Jaggery In Winter: ಚಳಿಗಾದಲ್ಲಿ ಬೆಲ್ಲ ಸೇವನೆ ಎಷ್ಟು ಸೂಕ್ತ? ತಜ್ಞರ ಸಲಹೆ ಇಲ್ಲಿದೆ
Jaggery Benefits: ಮಧುಮೇಹಿಗಳಿಗೆ ಸಕ್ಕರೆ ಬದಲಾಗಿ ಬೆಲ್ಲ ಸೇವನೆಯ ಸಲಹೆ ನೀಡಲಾಗುತ್ತದೆ. ಮಧುಮೇಹಿಗಳ ಹೊರತಾಗಿಯೂ ಎಲ್ಲಾ ವಯೋಮಾನದವರು ಬೆಲ್ಲ ಸೇವನೆ ಮಾಡಬಹುದು. ಬೆಲ್ಲ ಸೇವನೆ ಹಲವು ಆರೋಗ್ಯಕರ ಲಾಭಗಳನ್ನು ನಿಮ್ಮ ದೇಹಕ್ಕೆ ನೀಡುತ್ತದೆ.
ಬೆಲ್ಲ ಸೇವನೆ ಹಲವು ಆರೋಗ್ಯಕರ ಲಾಭಗಳನ್ನು ನೀಡುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ ಬೆಲ್ಲ ಸೇವನೆ ಹೊಸ ಚೈತನ್ಯ ಮತ್ತು ಆರೋಗ್ಯ ನೀಡುತ್ತದೆ. ಬೆಲ್ಲದ ಸೇವನೆ ನಮ್ಮನ್ನು ಹಲವು ರೋಗಗಳಿಂದ ಕಾಪಾಡುತ್ತದೆ. (ಸಾಂದರ್ಭಿಕ ಚಿತ್ರ)
2/ 9
ಬೆಲ್ಲದಲ್ಲಿ ನೀರು, ಪ್ರೋಟೀನ್, ಕಾರ್ಬೋಹೈಡ್ರೇಟ್, ವಿಟಮಿನ್ ಬಿ, ಕಬ್ಬಿಣ, ರಂಜಕ ಹೇರಳವಾಗಿದ್ದು, ಚಳಿಗಾಲದಲ್ಲಿ ದೇಹಕ್ಕೆ ಚೈತನ್ಯ ನೀಡುತ್ತದೆ. ಚಳಿಗಾಲದಲ್ಲಿ ಬೆಲ್ಲ ನಿಮ್ಮ ದೇಹಕ್ಕೆ ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ. (ಸಾಂದರ್ಭಿಕ ಚಿತ್ರ)
3/ 9
ಸಾವೋಲ್ ಹಾರ್ಟ್ ಸೆಂಟರ್ ನ ಸಂಸ್ಥಾಪಕ ಮತ್ತು ನಿರ್ದೇಶಕ ಡಾ.ವಿಮಲ್ ಝಂಝಾರ್ ಅವರ ಪ್ರಕಾರ, ಆಹಾರದಲ್ಲಿ ಬೆಲ್ಲವನ್ನು ಹೆಚ್ಚು ಸೇರಿಸಿದರೆ, ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಅನೇಕ ಜನರು ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಸಕ್ಕರೆ ಬದಲಾಗಿ ಬೆಲ್ಲದಿಂದ ಮಾಡಿದ ಸಿಹಿ ತಿಂಡಿ ಸೇವಿಸಿ ಎಂದು ಸಲಹೆ ನೀಡತ್ತಾರೆ. (ಸಾಂದರ್ಭಿಕ ಚಿತ್ರ)
4/ 9
ತಜ್ಞರ ಪ್ರಕಾರ, ಬೆಲ್ಲದ ಸೇವನೆಯು ಮಧುಮೇಹಿಗಳನ್ನು ಹೊರತುಪಡಿಸಿ ಎಲ್ಲರಿಗೂ ಪ್ರಯೋಜನಕಾರಿಯಾಗಿದೆ. ಬೆಲ್ಲ ತಿಂದರೆ ಯಾವ ರೋಗಗಳಿಂದ ದೇಹ ರಕ್ಷಣೆ ಸಿಗುತ್ತೆ ಎಂಬುದರ ಮಾಹಿತಿ ಇಲ್ಲಿದೆ. (ಸಾಂದರ್ಭಿಕ ಚಿತ್ರ)
5/ 9
ಚಳಿಗಾಲದಲ್ಲಿ ಬೆಲ್ಲ ಸೇವಿಸುವುದರಿಂದ ದೇಹವು ಬೆಚ್ಚಗಿರುತ್ತದೆ. ಇದು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಕ್ರಮಬದ್ಧವಾಗಿರಿಸುತ್ತದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. (ಸಾಂದರ್ಭಿಕ ಚಿತ್ರ)
6/ 9
ಬೆಲ್ಲದ ಸೇವನೆ ಯಕೃತ್ತಿನ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ. ಯಕೃತ್ನಲ್ಲಿರುವ ಕೊಳೆ, ರಕ್ತದಲ್ಲಿನ ಕಲ್ಮಶ ತೆಗೆದುಹಾಕಲು ಬೆಲ್ಲ ಸಹಾಯ ಮಾಡಲಿದೆ. ದೇಹ ಹಾಗೂ ಲಿವರ್ ಕೂಡ ಡಿಟಾಕ್ಸ್ ಮಾಡಬೇಕೆಂದಿದ್ದರೆ ಪ್ರತಿದಿನ ಬೆಲ್ಲ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. (ಸಾಂದರ್ಭಿಕ ಚಿತ್ರ)
7/ 9
ಬೆಲ್ಲ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಇದು ಸೋಡಿಯಂ ಮತ್ತು ಪೊಟ್ಯಾಸಿಯಮ್ ಹೊಂದಿರುತ್ತದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ಅಧಿಕ ರಕ್ತದೊತ್ತಡ ಇರುವವರು ಊಟದ ನಂತರ ಬೆಲ್ಲವನ್ನು ತಿನ್ನಬೇಕು ಎಂದು ಹೇಳುತ್ತಾರೆ. (ಸಾಂದರ್ಭಿಕ ಚಿತ್ರ)
8/ 9
ನಾರಿನಂಶವಿರುವ ಬೆಲ್ಲವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಇದನ್ನು ಸೇವಿಸುವುದರಿಂದ ಮಲಬದ್ಧತೆ ಮತ್ತು ಆಮ್ಲೀಯತೆಯನ್ನು ನಿವಾರಿಸುತ್ತದೆ. (ಸಾಂದರ್ಭಿಕ ಚಿತ್ರ)
9/ 9
ಫೈಬರ್ ಅಧಿಕವಾಗಿರುವ ಬೆಲ್ಲಂ ಸೇವನೆ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಬೆಲ್ಲ ಸೇವನೆ ಮಲಬದ್ದತೆ, ಎಸಿಡಿಟಿ ಸಮಸ್ಯೆಗೆ ಪರಿಹಾರ ನೀಡಲಿದೆ. (ಸಾಂದರ್ಭಿಕ ಚಿತ್ರ)