DIY Hacks: ಕೈಗಳ ಬಗ್ಗೆಯೂ ಇರಲಿ ಕಾಳಜಿ, ಮನೆಯಲ್ಲೇ ತಯಾರಿಸಿ ಈ ಮಾಸ್ಕ್
DIY Hand Mask: ನಾವು ತ್ವಚೆಯ ಆರೈಕೆಯ ವಿಚಾರಕ್ಕೆ ಬಂದಾಗ ಕೇವಲ ಮುಖದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೇವೆ. ಕೈಗಳ ಬಗ್ಗೆ ಸಹ ನಾವು ಗಮನಕೊಡಬೇಕು. ನಿಮ್ಮ ಕೈಗಳ ತ್ವಚೆಯ ಅಂದ ಹೆಚ್ಚಿಸುವ ಕೆಲ ಮಾಸ್ಕ್ಗಳು ಇಲ್ಲಿದ್ದು, ಮನೆಯಲ್ಲಿಯೇ ಇದನ್ನು ಮಾಡಬಹುದು.
ನಿಮ್ಮ ಕೈಗಳ ತ್ವಚೆಯ ಆರೈಕೆ ಮಾಡಲು ಆವಕಾಡೊ ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಬಿ ಸಮೃದ್ಧವಾಗಿದ್ದು, ಇದು ಒಣ ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಇದರ ಮಾಸ್ಕ್ ನಿಮ್ಮ ಕೈಗಳ ಅಂದ ಹೆಚ್ಚಿಸುತ್ತದೆ.
2/ 8
ಮಾಸ್ಕ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು: ಈ ಮಾಸ್ಕ್ ತಯಾರಿಸಲು ನಿಮಗೆ ಹೆಚ್ಚು ವಸ್ತುಗಳು ಸಹ ಬೇಕಿಲ್ಲ. ಆವಕಾಡೊ 1 ತಿರುಳು, 2 ಟೀಸ್ಪೂನ್ ಮೊಸರು, 2 ಟೀಸ್ಪೂನ್. ಜೇನುತುಪ್ಪ 1ಟೇಬಲ್ ಸ್ಪೂನ್ ಆಲಿವ್ ಎಣ್ಣೆ , ಪೇಪರ್ ಟವೆಲ್
3/ 8
ಮಾಸ್ಕ್ ಮಾಡುವ ವಿಧಾನ: ಮೇಲೆ ನೀಡಿರುವ ಎಲ್ಲಾ ವಸ್ತುಗಳನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಆ ಮಿಶ್ರಣವನ್ನು ನಿಮ್ಮ ಕೈಗಳಿಗೆ ಹಚ್ಚಿ. ನಂತರ ಟವೆಲ್ ಅನ್ನು ಸುತ್ತಿ ಬಿಡಿ. ಸುಮಾರು 20 ನಿಮಿಷಗಳ ನಂತರ ತೊಳೆಯಿರಿ.
4/ 8
ತೆಂಗಿನ ಎಣ್ಣೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳು ಸಮೃದ್ಧವಾಗಿದ್ದು, ಚರ್ಮದ ನೈಸರ್ಗಿಕ ಪಿಎಚ್ ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತದೆ. ಅಲ್ಲದೇ ಇದು ನಿಮ್ಮ ದೇಹದ ತೇವಾಂಶವನ್ನು ಸಹ ಕಾಪಾಡಿಕೊಳ್ಳಲು ಸಹ ಮುಖ್ಯವಾಗುತ್ತದೆ.
5/ 8
ತೆಂಗಿನ ಎಣ್ಣೆಯ ಮಾಸ್ಕ್ ಮಾಡುವುದು ಬಹಳ ಸುಲಭ, ಇದಕ್ಕೆ ಕೇವಲ ಮೂರು ಪದಾರ್ಥಗಳು ಮಾತ್ರ ಸಾಕು. ತೆಂಗಿನ ಎಣ್ಣೆ ಮಾಸ್ಕ್ ಮಾಡಲು ಬೇಕಾಗುವ ಸಾಮಾಗ್ರಿಗಳು: 1 ಟೇಬಲ್ ಸ್ಪೂನ್ ತೆಂಗಿನ ಎಣ್ಣೆ, ½ ಟೇಬಲ್ ಸ್ಪೂನ್ ಶಿಯಾ ಬೆಣ್ಣೆ, ಪೇಪರ್ ಟವೆಲ್
6/ 8
ಶಿಯಾ ಬೆಣ್ಣೆಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದಕ್ಕೆ ಒಂದು ಚಮಚ ತೆಂಗಿನ ಎಣ್ಣೆ ಹಾಕಿ ಮಿಶ್ರಣ ಮಾಡಿ. ಇದನ್ನು ನಿಮಗೆ ಬೇಕಾದ ಹದಕ್ಕೆ ಪೇಸ್ಟ್ ಮಾಡಿಕೊಳ್ಳಿ. ನಂತರ ಈ ಮಿಶ್ರಣವನ್ನು ಕೈಗೆ ಹಚ್ಚಿ ಟವೆಲ್ ಸುತ್ತಿ. ಸುಮಾರು 15 ನಿಮಿಷಗಳ ಕಾಲ ನಂತರ ತೊಳೆಯಿರಿ.
7/ 8
ಕ್ಯಾರೆಟ್ನಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು, ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಇದು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾಸ್ಕ್ ಮಾಡಲು ಬೇಕಾಗುವ ಪದಾರ್ಥಗಳು: ಕ್ಯಾರೆಟ್, 1 ಟೀಸ್ಪೂನ್. ಜೇನುತುಪ್ಪ.
8/ 8
ಮೊದಲು ಕ್ಯಾರೆಟ್ ಅನ್ನು ಸಿಪ್ಪೆ ಸುಲಿದು ಬಿಸಿ ನೀರಿನಲ್ಲಿ ಕಾಯಿಸಿ. ಕ್ಯಾರೆಟ್ ಚೆನ್ನಾಗಿ ಬೆಂದ ನಂತರ ಅದನ್ನು ಪೇಸ್ಟ್ ಮಾಡಿಕೊಳ್ಳಿ. ಆ ಪೇಸ್ಟ್ಗೆ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ. ಇದನ್ನು ಕೈಗಳಿಗೆ ಹಚ್ಚಿ 2 ನಿಮಿಷದ ನಂತರ ತೊಳೆಯಿರಿ. ತೊಳೆದ ನಂತರ ಮಾಯಿಶ್ಚರೈಸರ್ ಹಚ್ಚಿ.