ಫ್ರೆಂಚ್ ಕಿಸ್: ಚುಂಬನಗಳಲ್ಲಿಯೇ ಅತಿ ಅಪ್ಯಾಯಮಾನವಾದ ಬಗೆ ಎಂದರೆ ತುಟಿಗಳಿಗೆ ತುಟಿ ತಾಕಿಸಿ ನೀಡುವ ಚುಂಬನ. ಈ ರೀತಿಯ ಚುಂಬನವನ್ನು ಗಾಢವಾದ ಪ್ರೀತಿಯನ್ನು ಹೊಂದಿರುವವರು ಮಾತ್ರ ನೀಡಲು ಸಾಧ್ಯ. ಕೇವಲ ತುಟಿಗಳ ಹೊರತಾಗಿ ನಾಲಿಗೆಗಳೂ ಪರಸ್ಪರ ಸ್ಪರ್ಶಿಸಿ ಪ್ರೀತಿಯ ಉತ್ಕಟ ಭಾವನೆಯನ್ನು ಪ್ರಕಟಿಸುವುದು ಈ ಚುಂಬನದ ಮಹತ್ವವಾಗಿದೆ. ಇಬ್ಬರ ನಡುವೆ ಈ ಚುಂಬನ ಅತ್ಯಂತ ಭಾವನಾತ್ಮಕ ಸಂದೇಶವನ್ನು ನೀಡುವ ಜೊತೆಗೇ ಇನ್ನಷ್ಟು ಬೇಕು ಎಂಬಷ್ಟು ಮಾದಕವೂ ಆಗಿರುತ್ತದೆ.