿದ್ದನ್ನು ಖರೀದಿಸಬೇಡಿ. ಕೆಲವೊಮ್ಮೆ ಮಾರಾಟಗಾರರು ಕಲ್ಲಂಗಡಿ ಹಣ್ಣಿಗೆ ಔಷಧಿ ಚುಚ್ಚಿರುತ್ತಾರೆ ಮತ್ತು ಇದಕ್ಕಾಗಿ ಅದರ ಮೇಲೆ ರಂಧ್ರಗಳನ್ನು ಸಹ ಮಾಡಿರುತ್ತಾರೆ.

    MORE
    GALLERIES

  • 78

    Watermelon: ಕೆಂಪಾಗಿ, ಸ್ವೀಟ್​ ಆಗಿರುವ ಕಲ್ಲಂಗಡಿ ಸೆಲೆಕ್ಟ್​ ಮಾಡೋಕೆ ಇಲ್ಲಿದೆ ನೋಡಿ ಟ್ರಿಕ್ಸ್

    ಅಲ್ಲದೆ, ಹಣ್ಣನ್ನು ಖರೀದಿಸುವಾಗ, ಕಲ್ಲಂಗಡಿ ಸಂಪೂರ್ಣವಾಗಿ ಪೂರ್ಣ ಮತ್ತು ಸರಿಯಾಗಿದೆ ಹಾಗೂ ಎಲ್ಲಿಯೂ ಕತ್ತರಿಸಲಾಗಿಲ್ಲ ಎಂಬ ಅಂಶದ ಬಗ್ಗೆ ನೀವು ಗಮನ ಹರಿಸಿ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ನೀವು ಸಿಹಿಯಾದ ಕಲ್ಲಂಗಡಿಯನ್ನು ಖರೀದಿಸ್ಬಹುದು.

    MORE
    GALLERIES

  • 88

    Watermelon: ಕೆಂಪಾಗಿ, ಸ್ವೀಟ್​ ಆಗಿರುವ ಕಲ್ಲಂಗಡಿ ಸೆಲೆಕ್ಟ್​ ಮಾಡೋಕೆ ಇಲ್ಲಿದೆ ನೋಡಿ ಟ್ರಿಕ್ಸ್

    ಇದಿಷ್ಟು ಕಲ್ಲಂಗಡಿ ಹಣ್ಣನ್ನು ಖರೀದಿಸ್ಬೇಕಾದ್ರೆ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳಾಗಿದೆ. ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣನ್ನು ನೋಡುವಾಗ ಖರೀದಿಸುವಂತಾಗೋದು ಸಹಜ. ಆದ್ರೆ ಅದು ಸಿಹಿ ಇದ್ಯಾ, ಹಣ್ಣಾಗಿದ್ಯಾ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

    MORE
    GALLERIES