ತ್ರಿಕೋನಾಸನ: ಈ ಯೋಗಾಸನ ಮಾಡಲು ಕಾಲುಗಳನ್ನು ಸ್ವಲ್ಪ ಅಗಲವಾಗಿಸಿಕೊಂಡು ನೇರವಾಗಿ ನಿಲ್ಲಿ ಮತ್ತು ಕೈಗಳು ನೇರವಾಗಿ ಇರಲಿ. ಈಗ ಎಡಕ್ಕೆ ಬಾಗಿ ಮತ್ತು ಎಡದ ಪಾದವನ್ನು ಎಡಕೈಯಿಂದ ಮುಟ್ಟಲು ಪ್ರಯತ್ನಿಸಿ. 10-20 ಸೆಕೆಂಡು ಕಾಲ ಈ ಭಂಗಿಯಲ್ಲಿ ಇರಿ ಮತ್ತು ಇದರ ಬಳಿಕ ಇನ್ನೊಂದು ಬದಿಗೆ ಭಾಗಿ. ಇದರಿಂದ ಜೀರ್ಣಕ್ರಿಯೆಯು ಉತ್ತಮವಾಗುವುದು ಮತ್ತು ಹೊಟ್ಟೆಯಲ್ಲಿ ಇರುವಂತಹ ಕೊಬ್ಬು ಕರಗುವುದು. ಇದರಿಂದ ಕಾಳು ಮತ್ತು ಕೈಯ ಸ್ನಾಯುಗಳಿಗೆ ಬಲ ಬರುವುದು
ಕುರ್ಚಿಭಂಗಿ: ಪಾದಗಳು ಒಂದಕ್ಕೊಂದು ತಾಗಿಕೊಂಡು ಇರುವಂತೆ ದೇಹದ ಎರಡು ಭಾಗಕ್ಕೆ ಕೈಗಳು ಅಂಟಿಕೊಂಡಿರುವಂತೆ ನೇರವಾಗಿ ನಿಲ್ಲಿ. ಈಗ ಕೈಗಳನ್ನು ತಲೆಯ ಮೇಲೆ ಎತ್ತಿ ಮತ್ತು ಅಂಗೈಯು ಪರಸ್ಪರ ಒಂದಕ್ಕೊಂದು ಮುಖ ಮಾಡಿಕೊಂಡಿರಲಿ. ಈಗ ಮೊಣಕಾಲುಗಳನ್ನು ನಿಧಾನವಾಗಿ ಬಗ್ಗಿಸಿ ಮತ್ತು ಸ್ಕ್ವಾಟ್ ಭಂಗಿಗೆ ಬನ್ನಿ. ತೊಡೆಯು ನೆಲಕ್ಕೆ ನೇರವಾಗಿ ಇರಲಿ. ಈ ಭಂಗಿಯಲ್ಲಿ 10-15 ನಿಮಿಷ ಹಾಗೆ ಇರಿ.
ಮೊದಲು ಸಮಸ್ಥಿತಿಯಲ್ಲಿ ನಿಲ್ಲಿ. ಈಗ ಬಲಗಾಲನ್ನು ಮೇಲೆ ತೆಗೆದುಕೊಳ್ಳಿ. ಎಡ ತೊಡೆಯ ಮೂಲಕ್ಕೆ ಬಲ ಹಿಮ್ಮಡಿಯನ್ನು ತಾಗಿಸಿ. ಕಾಲು ಬೆರಳುಗಳು ಕೆಳಮುಖವಾಗಿರಬೇಕು. ಮಂಡಿ ಸೊಂಟದ ನೇರಕ್ಕೆ ಇರಬೇಕು. ಎಡ ತೊಡೆಯಿಂದ ಬಲ ಪಾದವನ್ನು, ಬಲ ಪಾದದಿಂದ ಎಡ ತೊಡೆಯನ್ನು ಒಂದಕ್ಕೊಂದು ಒತ್ತುತ್ತಿರಬೇಕು. ಈಗ ಎರಡೂ ಕೈಗಳನ್ನು ನಿಧಾನವಾಗಿ ಮೇಲಕ್ಕೆ ಭುಜದ ನೇರಕ್ಕೆ ಅಂಗೈಗಳನ್ನು ಮೇಲ್ಮುಖ ಮಾಡಿ ಉಸಿರನ್ನು ತೆಗೆದುಕೊಳ್ಳುತ್ತಾ ಎರಡೂ ಕೈಗಳು ಮೇಲೆ ನಮಸ್ಕಾರ ಸ್ಥಿತಿಯಲ್ಲಿರಲಿ.
ಬಾಲಾಸನವು ತುಂಬಾ ಸರಳವಾದ ಆಸನವಾಗಿದ್ದು, ಇದನ್ನು ನೀವು ಬೇರೆ ಆಸನಗಳ ಮಧ್ಯೆ ಮಾಡಬಹುದು. ವಜ್ರಾಸನ ಹಾಕಿಕೊಂಡು ನೆಲದ ಮೇಲೆ ಕುಳಿತುಕೊಳ್ಳಿ. ಈಗ ತಲೆಯನ್ನು ನೆಲಕ್ಕೆ ತಾಗುವಂತೆ ಮುಂದಕ್ಕೆ ತನ್ನಿ, ಹೊಟ್ಟೆಯು ತೊಡೆಗಳಿಗೆ ತಾಗುತ್ತಿರಲಿ. ಆರಂಭದಲ್ಲಿ ಹಣೆಯು ನೆಲಕ್ಕೆ ತಾಗದೆ ಇರಬಹುದು. ಆದರೆ ಇದಕ್ಕೆ ಚಿಂತೆ ಮಾಡಬೇಡಿ. ಕೈಗಳನ್ನು ಹಾಗೆ ಮುಂದಕ್ಕೆ ಎಳೆಯಿರಿ ಮತ್ತು ಅಂಗೈಯು ನೆಲವನ್ನು ಮುಟ್ಟಲಿ. 10-20 ಸೆಕೆಂಡು ಕಾಲ ಹಾಗೆ ಇದೇ ಭಂಗಿಯಲ್ಲಿ ಇರಿ.