ಎಲ್ಲರೂ ಶಾಕ್ ಆಗುವಂತಹ ವಿಚಾರವೊಂದು ಈಗ ರಿವೀಲ್ ಆಗಿದೆ. ಅದೇನಪ್ಪಾ ಅಂದ್ರೆ ಸತ್ತ ವ್ಯಕ್ತಿಯನ್ನು ಮತ್ತೆ ಬದುಕಿಸಬಹುದಂತೆ. ಹೀಗಂತ ನಾವು ಹೇಳುತ್ತಿಲ್ಲ. ಇದಕ್ಕಾಗಿ ವಿಜ್ಞಾನಿಗಳು ವಿಶೇಷ ತಂತ್ರವನ್ನು ಕಂಡುಹಿಡಿದಿದ್ದಾರಂತೆ. ಅದರ ಮೂಲಕ ಸತ್ತವರನ್ನು ಬದುಕಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆ ಯಂತ್ರವನ್ನು ಕ್ರಯೋನಿಕ್ ತಂತ್ರಜ್ಞಾನ ಎಂದು ಕರೆಯಲಾಗುತ್ತದೆ. (ಸಾಂಕೇತಿಕ ಚಿತ್ರ)
ನಿಜವಾದ ಕ್ರಯೋನಿಕ್ ತಂತ್ರ ಯಾವುದು? ಇದು ಹೇಗೆ ಕೆಲಸ ಮಾಡುತ್ತದೆ? ಈ ಅನುಮಾನ ನಿಮ್ಮನ್ನು ಕಾಡುತ್ತಿರಬಹುದು, ಆದರೆ ಈ ಎಲ್ಲಾ ಅನುಮಾನಗಳನ್ನು ಹೋಗಲಾಡಿಸಲು ನಾವು ನಿಮಗಾಗಿ ಈ ಸುದ್ದಿಯನ್ನು ನಿಮ್ಮ ಮುಂದೆ ತಂದಿದ್ದೇವೆ. ಮಾಧ್ಯಮ ವರದಿಗಳ ಪ್ರಕಾರ, ಅಮೆರಿಕದ ಅರಿಜೋನಾ ಪ್ರದೇಶದಲ್ಲಿ ವಿಶೇಷ ತಂತ್ರದೊಂದಿಗೆ ಸತ್ತವರ ದೇಹಗಳನ್ನು ತಂಪಾಗಿ ಮತ್ತು ಅತ್ಯಂತ ಸುರಕ್ಷಿತವಾಗಿ ಇರಿಸಲಾಗುತ್ತದೆ. ಭವಿಷ್ಯದಲ್ಲಿ, ಕ್ರಯೋನಿಕ್ ತಂತ್ರಜ್ಞಾನವು ಹೆಚ್ಚು ಅಭಿವೃದ್ಧಿ ಹೊಂದುತ್ತದೆ ಮತ್ತು ಸತ್ತ ಜನರನ್ನು ಮತ್ತೆ ಬದುಕಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. (ಸಾಂಕೇತಿಕ ಚಿತ್ರ)