DIY Hair Masks With Curd: ಕೂದಲ ಆರೈಕೆ ಮಾಡುವುದು ನಿಜಕ್ಕೂ ಬಹಳ ಕಷ್ಟಕರ. ಯಾವುದೇ ವಸ್ತುಗಳನ್ನು ಬಳಸುವಾಗ ಎಚ್ಚರದಿಂದ ಇರಬೇಕು. ಸುಮ್ಮನೆ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುವ ಬದಲು ಮನೆಯಲ್ಲಿ ಕೇವಲ ಮೊಸರಿನಿಂದ ಸುಂದರ ಕೂದಲು ನಿಮ್ಮದಾಗಿಸಿಕೊಳ್ಳಬಹುದು. ಅದು ಹೇಗೆ ಎಂಬುದು ಇಲ್ಲಿದೆ.
ಮೊಸರು ಮತ್ತು ನಿಂಬೆ ಮೊಸರು ಮತ್ತು ನಿಂಬೆಯ ಮ್ಯಾಜಿಕ್ ಬಗ್ಗೆ ನಾವು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಈ ಹೇರ್ ಮಾಸ್ಕ್ ನಿಮ್ಮ ಕೂದಲು ಉದುರುವ ಸಮಸ್ಯೆಗೆ ಪರಿಹಾರ ನೀಡುತ್ತದೆ. ಸ್ವಲ್ಪ ಮೊಸರಿಗೆ, ಅರ್ಧ ನಿಂಬೆಹಣ್ಣು ಹಾಕಿ ಮಿಶ್ರಣ ಮಾಡಿ,ಕೂದಲಿಗೆ ಹಚ್ಚಿ.
2/ 8
ಮೊಸರು ಮತ್ತು ಮೊಟ್ಟೆ ಅರ್ಧ ಕಪ್ ಮೊಸರು ತೆಗೆದುಕೊಂಡು, ಅದಕ್ಕೆ ಮೊಟ್ಟೆಯ ಹಳದಿ ಭಾಗವನ್ನು ಹಾಕಿ ಮಿಶ್ರಣ ಮಾಡಿ. ನಿಮಗೆ ಬೇಕಾದ ಹದಕ್ಕೆ ಪೇಸ್ಟ್ ತಯಾರಿಸಿಕೊಂಡು ತಲೆಗೆ ಹಚ್ಚಿ ಬಿಡಿ. ಸುಮಾರು 1 ಗಂಟೆಯ ನಂತರ ತಲೆಸ್ನಾನ ಮಾಡಿ.
3/ 8
ಮೊಸರು ಮತ್ತು ಈರುಳ್ಳಿ ರಸಹಾಗೂ ಮೆಂತ್ಯೆ 4 ಚಮಚ ಮೊಸರು, ಒಂದು ಚಮಚ ಮೆಂತ್ಯ ಪುಡಿ ಮತ್ತು 3 ಚಮಚ ಈರುಳ್ಳಿ ರಸವನ್ನು ಒಂದು ಬಟ್ಟಲಿನಲ್ಲಿ ಹಾಕಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ತಲೆಗೆ ಸರಿಯಾಗಿ ಹಚ್ಚಿ. ನೆತ್ತಿಯ ಮೇಲೆ ಮಾಸ್ಕ್ ರೀತಿ ಹಚ್ಚಿ ಬಿಡಿ. ಅರ್ಧ ಗಂಟೆಯ ನಂತರ ತೊಳೆಯಿರಿ.
4/ 8
ಮೊಸರು ಮತ್ತು ಆವಕಾಡೋ ಅರ್ಧ ಕಪ್ ಮೊಸರಿಗೆ, ಅರ್ಧ ಆವಕಾಡೋ ಪೇಸ್ಟ್ ಮಾಡಿಕೊಂಡು ಹಾಕಿ ಮಿಶ್ರಣ ಮಾಡಿ. ಇದಕ್ಕೆ 1 ಚಮಚ ಜೇನುತುಪ್ಪ ಹಾಗೂ 1 ಚಮಚ ತೆಂಗಿನ ಎಣ್ಣೆ ಹಾಕಿ ಕಲಸಿ, ತಲೆಗೆ ಹಚ್ಚಿಕೊಳ್ಳಿ.
5/ 8
ಮೊಸರು ಮತ್ತು ಮೆಹೆಂದಿ ಮೆಹೆಂದಿ ಪೌಡರ್ ನಿಮ್ಮ ಕೂದಲಿಗೆ ಕಲರ್ ನೀಡುವುದು ಮಾತ್ರವಲ್ಲದೇ ಕೂದಲು ಉದುರದಂತೆ ತಡೆಯಲು ಸಹ ಸಹಾಯ ಮಾಡುತ್ತದೆ. ಮೊಸರಿಗೆ ಸ್ವಲ್ಪ ಮೆಹೆಂದಿ ಪೌಡರ್ ಹಾಗೂ ಸಾಸಿವೆ ಎಣ್ಣೆ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಆ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ, 1 ಗಂಟೆಯ ನಂತರ ತೊಳೆಯಿರಿ.
6/ 8
ಮೊಸರು ಮತ್ತು ಆಲಿವ್ ಎಣ್ಣೆ ಮೊಸರಿನ ಜೊತೆಗೆ ಸ್ವಲ್ಪ ಆಲಿವ್ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ, ಇದಕ್ಕೆ ಕಡಲೆಹಿಟ್ಟು ಹಾಕಿ ಮತ್ತೊಮ್ಮೆ ಗಂಟು ಗಂಟಾಗದಂತೆ ಕಲಸಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿ, ನಂತರ ತಣ್ಣನೆಯ ನೀರಿನಿಂದ ಸ್ನಾನ ಮಾಡಿ.
7/ 8
ಮೊಸರು ಮತ್ತು ಆ್ಯಪಲ್ ಸೈಡರ್ ವಿನೆಗರ್ ಆ್ಯಪಲ್ ಸೈಡರ್ ವಿನೆಗರ್ ತೂಕ ಇಳಿಸಲು ಮಾತ್ರವಲ್ಲದೇ ಕೂದಲ ಆರೋಗ್ಯಕ್ಕೆ ಸಹ ಉತ್ತಮ. ಮೊಸರಿನ ಜೊತೆ ಸ್ವಲ್ಪ ಆ್ಯಪಲ್ ಸೈಡರ್ ವಿನೆಗರ್ ಹಾಗೂ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ.
8/ 8
ಮೊಸರು ಮತ್ತು ರೋಸ್ಮರಿ ರೋಸ್ಮರಿಯು ಕಾರ್ನೋಸೋಲ್ ಎಂಬ ಉರಿಯೂತದ ಏಜೆಂಟ್ ಅನ್ನು ಹೊಂದಿದೆ ತಲೆಹೊಟ್ಟು ಹೋಗಲಾಡಿಸಲು ಸಹಾಯ ಮಾಡುತ್ತದೆ. ಸ್ವಲ್ಪ ಮೊಸರಿಗೆ ಅರ್ಧ ನಿಂಬೆಹಣ್ಣು ಹಿಂಡಿ ಮತ್ತು ರೋಸ್ಮರಿ ಸಾರಭೂತ ತೈಲದ ಎರಡು ಹನಿಗಳನ್ನು ಹಾಕಿ, ತಲೆಗೆ ಹಚ್ಚಿ.