Christmas Decoration: ಈ ಕ್ರಿಸ್ಮಸ್ಗೆ ಮನೆಯನ್ನು ಅಂದಗೊಳಿಸುವ ಸೂಪರ್ ಐಡಿಯಾಗಳು ಇಲ್ಲಿದೆ
Christmas Decoration Idea: ಕ್ರಿಸ್ಮಸ್ ಹತ್ತಿರ ಬರುತ್ತಿದೆ. ನಿಮ್ಮ ಸೃಜನಶೀಲತೆಯನ್ನು ಬೆಳಗಿಸುವ ಸಮಯ ಎಂದರೆ ತಪ್ಪಾಗಲಾರದು. ಈ ವರ್ಷ ನಿಮ್ಮ ಮನೆಯನ್ನು ವಿಭಿನ್ನವಾಗಿ ಅಲಂಕಾರ ಮಾಡುವ ಮೂಲಕ ಹಬ್ಬ ಆಚರಿಸಿ. ನಿಮ್ಮ ಮನೆಯ ಪ್ರತಿಯೊಂದು ಮೂಲೆಯಲ್ಲಿಯೂ ನೀವು ವಿಭಿನ್ನತೆಯನ್ನು ಸೇರಿಸಬಹುದು. ಈ ಕ್ರಿಸ್ಮಸ್ಗೆ ಮನೆಯನ್ನು ಹೇಗೆ ಡೆಕೋರೇಟ್ ಮಾಡಬಹುದು ಎಂಬ ಐಡಿಯಾ ಇಲ್ಲಿದೆ.
ಈ ಹಬ್ಬದ ಸಮಯದಲ್ಲಿ ಮನೆಗೆ ಬರುವ ಅತಿಥಿಗಳನ್ನು ವಿಭಿನ್ನವಾಗಿ ಸ್ವಾಗತಿಸುವುದು ಹೊಸ ಟ್ರೆಂಡ್ ಆಗಿದೆ. ಅದಕ್ಕೆ ನೀವು ಮನೆಯ ಎಂಟ್ರಿಯ ಬಳಿ ಒಂದು ಟೇಬಲ್ ಮೇಲೆ ಕ್ಯಾಂಡಲ್ಗಳನ್ನು ಹಚ್ಚಿ ಒಂದು ಬೋರ್ಟ್ ಮೇಲೆ ವೆಲ್ಕಂ ಮೆಸೇಜ್ ಅನ್ನು ನೀವೇ ಬರೆದರೆ ವಿಶೇಷವಾಗಿರುತ್ತದೆ.
2/ 10
ಇದು ವರ್ಷದ ದೊಡ್ಡ ಹಬ್ಬವಾಗಿರುವುದರಿಂದ ಮನೆದ ಮಂದಿಯಲ್ಲಾ ಸೇರಿ ಆಚರಣೆ ಮಾಡುತ್ತಾರೆ. ಈ ಸಮಯದಲ್ಲಿ ಕ್ರಿಸ್ಮಸ್ ಟ್ರೀ ಇದ್ದೇ ಇರುತ್ತದೆ. ಆ ಟ್ರೀ ಮೇಲೆ ಕೆಲ ರಿಬ್ಬನ್ ಉಡುಗೊರೆಗಳನ್ನು ಅಂಟಿಸಿ, ಸಣ್ಣ ಮಕ್ಕಳಿಗೆ ಉಡುಗೊರೆ ನೀಡಿ.
3/ 10
ಬಲೂನ್ ಇಲ್ಲದೇ ಡೆಕೋರೇಷನ್ ಸಾಧ್ಯವೆ ಇಲ್ಲ. ಹಾಗಾಗಿ ವಿಭಿನ್ನ ರೀತಿಯ ಬಲೂನ್ಗಳನ್ನು ಗೋಡೆಯ ಮೇಲೆ ಅಥವಾ ಸೀಲಿಂಗ್ ಮೇಲೆ ಕಟ್ಟಿ ಸಿಂಗರಿಸಿ,.
4/ 10
ಮನೆಯಲ್ಲಿನ ಸದಸ್ಯರಿಗೆ ಅನುಗುಣವಾಗಿ ಒಂದು ಕ್ಯಾಲೆಂಡರ್ ತಯಾರಿಸಿ, ಅವರು ಹೆಸರಿನ ಮೊದಲಾಕ್ಷರದ ಅನುಸಾರ ಬರೆದು ಅದರಲ್ಲಿ ಸಣ್ಣ ಗಿಫ್ಟ್ ಇಟ್ಟು ಸಂಭ್ರದಿಂದ ಆಚರಿಸಿ. ಇದನ್ನು ಕ್ರಿಸ್ಮಸ್ ಟ್ರಿ ಪಕ್ಕ ಇಟ್ಟರೆ ಹೆಚ್ಚು ಸುಂದರವಾಗಿ ಕಾಣುತ್ತದೆ.
