ವಾಸ್ತವವಾಗಿ ಮಳೆಗಾಲದಲ್ಲಿ ಶಾಖ ಹೆಚ್ಚಾಗುತ್ತದೆ. ಇದು ಬೆವರನ್ನೂ ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ರೀತಿಯ ಬಟ್ಟೆಗಳನ್ನು ಧರಿಸುವುದರಿಂದ, ನೀವು ಚರ್ಮದ ತುರಿಕೆ, ಉರಿಯೂತದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿಯೇ ನಾವು ನಿಮಗೆ ಮಾನ್ಸೂನ್ಗಾಗಿ ಕೆಲವು ಫ್ಯಾಷನ್ ಸಲಹೆ ನೀಡುತ್ತಿದ್ದೇವೆ. ಟಿಪ್ಸ್ ಸಹಾಯದಿಂದ ನೀವು ಕೆಲವು ಬಟ್ಟೆಗಳನ್ನು ತಪ್ಪಿಸುವಿದರ ಜೊತೆ ಫ್ಯಾಷನ್ ಉಡುಗೆಗಳನ್ನು ಆರಾಮದಾಯಕವಾಗಿ ಧರಿಸಬಹುದು.
ಡೆನಿಮ್ ಬಟ್ಟೆಯಿಂದ ಮಾಡಿದ ಡೆನಿಮ್ ಉಡುಪುಗಳನ್ನು ಧರಿಸುವುದನ್ನು ತಪ್ಪಿಸಿ. ಇದು ಫ್ಯಾಷನ್ ಪ್ರವೃತ್ತಿಯ ಭಾಗವಾಗಿದೆ. ಆದರೆ ಮಳೆಗಾಲದಲ್ಲಿ ಡೆನಿಮ್ ಧರಿಸುವುದನ್ನು ತಪ್ಪಿಸಿ. ಮೃದುವಾದ ಬಟ್ಟೆಯಿಂದ ಮಾಡಿದ ಡೆನಿಮ್ ಹೆಚ್ಚಾಗಿ ಮಳೆ ನೀರು ಮತ್ತು ಬೆವರು ಹೀರಿಕೊಳ್ಳುತ್ತೆ. ಇದು ಚರ್ಮದ ತುರಿಕೆ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ಮಳೆಗಾಲದಲ್ಲಿ ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ.
ಲೆದರ್ ನಿಂದ ದೂರ ಇರಿ: ಫ್ಯಾಷನ್ ಟ್ರೆಂಡ್ ಗಳ ಪಟ್ಟಿಯಲ್ಲಿ ಲೆದರ್ ಹೆಸರು ಸೇರಿಕೊಂಡಿದೆ. ಲೆದರ್ ಜಾಕೆಟ್ಗಳಿಂದ ಹಿಡಿದು ಚೀಲಗಳು ಮತ್ತು ಶೂಗಳವರೆಗೆ ಅವು ಬಹಳ ಜನಪ್ರಿಯವಾಗಿವೆ. ಚರ್ಮವನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಆದರೆ, ಮಳೆಗಾಲದಲ್ಲಿ ಲೆದರ್ ನಿಂದ ಮಾಡಿದ ಬಟ್ಟೆ, ವಸ್ತುಗಳನ್ನು ಧರಿಸೋದ್ರಿಂದ ಬೇಗನೆ ಹಾಳಾಗುತ್ತೆ. ತೇವವಾದ್ರೆ ಕಿರಿಕಿರಿ ಉಂಟು ಮಾಡುತ್ತದೆ.