Dental Problems: ವಿಪರೀತ ಹಲ್ಲುನೋವು ಕಾಣಿಸಿಕೊಂಡರೆ ಈ ಮನೆಮದ್ದುಗಳನ್ನು ಬಳಸಿ

Home Remedies: ನಿತ್ಯ ಹಲ್ಲುಜ್ಜಿದರೆ ಸಾಲದು, ಅನೇಕ ಕಾರಣಗಳಿಂದ ಬಾಯಿಯ ಆರೋಗ್ಯ ಕೆಡಬಹುದು. ಹಲ್ಲುನೋವು ಕಾಣಿಸಿಕೊಳ್ಳಬಹುದು. ಹಲ್ಲುನೋವು, ಒಸಡಿನ ನೋವು ಯಾರನ್ನಾದರೂ ಕಾಡಬಹುದು. ಹಾಗಾಗಿ ಹಲ್ಲುನೋವು ಕಾಣಿಸಿಕೊಂಡರೆ ಹೇಗೆ ಬಚಾವ್ ಆಗುವುದು ಎಂಬ ಬಗ್ಗೆ ಗೊತ್ತಿರಬೇಕು.

First published:

  • 17

    Dental Problems: ವಿಪರೀತ ಹಲ್ಲುನೋವು ಕಾಣಿಸಿಕೊಂಡರೆ ಈ ಮನೆಮದ್ದುಗಳನ್ನು ಬಳಸಿ

    ಹಲ್ಲುನೋವು ಕಾಣಿಸಿಕೊಂಡ ಕೂಡಲೇ ಈ ಮನೆಮದ್ದುಗಳನ್ನು ಬಳಸಬೇಕು. ಆಗ ಬೇಗನೇ ಹಲ್ಲುನೋವು ಹತೋಟಿಗೆ ಬರುತ್ತದೆ. ಅನಗತ್ಯವಾಗಿ ಸಣ್ಣಪುಟ್ಟ ನೋವಿಗೆ ಆಸ್ಪತ್ರೆ, ಮೆಡಿಸನ್ ಎಂದು ತಲೆಕೆಡಿಸಿಕೊಳ್ಳುವುದು ತಪ್ಪುತ್ತೆ.

    MORE
    GALLERIES

  • 27

    Dental Problems: ವಿಪರೀತ ಹಲ್ಲುನೋವು ಕಾಣಿಸಿಕೊಂಡರೆ ಈ ಮನೆಮದ್ದುಗಳನ್ನು ಬಳಸಿ

    ಆಯಿಲ್ ಪುಲ್ಲಿಂಗ್ ಪ್ರಯತ್ನಿಸಿ: ಹಲ್ಲಿನ ಕುಳಿಯನ್ನು ತೊಡೆದುಹಾಕಲು ಆಯಿಲ್ ಪುಲ್ಲಿಂಗ್ ಸಹಾಯವನ್ನು ತೆಗೆದುಕೊಳ್ಳುವುದು ಆಯುರ್ವೇದದ ಹಳೆಯ ವಿಧಾನವಾಗಿದೆ. ಒಂದು ಚಮಚ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಅದನ್ನು ಬಾಯಿಯ ಸುತ್ತಲೂ ತಿರುಗಿಸಿ, ನಂತರ ಉಗುಳಿ. ಶುದ್ಧ ನೀರಿನಿಂದ ಬಾಯಿ ತೊಳೆಯಿರಿ.

    MORE
    GALLERIES

  • 37

    Dental Problems: ವಿಪರೀತ ಹಲ್ಲುನೋವು ಕಾಣಿಸಿಕೊಂಡರೆ ಈ ಮನೆಮದ್ದುಗಳನ್ನು ಬಳಸಿ

    ಅಲೋವೆರಾ ಬಳಸಿ: ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಹೊಂದಿರುವ ಅಲೋವೆರಾ ಹಲ್ಲಿನ ನೋವಿಗೆ ಪರಿಹಾರವನ್ನು ನೀಡುತ್ತೆ. ಅಲೋವೆರಾ ಜೆಲ್ ಅನ್ನು ಟೀ ಟ್ರೀ ಎಣ್ಣೆಯೊಂದಿಗೆ ಬೆರೆಸಿ ನೋವಿರುವ ಜಾಗಕ್ಕೆ ಲೇಪಿಸಿ. ಸ್ವಲ್ಪ ಸಮಯದ ನಂತರ ನಿಮ್ಮ ಬಾಯಿಯನ್ನು ಶುದ್ಧ ನೀರಿನಿಂದ ತೊಳೆಯಿರಿ.

