Dates Health Benefits: ದಿನದಲ್ಲಿ ಯಾವಾಗ ಖರ್ಜೂರ ತಿನ್ನಬೇಕು? ತಜ್ಞರು ಹೇಳುವುದು ಹೀಗೆ..!
Dates health benefits:
Dates Health Benefits: ಖರ್ಜೂರ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೇ? ಅದರಲ್ಲೂ ಈ ಮಳೆಗಾಲದ ಸಮಯದಲ್ಲಿ ಖರ್ಜೂರ ತಿಂದರೆ ಸಾಕಷ್ಟು ಆರೋಗ್ಯಕರ ಲಾಭಗಳನ್ನು ಪಡೆಯಬಹುದು. ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿರುವ ಸಮತೋಲಿತ ಆಹಾರ ಈ ಖರ್ಜೂರ. ಖರ್ಜೂರ ತೊಂದರೆ ನಮ್ಮ ದೇಹದಲ್ಲಿ ಅನಿರೀಕ್ಷಿತ ಆರೋಗ್ಯಕರ ಬದಲಾವಣೆಗಳು ಉಂಟಾಗುತ್ತವೆ. ಪೋಷಕಾಂಶಗಳಿಂದ ತುಂಬಿರುವ ಈ ಖರ್ಜೂರದ ಮಹತ್ವವನ್ನು ಇಲ್ಲಿ ಅರಿಯೋಣ.
ಖರ್ಜೂರವನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ವಿಶೇಷವಾಗಿ ಮಳೆಗಾಲದಲ್ಲಿ ಇವುಗಳನ್ನು ತಿನ್ನುವುದರಿಂದ ಹೆಚ್ಚಿನ ಲಾಭಗಳು ದೊರೆಯುತ್ತವೆ. ಪೌಷ್ಟಿಕ ತಜ್ಞರು ಕೂಡ ಇದನ್ನೇ ಹೇಳುತ್ತಾರೆ.
2/ 6
ಖರ್ಜೂರ ನಮ್ಮ ದೇಹದಲ್ಲಿನ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಹಿಮೋಗ್ಲೋಬಿನ್ ಮಟ್ಟವೂ ಹೆಚ್ಚಾಗುತ್ತದೆ. ದಿನನಿತ್ಯ ಖರ್ಜೂರ ತಿನ್ನುವುದರಿಂದ ನಿದ್ರೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಖರ್ಜೂರಗಳು ಅಲರ್ಜಿ ಹಾಗೂ ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತವೆ.
3/ 6
ಖರ್ಜೂರ ತಿನ್ನುವುದರಿಂದ ಅಸಿಡಿಟಿ, ಮಲಬದ್ಧತೆ ನಿವಾರಣೆಯಾಗುತ್ತದೆ. ಖರ್ಜೂರದಲ್ಲಿ ಫೈಬರ್, ಪೊಟ್ಯಾಶಿಯಂ ಮತ್ತು ಕಬ್ಬಿಣಾಂಶ ಅಧಿಕವಾಗಿದೆ. ಅದಕ್ಕಾಗಿಯೇ ನೀವು ಸಕ್ಕರೆ ತಿನ್ನಲು ಬಯಸಿದಾಗ, ಖರ್ಜೂರ ತಿಂದರೆ ಆರೋಗ್ಯ ಉತ್ತಮವಾಗಿರುತ್ತದೆ. ದೇಹಕ್ಕೆ ಶಕ್ತಿಯೂ ಸಿಗುತ್ತದೆ.
4/ 6
ಖರ್ಜೂರಗಳು ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುವುದರಿಂದ ಅವುಗಳನ್ನು ಡಯಾಬಿಟಿಸ್ ಇರುವ ಜನರೂ ಸಹ ಸೇವಿಸಬಹುದು. ಇದರಲ್ಲಿರುವ ಫೈಟೊಕೆಮಿಕಲ್ಸ್ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡುತ್ತದೆ. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ದಿನದಲ್ಲಿ ಖರ್ಜೂರ ಯಾವಾಗ ತಿನ್ನಬೇಕು ಎಂಬುದನ್ನೂ ಸಹ ಪೌಷ್ಟಿಕ ತಜ್ಞರು ಹೇಳಿದ್ದಾರೆ.
5/ 6
ಪ್ರತಿದಿನ ಬೆಳಗ್ಗೆ ಖರ್ಜೂರವನ್ನು ತಿನ್ನವೇಕು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ನೀವು ರಕ್ತದಲ್ಲಿ ಕಡಿಮೆ ಹಿಮೋಗ್ಲೋಬಿನ್ ಮಟ್ಟ ಹೊಂದಿದ್ದರೆ, ಊಟದ ಬಳಿಕ ಸ್ವಲ್ವ ಹೊತ್ತು ಬಿಟ್ಟು ಖರ್ಜೂರ ಸೇವಿಸಿ. ಮಕ್ಕಳು ಖರ್ಜೂರವನ್ನು ಉಪಾಹಾರ ಮತ್ತು ಊಟದ ನಡುವೆ ತಿನ್ನಬಹುದು.
6/ 6
ನೀವು ತಿನ್ನುವ ಖರ್ಜೂರಗಳು ತಾಜಾ ಆಗಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಸೂಪರ್ ಮಾರ್ಕೆಟ್ನಲ್ಲಿ ಖರೀದಿಸುವುದಕ್ಕಿಂದ ಮಾರ್ಕೆಟ್ನಲ್ಲಿ ಖರೀದಿಸಿದರೆ ಉತ್ತಮ ಗುಣಮಟ್ಟದ ಖರ್ಜೂರ ಸಿಗುತ್ತದೆ.