Dark Chocolate: ಡಾರ್ಕ್ ಚಾಕೊಲೇಟ್ ರುಚಿಕರ ಮಾತ್ರ ಅಲ್ಲ ಆರೋಗ್ಯಕರ ಕೂಡ, ಹೇಗೆಲ್ಲಾ ಯೂಸ್ ಮಾಡ್ಬೋದು ನೋಡಿ
Dark Chocolate Benefits: ಡಾರ್ಕ್ ಚಾಕೊಲೇಟ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಕೆಲವರು ಮಾತ್ರ ಅದರ ಕಹಿ ರುಚಿಯ ಕಾರಣದಿಂದ ತಿನ್ನಲು ಹಿಂದೆ-ಮುಂದೆ ನೋಡುತ್ತಾರೆ. ಈ ಡಾರ್ಕ್ ಚಾಕೊಲೇಟ್ ತಿನ್ನಲು ಮಾತ್ರವಲ್ಲದೇ ನಿಮ್ಮ ಕೂದಲ ಹಾಗೂ ತ್ವಚೆಯ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಹೇಗೆ ಬಳಸಬೇಕು ಎಂಬುದು ಇಲ್ಲಿದೆ.
ಸಂಶೋಧನೆಯ ಪ್ರಕಾರ, ಡಾರ್ಕ್ ಚಾಕೊಲೇಟ್ ತಿನ್ನುವುದು ಸೂರ್ಯನ ಕಿರಣಗಳ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಚಾಕೊಲೇಟ್ನಲ್ಲಿರುವ ಫ್ಲೇವನಾಯ್ಡ್ಗಳು ನಿಮ್ಮ ತ್ವಚೆಯಿಂದ ಹಾನಿಕಾರಕ ಯುವಿ ಕಿರಣಗಳನ್ನು ಹೊರಹಾಕಲು ಸಹ ಸಹಕಾರಿ.
2/ 8
ಡಾರ್ಕ್ ಚಾಕೊಲೇಟ್ ಕಪ್ಪು ಕಲೆಗಳು ಮತ್ತು ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಇದನ್ನು ಮುಖಕ್ಕೆ ಹಚ್ಚುವುದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
3/ 8
ಡಾರ್ಕ್ ಚಾಕೊಲೇಟ್ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ನಿಯಂತ್ರಿಸಲು ಸಹಕಾರಿ ಎಂದು ಸಾಬೀತಾಗಿದೆ. ಡಾರ್ಕ್ ಚಾಕೊಲೇಟ್ ಮೆಗ್ನೀಸಿಯಮ್ ಅನ್ನು ಹೊಂದಿರುವುದರಿಂದ ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
4/ 8
ಉರಿಯೂತವನ್ನು ಕಡಿಮೆ ಮಾಡುವಲ್ಲಿ ಡಾರ್ಕ್ ಚಾಕೊಲೇಟ್ ಸಹಕಾರಿ ಎನ್ನಲಾಗುತ್ತದೆ. ಡಾರ್ಕ್ ಚಾಕೊಲೇಟ್ನಲ್ಲಿರುವ ಫ್ಲಾವನಾಲ್ಗಳು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ,
5/ 8
ಡಾರ್ಕ್ ಚಾಕೊಲೇಟ್ ಖನಿಜಗಳಿಂದ ಸಮೃದ್ಧವಾಗಿದೆ ಇದು ಜೀವಕೋಶಗಳ ಹಾನಿಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಸತ್ತ ಚರ್ಮದ ಕೋಶಗಳನ್ನು ಹೊರ ತೆಗೆಯುವ ಮೂಲಕ ಚರ್ಮದ ಅಂದವನ್ನು ಹೆಚ್ಚಿಸುತ್ತದೆ.
6/ 8
ಡಾರ್ಕ್ ಚಾಕೊಲೇಟ್ನಲ್ಲಿರುವ ತಾಮ್ರ, ಕಬ್ಬಿಣ ಮತ್ತು ಸತುವಿನಂತಹ ಖನಿಜಗಳು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಲ್ಲದೇ, ಇದು ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದರ ಜೊತೆಗೆ ತಲೆಹೊಟ್ಟು ನಿವಾರಿಸಲು ಸಹ ಸಹಕಾರಿ.
7/ 8
1. ಒಂದು ಚಮಚ ಡಾರ್ಕ್ ಚಾಕೊಲೇಟ್ ಪೌಡರ್ ಮತ್ತು ಜೇನುತುಪ್ಪ ಹಾಗೂ ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಮಿಶ್ರಣ ಮಾಡಿ. ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ ಸುಮಾರು 15-20 ನಿಮಿಷಗಳ ನಂತರ ತೊಳೆಯಿರಿ.
8/ 8
ಎರಡು ಡಾರ್ಕ್ ಚಾಕೊಲೇಟ್ ಬಾರ್ ಕರಗಿಸಿ ಮತ್ತು 2/3 ಕಪ್ ಹಾಲು, 2-3 ಟೇಬಲ್ ಸ್ಪೂನ್ ಕಂದು ಸಕ್ಕರೆ ಮತ್ತು ಒಂದು ಟೀಚಮಚ ಉಪ್ಪು ಮಿಶ್ರಣ ಮಾಡಿ. ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ, ನಂತರ ಅದನ್ನು ಮುಖಕ್ಕೆ ಹಚ್ಚಿ. 15-20 ನಿಮಿಷಗಳ ನಂತರ ತೊಳೆಯಿರಿ.