No Diet Day: ಡಯೆಟ್​ನಲ್ಲಿದಾಗ ಮಾಡುವ ಈ ತಪ್ಪುಗಳೇ ತೂಕ ಹೆಚ್ಚಳಕ್ಕೆ ಕಾರಣ!

ಡಯಟ್ ನಿಂದಾಗಿ ಎಷ್ಟೇ ನೆಚ್ಚಿನ ಆಹಾರವಿದ್ದರೂ ತಿನ್ನದೇ ಪಥ್ಯ ಮಾಡುತ್ತಾರೆ. ಹೀಗಾಗಿ ಪ್ರತೀ ವರ್ಷ ಮೇ 6ನ್ನು ಅಂತಾರಾಷ್ಟ್ರೀಯ ಡಯಟಿಂಗ್ ರಹಿತ ದಿನವನ್ನಾಗಿ ಆಚರಣೆ ಮಾಡ್ತಾರೆ. ಇದು ನಿಮ್ಮ ರುಚಿಯನ್ನು ತಣಿಸುತ್ತದೆ. ಇಷ್ಟವಾದ ಆಹಾರ ಸೇವಿಸುವುದು ತಪ್ಪಲ್ಲ. ಆದರೆ ಆರೋಗ್ಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇಷ್ಟದ ಆಹಾರ ಸೇವಿಸುವಾಗ ನೀವು ಮಾಡುವ ಕೆಲವು ತಪ್ಪುಗಳು ನಿಮ್ಮ ಆರೋಗ್ಯ ಹಾಳು ಮಾಡುತ್ತವೆ.

First published:

  • 18

    No Diet Day: ಡಯೆಟ್​ನಲ್ಲಿದಾಗ ಮಾಡುವ ಈ ತಪ್ಪುಗಳೇ ತೂಕ ಹೆಚ್ಚಳಕ್ಕೆ ಕಾರಣ!

    ಇತ್ತೀಚಿನ ದಿನಗಳಲ್ಲಿ ಜನರು ಬಾಡಿ ಶೇಮಿಂಗ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತೂಕಕ್ಕಿಂತ ಹೆಚ್ಚು ಫಿಟ್‌ನೆಸ್‌ ನತ್ತ ಗಮನ ಹರಿಸುವುದು ಮುಖ್ಯ. ದೇಹದ ಗಾತ್ರ ಮತ್ತು ತೂಕದ ಮೇಲೆ ಯಾವುದೇ ಸಾಮಾಜಿಕ ಮಿತಿ ಇರಬಾರದು. ಆದರೆ ಇಂದಿನ ದಿನಗಳಲ್ಲಿ ತುಂಬಾ ಜನರು ಡಯಟ್ ಗೆ ಅಂಟಿಕೊಳ್ತಿದ್ದಾರೆ.

    MORE
    GALLERIES

  • 28

    No Diet Day: ಡಯೆಟ್​ನಲ್ಲಿದಾಗ ಮಾಡುವ ಈ ತಪ್ಪುಗಳೇ ತೂಕ ಹೆಚ್ಚಳಕ್ಕೆ ಕಾರಣ!

    ಡಯಟ್ ನಿಂದಾಗಿ ಎಷ್ಟೇ ನೆಚ್ಚಿನ ಆಹಾರವಿದ್ದರೂ ತಿನ್ನದೇ ಪಥ್ಯ ಮಾಡುತ್ತಾರೆ. ಹೀಗಾಗಿ ಪ್ರತೀ ವರ್ಷ ಮೇ 6ನ್ನು ಅಂತಾರಾಷ್ಟ್ರೀಯ ಡಯಟಿಂಗ್ ರಹಿತ ದಿನವನ್ನಾಗಿ ಆಚರಣೆ ಮಾಡ್ತಾರೆ.ಇಷ್ಟವಾದ ಆಹಾರ ಸೇವಿಸುವುದು ತಪ್ಪಲ್ಲ. ಆದರೆ ಆರೋಗ್ಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇಷ್ಟದ ಆಹಾರ ಸೇವಿಸುವಾಗ ನೀವು ಮಾಡುವ ಕೆಲವು ತಪ್ಪುಗಳು ನಿಮ್ಮ ಆರೋಗ್ಯ ಹಾಳು ಮಾಡುತ್ತವೆ.

