ಅಡುಗೆ ಮಾಡುವಾಗ ಕೆಲವೊಮ್ಮೆ ಎಣ್ಣೆ ಮತ್ತು ಮಸಾಲೆಗಳು ನೆಲದ ಮೇಲೆ ಬಿದ್ದು ಕಲೆಯಾಗುತ್ತವೆ. ಅವು ಒಣಗಿದ್ದರೆ ಅವುಗಳನ್ನು ತೆಗೆದುಹಾಕಲು ತುಂಬಾ ಕಷ್ಟವಾಗುತ್ತದೆ. ಈ ವೇಳೆ, ನೀವು ಮೊಸರನ್ನು ಬಳಸಬಹುದು. ಮೊದಲು ಮೊಸರನ್ನು ಕಲೆಯಾದ ಜಾಗಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಡಿ. ನಂತರ ಮೊಸರು ನೀರಿನಲ್ಲಿ ಸ್ವಲ್ಪ ಅಡಿಗೆ ಸೋಡಾವನ್ನು ಮಿಶ್ರಣ ಮಾಡಿ, ಬ್ರಷ್ ಸಹಾಯದಿಂದ ಸ್ಟೇನ್ ಅನ್ನು ಸ್ಕ್ರಬ್ ಮಾಡಿ. ಈಗ ಸ್ವಚ್ಛವಾದ ಒದ್ದೆ ಬಟ್ಟೆಯಿಂದ ಒರೆಸಿ.
ಅಡುಗೆಮನೆಯಲ್ಲಿ ಜಿಡ್ಡು,ಎಣ್ಣೆ ಮತ್ತು ಮಸಾಲೆಗಳ ಕಾರಣದಿಂದಾಗಿ, ಸ್ಟೌವ್ನ ಸುತ್ತಲಿನ ಟೈಲ್ಸ್ ಮತ್ತು ಕ್ಯಾಬಿನೆಟ್ಗಳು ತುಂಬಾ ಅಂಟಿಕೊಳ್ಳುತ್ತವೆ. ಈ ವೇಳೆ ಅವುಗಳನ್ನು ನೀರಿನಿಂದ ಸ್ವಚ್ಛಗೊಳಿಸುವುದು ತುಂಬಾ ಕಷ್ಟ. ಆಗ ನೀವು ಅದನ್ನು ಸ್ವಚ್ಛಗೊಳಿಸಲು ಮೊಸರು ಬಳಸಬಹುದು. ಮೊದಲು ಒಂದು ಬಟ್ಟಲಿನಲ್ಲಿ ಮೊಸರು ತೆಗೆದುಕೊಂಡು ಅದಕ್ಕೆ ಡಿಟರ್ಜೆಂಟ್ ಸೇರಿಸಿ. ಈಗ ಈ ಪೇಸ್ಟ್ ಅನ್ನು ಪೀಡಿತ ಪ್ರದೇಶಗಳಿಗೆ ಹಚ್ಚಿ, ಸ್ಪಂಜಿನಿಂದ ತೊಳೆಯಿರಿ.
ಧೂಳು ಮತ್ತು ಹಬೆಯಿಂದ ಮಸಾಲೆ ಪೆಟ್ಟಿಗೆಗಳು ಬೇಗನೆ ಕೊಳಕು ಆಗುತ್ತವೆ. ಅವುಗಳನ್ನು ಸ್ವಚ್ಛಗೊಳಿಸದಿದ್ದರೆ, ಇಡೀ ಅಡುಗೆ ಮನೆಯೇ ಕೊಳಕಾಗಿರುವಂತೆ ಕಾಣುತ್ತದೆ. ಹಾಗಾಗಿ ಪ್ರತಿ ಎರಡು-ಮೂರು ವಾರಗಳಿಗೊಮ್ಮೆ ಅವುಗಳನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)