    MORE
    GALLERIES

  • 47

    Dental Problems: ವಿಪರೀತ ಹಲ್ಲುನೋವು ಕಾಣಿಸಿಕೊಂಡರೆ ಈ ಮನೆಮದ್ದುಗಳನ್ನು ಬಳಸಿ

    ಒಳ್ಳೆಯ ವಿಟಮಿನ್ ಗಳನ್ನು ಬಳಸಿ: ಹಲ್ಲುಗಳನ್ನು ಆರೋಗ್ಯಕರವಾಗಿಡಲು, ನೀವು ವಿಟಮಿನ್ ಮತ್ತು ಖನಿಜಯುಕ್ತ ಪದಾರ್ಥಗಳನ್ನು ಸೇವಿಸಬಹುದು. ರಂಜಕ, ಮೆಗ್ನೀಸಿಯಮ್ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವ ವಸ್ತುಗಳನ್ನು ತಿನ್ನಿರಿ. ಇದು ಹಲ್ಲುಗಳಿಗೆ ರಕ್ಷಣೆ ನೀಡುತ್ತದೆ.

    MORE
    GALLERIES

  • 57

    Dental Problems: ವಿಪರೀತ ಹಲ್ಲುನೋವು ಕಾಣಿಸಿಕೊಂಡರೆ ಈ ಮನೆಮದ್ದುಗಳನ್ನು ಬಳಸಿ

    ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಿ: ಸಕ್ಕರೆ ಭರಿತ ಆಹಾರ ಮತ್ತು ಪಾನೀಯಗಳು ಹಲ್ಲಿನ ನೋವನ್ನು ಪ್ರಚೋದಿಸುತ್ತವೆ. ಸಿಹಿ ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸುವ ಮೂಲಕ ನೀವು ಹಲ್ಲಿನ ನೋವಿನಿಂದ ದೂರವಿರಬಹುದು

    MORE
    GALLERIES

  • 67

    Dental Problems: ವಿಪರೀತ ಹಲ್ಲುನೋವು ಕಾಣಿಸಿಕೊಂಡರೆ ಈ ಮನೆಮದ್ದುಗಳನ್ನು ಬಳಸಿ

    ಶುಗರ್ ಫ್ರೀ ಚೂಯಿಂಗ್ ಗಮ್: ಶುಇದನ್ನು ತಿನ್ನುವುದರಿಂದ ಹಲ್ಲಿನಲ್ಲಿರುವ ಬ್ಯಾಕ್ಟೀರಿಯಾ ಕೂಡ ಕಡಿಮೆಯಾಗುತ್ತದೆ. ಆಹಾರವನ್ನು ಸೇವಿಸಿದ ನಂತರ ಪ್ರತಿದಿನ ಸಕ್ಕರೆ ಇಲ್ಲದ ಚೂಯಿಂಗ್ ಗಮ್ ಅನ್ನು ಅಗಿಯಿರಿ.

    MORE
    GALLERIES

  • 77

    Dental Problems: ವಿಪರೀತ ಹಲ್ಲುನೋವು ಕಾಣಿಸಿಕೊಂಡರೆ ಈ ಮನೆಮದ್ದುಗಳನ್ನು ಬಳಸಿ

    Disclaimer: ಮೇಲಿನ ಲೇಖನ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ. ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವವರು ವೈದ್ಯರ ಸಲಹೆ ಪಡೆದು ಮುಂದುವರಿಯುವುದು ಉತ್ತಮ. (ಪ್ರಾತಿನಿಧಿಕ ಚಿತ್ರ)

    MORE
    GALLERIES