ನಮ್ಮ ದೇಶದ ಅಡುಗೆಗಳಲ್ಲಿ ಸಾಮಾನ್ಯವಾಗಿ ಕರಿಬೇವಿನ ಸೊಪ್ಪಿನ ಬಳಸಲಾಗುತ್ತದೆ. ತ್ವಚೆಯಿಂದ ಹಿಡಿದು ಕೂದಲಿವರೆಗೂ ರಕ್ಷಣೆ ನೀಡುವ ಕರಿಬೇವಿನ ಪೌಡರ್ ಅನ್ನು ಅನೇಕ ಮಂದಿ ಇಷ್ಟಪಡುತ್ತಾರೆ. ಆದರೆ ಕರಿಬೇವಿನ ಸೊಪ್ಪಿನಿಂದ ಹಲವು ಆರೋಗ್ಯಕಾರಿ ಪ್ರಯೋಜನಗಳಿವೆ ಎಂಬ ಬಗ್ಗೆ ಅನೇಕ ಮಂದಿಗೆ ತಿಳಿದಿಲ್ಲ. ಕರಿಬೇವಿನ ಎಲೆಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂಬುವುದನ್ನು ಸಾಬೀತುಪಡಿಸಬಹುದು. (ಗ್ರಾಫಿಕ್ ಚಿತ್ರ)
ಕರಿಬೇವಿನ ಎಲೆಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಕರಿಬೇವಿನ ಎಲೆಗಳಲ್ಲಿರುವ ಆ್ಯಂಟಿ ಆಕ್ಸಿಡೆಂಟ್, ಗ್ಯಾಲಿಕ್ ಆಸಿಡ್ ಮತ್ತು ಆ್ಯಂಟಿ ಕಾರ್ಸಿನೋಜೆನಿಕ್ ಗುಣಗಳಿದ್ದು, ಇವು ದೇಹದಲ್ಲಿರುವ ಕ್ಯಾನ್ಸರ್ ಕೋಶಗಳನ್ನು ಸುಲಭವಾಗಿ ನಾಶಪಡಿಸುತ್ತದೆ. ಇದರಿಂದ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳನ್ನು ತಡೆಯಬಹುದು.(ಚಿತ್ರ)