Watermelon: ಹೆಚ್ಚಾಗುತ್ತಿದೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ, ಕಾರಣ ಇದಂತೆ ನೋಡಿ
ಬೇಸಿಗೆ ಕಾಲ ಬಂದರೆ ಸಾಕು ಕಲ್ಲಂಗಡಿ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ. ಇನ್ನೂ ಕೆಲವರು ಬೇಸಿಗೆ ಸಮಯದಲ್ಲಿ ಕಲ್ಲಂಗಡಿ ಹಣ್ಣು ತಿಂದರೆ ಒಳ್ಳೆಯದು ಎನ್ನುತ್ತಾರೆ. ಇನ್ನು ಈ ಒಂದು ಊರಲ್ಲಿ ಮಾತ್ರ ಈ ವಿಧದ ಕಲ್ಲಂಗಡಿಗೆ ಬಹಳಷ್ಟು ಬೇಡಿಕೆಯಿದೆ. ಹಾಗಿದ್ರೆ ಆ ಕಲ್ಲಂಗಡಿ ಹಣ್ಣು ಯಾವುದು? ಇದರ ವಿಶೇಷತೆ ಏನು ಎಂಬುದನ್ನು ಈ ಲೇಖನದಲ್ಲಿದೆ ಓದಿ.
ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆಯಿಂದಾಗಿ ಹಣ್ಣು, ತರಕಾರಿಗಳ ಸ್ಥಿತಿ ಬಹಳಷ್ಟು ಹದಗೆಡುತ್ತಿದೆ. ಆದರೆ ರಾಜಸ್ಥಾನದಲ್ಲಿ ಮಹಾರಾಷ್ಟ್ರದ ಕಲ್ಲಂಗಡಿ (ಕಾಳಿಂಗಡ್) ಹಣ್ಣಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಗಿದ್ರೆ ಇದರ ಹಿಂದಿನ ನಿಜವಾದ ಕಾರಣವನ್ನು ಈ ಲೇಖನದಲ್ಲಿ ಕಂಡುಹಿಡಿಯೋಣ.
2/ 8
ಕಲ್ಲಂಗಡಿ ಹಣ್ಣು ಮಾರಾಟಗಾರ ಹಕೀಮುದ್ದೀನ್ ಎಂಬವರು 15 ವರ್ಷಗಳಿಂದ ಹಣ್ಣಿನ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಕಾರ, ಉತ್ತರ ಮಹಾರಾಷ್ಟ್ರದಲ್ಲಿ ಕಲ್ಲಂಗಡಿ ಹಣ್ಣು ಉತ್ತಮವಾಗಿದೆ. ಇವು ತುಂಬಾ ರುಚಿಯಾಗಿರುವುದು ಮಾತ್ರವಲ್ಲದೆ ಬೇಗ ಕೆಡುವುದಿಲ್ಲ.
3/ 8
ಈ ಹಣ್ಣು ಬಹಳ ರುಚಿಯಾಗಿರುತ್ತದೆ ಮತ್ತು ಇದನ್ನು ಬಹಳಷ್ಟು ದಿನಗಳ ಕಾಲ ಇಟ್ಟುಕೊಳ್ಳುವ ಅವಕಾಶವಿರುವುದರಿಂದ ಇದಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ.
4/ 8
ಈ ಕಲ್ಲಂಗಡಿಗಳನ್ನು ಹಣ್ಣಿನ ಅಂಗಡಿಗಳಲ್ಲಿ 15 ದಿನಗಳವರೆಗೆ ಸಂಗ್ರಹಿಸಿಡಲಾಗುತ್ತದೆ. ಆದರೂ ಕೆಡದೆ, ನೀರು, ರುಚಿ ಕಳೆದುಕೊಳ್ಳುವುದಿಲ್ಲ. ಇದುವೇ ಈ ಹಣ್ಣಿನ ವಿಶೇಷತೆ.
5/ 8
ರಾಜಸ್ಥಾನದ ಕೆಲವು ಭಾಗಗಳಲ್ಲಿ ಕಲ್ಲಂಗಡಿಗಳನ್ನು ಬೆಳೆಯಲಾಗುತ್ತದೆ. ಆದರೆ ಅವು ಹೆಚ್ಚು ಬೆಳವಣಿಗೆಯನ್ನು ಕಾಣುವುದಿಲ್ಲ. ರಾಜಸ್ಥಾನದಲ್ಲಿ ನೀರಿನ ಅಭಾವ ಹೆಚ್ಚಿದೆ. ಹಾಗಾಗಿ ಅಲ್ಲಿ ಕಲ್ಲಂಗಡಿಗೆ ಬೇಡಿಕೆ ಹೆಚ್ಚಿದೆ. ಇನ್ನು ಇಲ್ಲಿಗೆ ಕಲ್ಲಂಗಡಿಗಳನ್ನು ಉತ್ತರದಿಂದ ತರಲಾಗುತ್ತದೆ. ಇದೇ ಕಾರಣಕ್ಕೆ ರಾಜಸ್ಥಾನದಲ್ಲಿ ಭಾರೀ ಬೇಡಿಕೆಯಿದೆ.
6/ 8
ಕಲ್ಲಂಗಡಿಗಳಲ್ಲಿ ಸುಮಾರು 70 ವಿಧಗಳಿವೆ ಎಂದು ಹಕೀಮುದ್ದೀನ್ ಹೇಳಿದರು. ಉತ್ತಮ ರೀತಿಯ ಕಲ್ಲಂಗಡಿಗಳನ್ನು ಬಾಹುಬಲಿ ಎಂದು ಕರೆಯಲಾಗುತ್ತದೆ. ಇದರ ಗಾತ್ರವು 5 ಕೆಜಿಯಿಂದ 11 ಕೆಜಿ ವರೆಗೆ ಇರುತ್ತದೆ. ಕಲ್ಲಂಗಡಿಗಳು ಪ್ರಸ್ತುತ ರಾಜಸ್ಥಾನದಲ್ಲಿ ಕೆ.ಜಿ.ಗೆ 25 ರಿಂದ 30 ರೂಪಾಯಿಯನ್ನು ಹೊಂದಿದೆ.
7/ 8
ಇನ್ನು ರಂಜಾನ್ ಹಬ್ಬವು ಮಾರ್ಚ್ ಕೊನೆಯ ವಾರದಲ್ಲಿ ಬರುತ್ತದೆ. ಆಗ ಕಲ್ಲಂಗಡಿಗೆ ಬೇಡಿಕೆ ಮತ್ತಷ್ಟು ಹೆಚ್ಚುತ್ತದೆ. ಈ ಸಮಯದಲ್ಲಿ ಕೆಜಿಗೆ 40 ರೂಪಾಯಿಯ ಹಾಗೆ ಮಾರಅಟ ಮಾಡಲಾಗುತ್ತಿದೆ. ಹೀಗಾಗಿ ಜನರು ಕಲ್ಲಂಗಡಿ ಹಣ್ಣನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ.
8/ 8
ಇದು ಕಲ್ಲಂಗಡಿ ಹಣ್ಣಿನ ವಿಶೇಷತೆಯಾಗಿದೆ. ಇದೇ ಕಾರಣಕ್ಕೆ ಈ ಹಣ್ಣಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ.
First published:
18