ಲುಕ್ ಬಗ್ಗೆ: ಹೆಂಡತಿಯೊಂದಿಗಿನ ಯಾವುದೇ ಮಾತುಕತೆಯನ್ನು ಕೂಡ ನಡೆಸಬಹುದು ಎಂದು ನೀವು ಭಾವಿಸಿದರೆ ಅದು ತಪ್ಪು ಕಲ್ಪನೆ ಅಂಥ ಅರ್ಥಮಾಡಿಕೊಳ್ಳಿ. ಅದರಲ್ಲೂ ಗಂಡ ತನ್ನ ಲುಕ್ ಬಗ್ಗೆ ಗೇಲಿ ಮಾಡಿದರೆ ಯಾವ ಹೆಣ್ಣೂ ಸಹಿಸಲಾರಳು. ನಿಮ್ಮ ಹೆಂಡತಿಗೆ ಮೇಕ್ಅಪ್ ಅಥವಾ ಡ್ರೆಸ್ಸಿಂಗ್ ಬಗ್ಗೆ ಯಾವುದಾದರೂ ಟಿಪ್ಸ್ ನೀಡಲು ಬಯಸಿದರೆ, ಆಕೆ ಒಬ್ಬಂಟಿಯಾಗಿರುವಾಗ ಮಾತ್ರ ಈ ಕೆಲಸ ಮಾಡಿ ಹಾಗೂ ಪ್ರೀತಿಯಿಂದ ಹೇಳಿ. (ಸಾಂಕೇತಿಕ ಚಿತ್ರ)
ಎಲ್ಲವನ್ನೂ ಗೇಲಿ ಮಾಡುವುದು : ನಿಮ್ಮ ಸಂಗಾತಿಯಿಂದ ಏನಾದರೂ ತಪ್ಪಾಗಿದ್ದರೆ, ಆಕೆಯ ಬಾಯಿ ಮುಚ್ಚಿಸಬೇಡಿ. ಅವಳು ಅದನ್ನು ತಿಳಿಯದೇ ಮಾಡಿದಳೋ ಅಥವಾ ತಿಳಿದು ಮಾಡಿದಳೋ ಎಂಬುದನ್ನು ಅರಿತುಕೊಳ್ಳಿ. ಅವಳಿಗೆ ಗೊತ್ತಿಲ್ಲದಿದ್ದರೆ ಅವಳು ಮಾಡಿದ ತಪ್ಪನ್ನು ಅವಳಿಗೆ ತಿಳಿಸಿ. ನೀವು ಈ ರೀತಿ ವರ್ತಿಸಿದರೆ, ಅವಳು ನಿಮ್ಮ ಮೇಲೆ ಹೆಚ್ಚು ಪ್ರೀತಿ ಮತ್ತು ವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾಳೆ. (ಸಾಂಕೇತಿಕ ಚಿತ್ರ)