Deepavali Rangoli Design: ದೀಪಾವಳಿ ಹಬ್ಬಕ್ಕೆ ಚೆಂದ ಚೆಂದದ ಈ ರಂಗೋಲಿ ಹಾಕಿ ಅಲಂಕಾರ ಮಾಡಿ
Deepavali Rangoli Designs: ದೀಪಾವಳಿ ಹಬ್ಬ ಬಹಳ ದೊಡ್ಡ ಹಬ್ಬ ಹಾಗೂ ಮುಖ್ಯವಾದ ಹಬ್ಬ. ದೀಪಗಳಿಂದ ಮನೆಯ ಅಲಂಕಾರ ಮಾಡುವುದಲ್ಲದೇ, ಈ ದಿನ ರಂಗೋಲಿಯಿಂದ ಸಹ ಮನೆ ಅಲಂಕಾರ ಮಾಡಲಾಗುತ್ತದೆ. ಈ ಬಾರಿ ದೀಪಾವಳಿ ಹಬ್ಬಕ್ಕೆ ಯಾವ ರಂಗೋಲಿ ಡಿಸೈನ್ ಹಾಕಬೇಕು ಎನ್ನುವ ಗೊಂದಲವಿದ್ರೆ ಕೆಲ ಸಲಹೆಗಳು ಇಲ್ಲಿದೆ.
ಹೂವಿನ ರಂಗೋಲಿಯಿಂದ ಹಿಡಿದು ಚುಕ್ಕಿ ರಂಗೋಲಿ ಹೀಗೆ ವಿವಿಧ ರೀತಿಯ ರಂಗೋಲಿಗಳನ್ನು ಹಾಕಬಹುದು. ರಂಗೋಲಿಗಳ ಸುತ್ತ, ದೀಪಗಳನ್ನು ಇಟ್ಟು ಅಲಂಕಾರ ಮಾಡಿದರೆ ಇನ್ನೂ ಸುಂದರವಾಗಿ ಕಾಣುತ್ತದೆ. ರಂಗೋಲಿಗಳಿಗೆ ವಿವಿಧ ಬಣ್ಣಗಳನ್ನು ಹಾಕಿದರೆ, ಅದರ ಲುಕ್ ಬೇರೆ.
2/ 8
ರಂಗೋಲಿಯು ಬಣ್ಣಗಳ ಆಚರಣೆ ಎಂದು ಸಹ ಹೇಳಲಾಗುತ್ತದೆ. ಇದನ್ನು ಸಂಸ್ಕೃತ ಪದ ರಂಗವಲ್ಲಿಯಿಂದ ತೆಗೆದುಕೊಳ್ಳಲಾಗಿದೆ ಇದು ಪ್ರಾಚೀನ ಭಾರತೀಯ ಕಲೆಯಾಗಿದ್ದು, ಶಿಲ್ಪಕಲೆ ಹಾಗೂ ವರ್ಣಚಿತ್ರಗಳಿಗಿಂತಲೂ ಹಿಂದಿನಿಂದ ವಾಡಿಕೆಯಲ್ಲಿದೆ.
3/ 8
ಯಾವುದೇ ಧಾರ್ಮಿಕ ಆಚರಣೆ ಇರಲಿ, ಹಬ್ಬ ಹರಿ ದಿನಗಳು ಇರಲಿ ರಂಗೋಲಿಯನ್ನು ಹಾಕಿಯೇ ಹಾಕುತ್ತಾರೆ. ರಂಗೋಲಿಯು ಆ ಸ್ಥಳಕ್ಕೆ ಆಧ್ಯಾತ್ಮಿಕ ಸ್ಪರ್ಶವನ್ನು ನೀಡುತ್ತದೆ.
4/ 8
ರಂಗೋಲಿಯಲ್ಲಿ ಬಿಡಿಸಿದಂತಹ ಚಿತ್ರಗಳು ಕೂಡಾ ಬಹಳ ಮುಖ್ಯವಾಗುತ್ತದೆ ಎನ್ನುತ್ತಾರೆ ಹಿರಿಯರು. ಅದರ ಹಿಂದೆ ಸಹ ಒಂದು ಅರ್ಥವಿರುತ್ತದೆಯಂತೆ. ಇನ್ನು ನೇರವಾದ ರಂಗೋಲಿ ರೇಖೆಗಳಿಗಿಂತ ಬಾಗಿದ ರೇಖೆಗಳು ಉತ್ತಮವಂತೆ.
5/ 8
ಹೆಚ್ಚಿನ ಪ್ರಮಾಣದಲ್ಲಿ ದೇವರ ಶಕ್ತಿಯನ್ನು ಆಕರ್ಷಿಸಲು ಆಯಾ ದೇವತೆಗಳಿಗೆ ಸಂಬಂಧಿಸಿದ, ದೇವತೆಗಳನ್ನು ಹೆಚ್ಚು ಆಕರ್ಷಿಸುವ ರಂಗೋಲಿಯನ್ನು ಬಿಡಿಸಿದರೆ ಬಹಳ ಒಳ್ಳೆಯದಂತೆ.
6/ 8
ಮತ್ತೊಂದು ಮುಖ್ಯವಾದ ಕಾರಣ ಎಂದರೆ ರಂಗೋಲಿ ಮನೆಗೆ ಬರುವ ಅತಿಥಿಗಳ ಮನಸ್ಸಲ್ಲಿ ಶಾಂತಿ ಮೂಡಿಸುತ್ತದೆ. ಇದು ಮನೆಯಲ್ಲಿ ಸಕರಾತ್ಮಕ ಪರಿಣಂಆ ಉಂಟು ಮಾಡುವುದಲ್ಲದೇ, ಸಂತೋಷ ನೆಲೆಯಾಗಿರುತ್ತದೆ.
7/ 8
ಹಸ್ತಮುದ್ರಿಕಾ ವಿಜ್ಞಾನದ ಪ್ರಕಾರ ರಂಗೋಲಿ ಹಾಕುವಾಗ ತೋರು ಬೆರಳಿನ ತುದಿಯನ್ನು ಹೆಬ್ಬೆರಳು ಮೃದುವಾಗಿ ಒತ್ತುವುದರಿಂದ ಆರೋಗ್ಯ ಲಾಭಗಳು ಬಹಳಷ್ಟಿದೆ. ಸಕರಾತ್ಮಕ ಶಕ್ತಿ ಹರಿದಾಡುತ್ತದೆ ಎಂದು ಸಹ ಹಿರಿಯರು ಹೇಳುತ್ತಾರೆ.
8/ 8
ರಂಗೋಲಿ ಹಾಕುವುದರಿಂದ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ಹಾಗೂ ಸಂಪತ್ತು ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಅಲ್ಲದೇ, ಇದು ಮನೆಯ ಒಳಗೆ ಪಾಸಿಟಿವ್ ಎನರ್ಜಿ ಹೆಚ್ಚಿಸಲು ಸಹಾಯ ಮಾಡುತ್ತದೆ.