ಆದರೆ ನಾಯಿಗಳು ಮಾನವ ಆಹಾರವನ್ನು ಜೀರ್ಣಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಅವುಗಳು ಸಾಯಬಹುದು. ಅದಕ್ಕಾಗಿಯೇ ಅವರಿಗೆ ನಿಗದಿತ ಆಹಾರವನ್ನು ನೀಡಬೇಕು. ನೀವು ಇತರ ಆಹಾರಗಳನ್ನು ಹಾಗೆ ಹಾಕಿದರೆ, ಅವುಗಳ ಆರೋಗ್ಯ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು. ಈಗ ಅಮೆರಿಕದ ಕೆನಲ್ ಕ್ಲಬ್ ಸಮೀಕ್ಷೆಯ ಪ್ರಕಾರ ಸಾಕುನಾಯಿಗಳು ತಿನ್ನಬಾರದ ಆಹಾರಗಳ ಬಗ್ಗೆ ಹೇಳಲಾಗಿದೆ. ಹಾಗಿದ್ರೆ ಸಾಕು ನಾಯಿಗಳು ತಿನ್ನಬಾರದಂತಹ ಆಹಾರಗಳು ಯಾವುದೆಲ್ಲಾ ಎಂದು ಈ ಲೇಖನದಲ್ಲಿ ತಿಳಿಯೋಣ.