5/ 10
ಇನ್ನು ನಿಮ್ಮ ಮನೆಯ ಶೆಲ್ಫ್ಗಳನ್ನು ಸುಂದರವಾಗಿ ತಯಾರಾದ ಗಿಫ್ಟ್ ಬಾಕ್ಸ್ಗಳು ಅಥವಾ ಹೂವಿನ ವಸ್ತುಗಳಿಂದ ಅಲಂಕರಿಸಿ. ಪ್ರತಿದಿನ ಇರುವ ವಸ್ತುಗಳ ಬದಲಿಗೆ ಹೊಸತನವಿದ್ದರೆ ಸುಂದರವಾಗಿ ಕಾಣುತ್ತದೆ.
6/ 10
ಮನೆಯ ಒಂದು ಗೋಡೆಯ ಮೇಲೆ ಗಿಫ್ಟ್ ಕಾರ್ಡ್ಗಳನ್ನು ಬಳಸಿ ಕ್ರಿಸ್ಮಸ್ ಟ್ರೀ ಚಿತ್ರ ಬಿಡಿಸಿ. ಇಲ್ಲವೇ ನೀವೇ ಹೊಸ ರೀತಿಯ ಕಾರ್ಡ್ಗಳನ್ನು ತಯಾರಿಸಿ ಬಳಸಬಹುದು.
7/ 10
ಹಬ್ಬದ ದಿನ ಎಲ್ಲಾವೂ ನ್ಯಾಚುರಲ್ ಆಗಿದ್ರೆ ಚಂದ. ಆದಷ್ಟು ಹೂವುಗಳನ್ನು ಬಳಸಿ ಅಲಂಕಾರ ಮಾಡಿ. ಅಲ್ಲದೇ ಸುಗಂಧ ಭರಿತ ಕ್ಯಾಂಡಲ್ಗಳನ್ನು ಬಳಕೆ ಮಾಡಿದರೆ ಇನ್ನು ಚನ್ನಾಗಿರುತ್ತದೆ.
8/ 10
ಇನ್ನು ನಿಮ್ಮ ಬೆಡ್ಗಳ ಬಳಿ ಸಹ ಹೂವು ಅಥವಾ ಎಲೆಗಳ ಹಾರವನ್ನು ತಯಾರಿಸಿ ಕಟ್ಟಿದರೆ ಅದೇನೋ ಹೊಸ ಲುಕ್ ನೀಡುವುದರಲ್ಲಿ ಅನುಮಾನವಿಲ್ಲ.
9/ 10
ಇನ್ನು ಕ್ರಿಸ್ಮಸ್ ಟ್ರೀ ಅನ್ನು ನಿಮಗೆ ಬೇಕಾದ ಹಾಗೆ ಅಲಂಕಾರ ಮಾಡಬಹುದು. ನೀವು ಕ್ರಿಸ್ಮಸ್ ಟ್ರೀ ಮೇಲೆ ಗಿಫ್ಟ್ ಇಡುವುದು ಸಾಮಾನ್ಯ ಅದರ ಬದಲು ಬೇರೆ ವಸ್ತುಗಳನ್ನು ಬಳಕೆ ಮಾಡಿ. ಕ್ಯಾಂಡಿಗಳನ್ನು ಬಳಕೆ ಮಾಡಿ.
10/ 10
ಆಹಾರದ ವಿಚಾರದಲ್ಲಿ ಸಹ ನಿಮ್ಮ ಡೈನಿಂಗ್ ಟೇಬಲ್ ಮೇಲೆ ಅಲಂಕಾರ ಮಾಡುವಾಗ ಆಕರ್ಷಣೀಯವಾಗಿರಲಿ. ಆಹಾರಗಳ ತಟ್ಟೆ ಅಥವಾ ಪಾತ್ರೆ ಅದನ್ನು ಇಡುವಾಗ ಸುಂದರವಾದ ಹಾರಗಳನ್ನು ಹಾಕಿ ಅಲಂಕಾರ ಮಾಡಿ. ಗಿಫ್ಟ್ ಕಾರ್ಡ್ಗಳನ್ನು ಇಡಿ.