ತುಟಿಗಳು ಪುರುಷರು ಮತ್ತು ಮಹಿಳೆಯರಿಗೆ ಮುಖದ ಅತ್ಯಂತ ಆಕರ್ಷಕ ಭಾಗಗಳಲ್ಲಿ ಒಂದಾಗಿದೆ. ಆದ್ದರಿಂದ ಎಲ್ಲರೂ ತಮ್ಮ ತುಟಿಗಳು ಕೆಂಪಾಗಿರಲಿ ಎಂದು ಬಯಸುತ್ತಾರೆ. ಆದರೆ ಕೆಲವು ಕಾರಣಗಳಿಂದ ನಮ್ಮ ತುಟಿಗಳು ಕಪ್ಪಾಗಿ ಕಾಣುತ್ತವೆ. ನೀವು ಇದೇ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮಗಾಗಿ ಕೆಲವು ಸಲಹೆಗಳು ಇಲ್ಲಿವೆ. ಇವು ನಿಮ್ಮ ತುಟಿಗಳನ್ನು ಕೆಂಪು ಮತ್ತು ಕೋಮಲವಾಗಿಸುತ್ತದೆ.
ನೈಸರ್ಗಿಕವಾಗಿ ತೆಂಗಿನ ಎಣ್ಣೆಯನ್ನು ಸಾಮಾನ್ಯವಾಗಿ ನಮ್ಮ ಅಜ್ಜಿಯರ ಕಾಲದಿಂದಲೂ ಎಲ್ಲಾ ವಸ್ತುಗಳಿಗೆ ಬಳಸಲಾಗುತ್ತದೆ. ತುಟಿಗೆ ಇದನ್ನು ಬಳಸಿದರೆ ತುಟಿಗಳ ಕಪ್ಪು ಬಣ್ಣ ಮಾಯವಾಗುತ್ತದೆ. ತೆಂಗಿನ ಎಣ್ಣೆಯು ತುಟಿಗಳ ಮೇಲೆ ಆರ್ಧ್ರಕ ಗುಣಗಳನ್ನು ಹೊಂದಿದೆ. ಹಾಗಿಗೆ ತೆಂಗಿನ ಎಣ್ಣೆಯನ್ನು ಹಚ್ಚುಚುದರಿಂದ ತುಟಿಗಳು ಮೃದುವಾಗುವುದು ಮತ್ತು ತುಟಿಗಳ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ. ಆದ್ದರಿಂದ, ಒಣ ತುಟಿಗಳಿಗೆ ನೀವು ತೆಂಗಿನ ಎಣ್ಣೆಯನ್ನು ಅನ್ವಯಿಸಬೇಕು.
ನಿಂಬೆ ಜೊತೆ ಜೇನುತುಪ್ಪ : ಸೌಂದರ್ಯದ ವಿಷಯಕ್ಕೆ ಬಂದರೆ, ಜೇನುತುಪ್ಪದಿಂದ ನಾನಾ ಪ್ರಯೋಜನಗಳಿದೆ. ಜೇನುತುಪ್ಪವು ಅಲರ್ಜಿ ವಿರೋಧಿ ಗುಣಗಳನ್ನು ಹೊಂದಿದೆ. ನಿಂಬೆಯಲ್ಲಿ ಚರ್ಮವನ್ನು ಹಗುರಗೊಳಿಸುವ ಗುಣವಿದೆ. ಹಾಗಾಗಿ ನಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿ ತುಟಿಗಳ ಮೇಲೆ ಹಚ್ಚಿದರೆ ತುಟಿಗಳ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗಿ ತುಟಿಗಳು ಕೂಡ ಕೆಂಪಾಗುತ್ತವೆ.
ತುಟಿಗಳ ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಗುಲಾಬಿ ದಳಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಇದು ನಿಮ್ಮ ತುಟಿಗಳಿಗೆ ಉತ್ತಮವಾದ ಕೆಂಪು ಬಣ್ಣವನ್ನು ನೀಡುತ್ತದೆ. ತುಟಿಗಳನ್ನು ತೇವಗೊಳಿಸಲು ಜೇನುತುಪ್ಪದೊಂದಿಗೆ ಇದನ್ನು ಅನ್ವಯಿಸಿ. ಅಷ್ಟೇ ಅಲ್ಲ ಕೂದಲಿನ ಆರೋಗ್ಯವನ್ನೂ ಕಾಪಾಡುತ್ತದೆ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)