    MORE
    GALLERIES

  • 38

    No Diet Day: ಡಯೆಟ್​ನಲ್ಲಿದಾಗ ಮಾಡುವ ಈ ತಪ್ಪುಗಳೇ ತೂಕ ಹೆಚ್ಚಳಕ್ಕೆ ಕಾರಣ!

    ಜನರು ತಮ್ಮ ಅಳತೆಗೆ ಅನುಗುಣವಾಗಿ ದೇಹದ ಗಾತ್ರ ಮತ್ತು ತೂಕದ ಮಿತಿ ಕಾಪಾಡಬೇಕು. ಇದು ವ್ಯಕ್ತಿಯು ಆರೋಗ್ಯನಾಗಿರಲು ಸಹಕಾರಿ. ಆಹಾರ ಡಯಟ್ ಮಾಡುತ್ತೇನೆಂದು ಹೇಳಿ, ಉತ್ತಮ ಆಹಾರದ ಬದಲು ಉಪವಾಸ ಮಾಡಿ, ಸಂಜೆ ಜಂಕ್ ಫುಡ್ ತಿನ್ನುವುದು ಸರಿಯಲ್ಲ. ಇದು ಮುಖ್ಯ ತಪ್ಪು. ನಿಮಗೆ ನೀವೇ ಚೀಟ್ ಮಾಡಿಕೊಂಡು, ಅನಾರೋಗ್ಯಕರ ಆಹಾರ ತಿನ್ನುವುದು ಸಂಪೂರ್ಣವಾಗಿ ತಪ್ಪು. ಇದು ಬೊಜ್ಜು, ಅನಾರೋಗ್ಯಕ್ಕೆ ಕಾರಣವಾಗುತ್ತದೆ.

    MORE
    GALLERIES

  • 48

    No Diet Day: ಡಯೆಟ್​ನಲ್ಲಿದಾಗ ಮಾಡುವ ಈ ತಪ್ಪುಗಳೇ ತೂಕ ಹೆಚ್ಚಳಕ್ಕೆ ಕಾರಣ!

    ತೂಕ ನಷ್ಟಕ್ಕಾಗಿ ಡಯಟ್ ಹಾಕಿಕೊಂಡು, ಅದನ್ನು ಸರಿಯಾಗಿ ಫಾಲೋ ಮಾಡದೆ, ಸದಾ ಹೊರಗಿನ ಜಂಕ್ ಫುಡ್ ಮತ್ತು ಸಕ್ಕರೆ ಮತ್ತು ಇತರ ಅನಾರೋಗ್ಯಕರ ಆಹಾರ ಸೇವಿಸುವುದು ನಿಮ್ಮ ಆಹಾರಕ್ರಮಕ್ಕೆ ಸೂಕ್ತವಲ್ಲ. ಇದು ತೂಕ ನಷ್ಟದ ಬದಲು ತೂಕ ಹೆಚ್ಚಿಸುತ್ತದೆ. ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ.

    MORE
    GALLERIES

  • 58

    No Diet Day: ಡಯೆಟ್​ನಲ್ಲಿದಾಗ ಮಾಡುವ ಈ ತಪ್ಪುಗಳೇ ತೂಕ ಹೆಚ್ಚಳಕ್ಕೆ ಕಾರಣ!

    ಚೀಟ್ ಊಟದ ಸಮಯದಲ್ಲಿ ಅತಿಯಾಗಿ ತಿನ್ನುವುದು. ಊಟದ ಸಮಯದಲ್ಲಿ ನೀವು ಅತಿಯಾಗಿ ತಿಂದರೆ ಇದು ಹೊಟ್ಟೆ ಸಂಬಂಧಿ ಸಮಸ್ಯೆ ಉಂಟು ಮಾಡುತ್ತದೆ. ತೂಕ ಹೆಚ್ಚಾಗಲು ಕಾರಣವಾಗುತ್ತದೆ ಎರಡು ಚಪಾತಿ ಬದಲು ಐದು ಚಪಾತಿ ತಿನ್ನುವುದು ಅನಾರೋಗ್ಯ ಮತ್ತು ಬೊಜ್ಜು ಹೆಚ್ಚಿಸುತ್ತದೆ. ಅದು ಕೊಬ್ಬಿನ ರೂಪದಲ್ಲಿ ದೇಹದಲ್ಲಿ ಸಂಗ್ರಹವಾಗುತ್ತದೆ.

