ನವಜಾತ ಶಿಶುಗಳಲ್ಲಿ(Newborn Babies) ಹಾಗೂ ಮಕ್ಕಳಲ್ಲಿ ಡೈಪರ್ ರಾಶಸ್(Diaper Rashes) ಆಗುವುದು ಸಹಜ. ಮಗುವಿಗೆ ಡೈಪರ್ ರಾಶಸ್ ಆದರೆ ಚರ್ಮ ಕೆಂಪು ಬಣ್ಣಕ್ಕೆ(Red Colour) ತಿರುಗುತ್ತದೆ. ಸಣ್ಣ-ಸಣ್ಣ ಗುಳ್ಳೆಗಳಾಗುತ್ತವೆ. ಜೊತೆಗೆ ದದ್ದುಗಳು ಮೂಡಿ ಕಸಿವಿಸಿ ಉಂಟುಮಾಡುತ್ತವೆ. ಮಗು ಸರಿಯಾಗಿ ನಿದ್ದೆ(Sleep) ಮಾಡಲು ಸಹ ಆಗುವುದಿಲ್ಲ. ಇದರಿಂದ ತಾಯಿಯೂ ಚಿಂತೆ ಮಾಡುವಂತಾಗುತ್ತದೆ. ಆದರೆ ಈ ಸ್ಕಿನ್ ಅಲರ್ಜಿಗೆ(Skin Allergy) ಕೆಲವು ಮನೆ ಮದ್ದುಗಳು(Home Remedies) ಇವೆ. ಅವುಗಳನ್ನು ಫಾಲೋ ಮಾಡಿದ್ರೆ ಮಗುವಿಗೆ ಡೈಪರ್ ರಾಶಸ್ ಕಡಿಮೆಯಾಗುವುದರ ಜೊತೆಗೆ, ಆರಾಮಾಗಿ ನಿದ್ದೆ ಮಾಡುತ್ತವೆ.
ಪೆಟ್ರೋಲಿಯಂ ಜೆಲ್ಲಿ: ಇದು ಚರ್ಮಕ್ಕೆ ಅತ್ಯುತ್ತಮವಾದ ಮಾಯಿಶ್ಚರೈಸರ್ ಆಗಿದೆ. ಇದು ರೋಗಾಣುಗಳ ಬೆಳವಣಿಗೆಯನ್ನು ತಡೆಯುತ್ತದೆ. ಅಡ್ಡ ಪರಿಣಾಮಗಳನ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ಡೈಪರ್ ಹಾಕುವ ಮೊದಲು ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿ. ಇದರಿಂದ ಯಾವುದೇ ರಾಶಸ್ ಉಂಟಾಗುವುದಿಲ್ಲ. ( ಹಕ್ಕು ನಿರಾಕರಣೆ : ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಕನ್ನಡ ಇದನ್ನು ಪರಿಶೀಲಿಸಿಲ್ಲ ಮತ್ತು ಯಾವುದೇ ಪುರಾವೆಗಳಿಲ್ಲ.)