Curd: ಈ ಪದಾರ್ಥಗಳನ್ನು ಅಪ್ಪಿತಪ್ಪಿಯೂ ಮೊಸರಿನೊಂದಿಗೆ ತಿನ್ನಬೇಡಿ!
ಮೊಸರನ್ನು ಬಹುತೇಕರು ಇಷ್ಟಪಡುತ್ತಾರೆ. ಕೆಲವರಿಗೆ ಮೊಸರಿಲ್ಲದಿದ್ದರೆ ಊಟ ಅಪೂರ್ಣ ಅನಿಸುತ್ತೆ. ಈ ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ2, ವಿಟಮಿನ್ ಬಿ 12, ಮೆಗ್ನೀಷಿಯಂ, ಪೊಟ್ಯಾಷಿಯಂನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಆದರೆ ಮೊಸರನ್ನು ಕೆಲವು ಆಹಾರಗಳೊಂದಿಗೆ ಬೆರೆಸಿ ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಹಾಗಿದ್ರೆ ಯಾವ ಆಹಾರಗಳ ಜೊತೆ ಮೊಸರನ್ನು ಸೇವಿಸಬಾರದು ಎಂದು ನೋಡೋಣ.
ಮೊಸರು ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ. ಆದರೆ ಮೊಸರನ್ನು ಕೆಲವು ಆಹಾರಗಳೊಂದಿಗೆ ತಿನ್ನಬಾರದು ಎಂಬುದು ಹಲವರಿಗೆ ತಿಳಿದಿಲ್ಲ. ಇದನ್ನು ಆ ಆಹಾರಗಳೊಂದಿಗೆ ಬೆರೆಸಿ ತಿಂದರೆ ನಿಮಗೆ ಅನೇಕ ಆರೋಗ್ಯ ತೊಂದರೆಗಳು ಉಂಟಾಗಬಹುದು. ಹೀಗಾಗಿ ತಿನ್ನುವ ಮುನ್ನ ಮುನ್ನೆಚ್ಚರಿಕೆ ವಹಿಸಿ.
2/ 11
ಬಿರಿಯಾನಿ ಜೊತೆ ಮೊಸರು ಬಜ್ಜಿ/ರಾಯತ ಕಾಂಬಿನೇಷನ್ ತಪ್ಪಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ಮೊಸರು ತಣ್ಣಗಿರುತ್ತದೆ. ಈರುಳ್ಳಿ ಶಾಖವನ್ನು ಹೊಂದಿರುವ ಪದಾರ್ಥ. ತದ್ವಿರುದ್ಧ ಗುಣಗಳನ್ನು ಹೊಂದಿರುವ ಈರುಳ್ಳಿ & ಮೊಸರನ್ನು ಬೆರೆಸಿ ತಿನ್ನುವುದರಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು.
3/ 11
ಮಾವಿನ ಹಣ್ಣಿನ ಜೊತೆ ಎಂದಿಗೂ ಮೊಸರು ತಿನ್ನಬೇಡಿ. ಮಾವು ಕೂಡ ಈರುಳ್ಳಿಯಂತೆಯೇ ಶಾಖವನ್ನು ಉತ್ಪಾದಿಸುವ ಹಣ್ಣು. ಹಾಗಾಗಿ ಇದನ್ನು ಮೊಸರಿನ ಜೊತೆ ತಿನ್ನಬೇಡಿ.
4/ 11
ಹಾಲಿನ ಜೊತೆ ಮೊಸರನ್ನು ಮಿಕ್ಸ್ ಮಾಡಬೇಡಿ. ಮೊಸರು ಹಾಲಿನಿಂದಲೇ ರೂಪುಗೊಂಡರೂ ಸಹ ಎರಡನ್ನೂ ಒಟ್ಟಿಗೆ ತಿನ್ನಬಾರದು. ಹಾಗೇನಾದರೂ ತಿಂದರೆ ಅಸಿಡಿಟಿ ಮತ್ತು ಅತಿಸಾರ ಉಂಟಾಗಬಹುದು.
5/ 11
ಮೊಟ್ಟೆಯ ಜೊತೆ ಮೊಸರನ್ನು ತಿನ್ನಬೇಡಿ. ಮೀನು ಮತ್ತು ಮೊಟ್ಟೆಗಳೆರಡೂ ಹೆಚ್ಚು ಪ್ರೋಟೀನ್ ಇರುವ ಆಹಾರಗಳಾಗಿವೆ. ಹಾಗಾಗಿ ಎರಡನ್ನೂ ಒಂದೇ ಸಲ ತಿನ್ನಬಾರದು. ಇದರಿಂದ ಅಜೀರ್ಣ ಮತ್ತು ಹೊಟ್ಟೆನೋವಿನಂತಹ ಸಮಸ್ಯೆಗಳು ಉಂಟಾಗುತ್ತವೆ. ಅದೇ ರೀತಿ ಮೊಸರಿನೊಂದಿಗೆ ಪ್ರೋಟೀನ್ ಹೇರಳವಾಗಿರುವ ಮೊಟ್ಟೆಗಳನ್ನು ತಿನ್ನಬಾರದು.
6/ 11
ಕಡಲೆಕಾಯಿ ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದರಿಂದ ಜೀರ್ಣ ಸಮಸ್ಯೆಗಳು ಉಂಟಾಗುತ್ತವೆ. ಹೊಟ್ಟೆಯುಬ್ಬರ ಮತ್ತು ಅತಿಸಾರಕ್ಕೂ ಕಾರಣವಾಗುತ್ತದೆ.
7/ 11
ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಮೊಸರಿನ ಜೊತೆಗೆ ತಿನ್ನಬಾರದು. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ದೈಹಿಕ ಅಸ್ವಸ್ಥತೆಗಳನ್ನು ಉಂಟುಮಾಡುತ್ತದೆ.
8/ 11
ಮೊಸರು ತಿನ್ನಲು ಮಧ್ಯಾಹ್ನ ಉತ್ತಮ ಸಮಯ. ರಾತ್ರಿಯಲ್ಲಿ ಮೊಸರು ತಿನ್ನುವುದನ್ನು ತಪ್ಪಿಸಿ. ರಾತ್ರಿ ಸಮಯ ಮೊಸರು ತಿನ್ನಬೇಕು ಅನಿಸಿದರೆ, ನೀವು ಮೊಸರಿಗೆ ಸ್ವಲ್ಪ ಸಕ್ಕರೆ ಅಥವಾ ಸ್ವಲ್ಪ ಕಾಳುಮೆಣಸಿನ ಪುಡಿ ಹಾಕಿ ತಿನ್ನಬಹುದು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
9/ 11
ಮುಖ್ಯವಾಗಿ ಬಾಳೆಹಣ್ಣನ್ನು ಮೊಸರಿನೊಂದಿಗೆ ತಿನ್ನಬಾರದು.
10/ 11
ಅದೇ ರೀತಿ ಮೊಸರನ್ನು ಚೀಸ್ ನೊಂದಿಗೆ ತಿನ್ನಬಾರದು.
11/ 11
ಮೊಸರಿನೊಂದಿಗೆ ಡ್ರೈ ಫ್ರೂಟ್ಸ್ ತಿನ್ನಬಾರದು. ಈ ಎರಡರಲ್ಲೂ ಹೆಚ್ಚಿನ ಪ್ರೊಟೀನ್ ಇದ್ದು ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡುತ್ತದೆ. ( ಹಕ್ಕು ನಿರಾಕರಣೆ : ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಪರಿಶೀಲಿಸಿಲ್ಲ. ಯಾವುದೇ ಪುರಾವೆಗಳಿಲ್ಲ.)