    MORE
    GALLERIES

  • 68

    No Diet Day: ಡಯೆಟ್​ನಲ್ಲಿದಾಗ ಮಾಡುವ ಈ ತಪ್ಪುಗಳೇ ತೂಕ ಹೆಚ್ಚಳಕ್ಕೆ ಕಾರಣ!

    ಉತ್ತಮ ಲೈಪ್ ಸ್ಟೈಲ್ ಫಾಲೋ ಮಾಡದೇ ಇರುವುದು, ಅತಿಯಾಗಿ, ಕ್ಯಾಲೋರಿ ಸಂಪೂರ್ಣ ಆಹಾರ ಸೇವಿಸುವುದು, ಆಲ್ಕೋಹಾಲ್ ಸೇವಿಸುವುದು, ತಂಬಾಕು ಚಟ, ವ್ಯಾಯಾಮ ಮಾಡದೇ ಇರುವುದು, ಹೆಚ್ಚು ಮೊಬೈಲ್ ಬಳಕೆ, ನಿದ್ರಾಹೀನತೆ ಇದೆಲ್ಲವೂ ನಿಮ್ಮ ಆರೋಗ್ಯ ಕೆಡಲು ಕಾರಣವಾಗುತ್ತದೆ. ಇದು ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ.

    MORE
    GALLERIES

  • 78

    No Diet Day: ಡಯೆಟ್​ನಲ್ಲಿದಾಗ ಮಾಡುವ ಈ ತಪ್ಪುಗಳೇ ತೂಕ ಹೆಚ್ಚಳಕ್ಕೆ ಕಾರಣ!

    ಡಯಟ್ ಹೆಸರಲ್ಲಿ ಉಪವಾಸ ಮಾಡಿ, ಒಂದರ್ಧ ದಿನ ಅನಾರೋಗ್ಯಕರ, ಸಂಸ್ಕರಿಸಿದ, ಸಕ್ಕರೆಯನ್ನು ಹೊಂದಿರುವ ಜಂಕ್ ಫುಡ್ ಸೇವಿಸುವುದು ಆರೋಗ್ಯ ಕೆಡಿಸುತ್ತದೆ. ಹೆಚ್ಚುತ್ತಿರುವ ಕೊಬ್ಬು, ಬೊಜ್ಜಿನ ಸಮಸ್ಯೆಯು ನಿಮ್ಮಲ್ಲಿ ಹೃದಯ ಸಂಬಂಧಿ ಕಾಯಿಲೆ, ಥೈರಾಯ್ಡ್, ಶುಗರ್ ಕಾಯಿಲೆಗೆ ಕಾರಣವಾಗುತ್ತದೆ. ಹಾಗಾಗಿ ಆಹಾರವನ್ನು ಸರಿಯಾಗಿ ಆಯ್ಕೆ ಮಾಡಿ.

    MORE
    GALLERIES

  • 88

    No Diet Day: ಡಯೆಟ್​ನಲ್ಲಿದಾಗ ಮಾಡುವ ಈ ತಪ್ಪುಗಳೇ ತೂಕ ಹೆಚ್ಚಳಕ್ಕೆ ಕಾರಣ!

    ಆಲ್ಕೊಹಾಲ್ಯುಕ್ತ ಪಾನೀಯ ಸೇರಿಸುವುದು ಡಯಟ್ ಸಮಯದಲ್ಲಿ ಸೂಕ್ತವಲ್ಲ. ಬಿಯರ್‌ನಂತಹ ಆಲ್ಕೊಹಾಲ್ ಯುಕ್ತ ಪಾನೀಯಗಳು ಕ್ಯಾಲೊರಿಗಳಿಂದ ತುಂಬಿರುತ್ತದೆ. ನೀವು ಹೆಚ್ಚು ಕಡುಬಯಕೆ ಹೊಂದಲು ರುಚಿ ಪದಾರ್ಥಗಳು ಕಾರಣವಾಗುತ್ತವೆ. ಡಯಟಿಂಗ್ ಎಂದರೆ ನಿಮ್ಮನ್ನು ದಂಡಿಸಿಕೊಳ್ಳುವುದು ಎಂದಲ್ಲ. ಸೂಕ್ತ ಮತ್ತು ಕಡಿಮೆ ಪ್ರಮಾಣದಲ್ಲಿ ಅವುಗಳ ಸೇವನೆಯು ಕಟ್ಟುನಿಟ್ಟಾದ ಆಹಾರಕ್ರಮ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

    MORE
    GALLERIES