Morning Breakfast: ಗರಿ ಗರಿ ಬೆಂಡೆಕಾಯಿ ಮತ್ತು ಚಪಾತಿ ಬೆಳಗ್ಗಿನ ತಿಂಡಿಗೆ ಬೆಸ್ಟ್​ ಆಯ್ಕೆ!

ನಮ್ಮ ಆರೋಗ್ಯಕ್ಕೆ ಹಸಿರು ತರಕಾರಿಗಳು ಅನೇಕ ಪ್ರಯೋಜನ ನೀಡುತ್ತವೆ. ಬೇಸಿಗೆಯಲ್ಲಿ ಜನರು ಸೂಪ್, ಸಲಾಡ್ ಹಾಗೂ ಹೆಚ್ಚು ಹಸಿರು ತರಕಾರಿ ತಿನ್ನಲು ಬಯಸುತ್ತಾರೆ. ಇದು ಆರೋಗ್ಯಕರವೂ ಆಗಿದೆ. ಬೆಂಡೆಕಾಯಿ ದೇಹಕ್ಕೆ ಬೇಕಾದ ಪೋಷಕಾಂಶ ಒದಗಿಸುತ್ತದೆ. ಇಂದು ಬೆಂಡೆಕಾಯಿ ಖಾದ್ಯ ತಯಾರಿಕೆ ಬಗ್ಗೆ ತಿಳಿಯೋಣ.

First published:

  • 17

    MORE
    GALLERIES

  • 27

    Morning Breakfast: ಗರಿ ಗರಿ ಬೆಂಡೆಕಾಯಿ ಮತ್ತು ಚಪಾತಿ ಬೆಳಗ್ಗಿನ ತಿಂಡಿಗೆ ಬೆಸ್ಟ್​ ಆಯ್ಕೆ!

    ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ ಬೆಂಡೆಕಾಯಿ. ಇದರಿಂದ ದೇಹಕ್ಕೆ ಹಲವು ಪೋಷಕಾಂಶಗಳು ದೊರೆಯುತ್ತವೆ. ಬೆಂಡೆಕಾಯಿ ಪಾಕವಿಧಾನದ ಬಗ್ಗೆ ನೋಡೋಣ. ಬೆಂಡೆಕಾಯಿ ಪ್ರೋಟೀನ್, ಕಾರ್ಬೋಹೈಡ್ರೇಟ್, ವಿಟಮಿನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಸೇರಿ ಅನೇಕ ಖನಿಜಗಳನ್ನು ಹೊಂದಿದೆ.

    MORE
    GALLERIES

  • 37

    Morning Breakfast: ಗರಿ ಗರಿ ಬೆಂಡೆಕಾಯಿ ಮತ್ತು ಚಪಾತಿ ಬೆಳಗ್ಗಿನ ತಿಂಡಿಗೆ ಬೆಸ್ಟ್​ ಆಯ್ಕೆ!

    ಬೆಂಡೆಕಾಯಿ ಅಲ್ಸರ್ ಸಮಸ್ಯೆ ದೂರವಾಗುತ್ತದೆ. ಮತ್ತು ಪೈಲ್ಸ್ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದರಲ್ಲಿ ವಿಟಮಿನ್ ಎ, ಸಿ, ಕೆ ಮತ್ತು ಬಿ6 ಇದೆ. ಗರಿ ಗರಿ ಬೆಂಡೆಕಾಯಿ ಖಾದ್ಯ ಮತ್ತು ಚಪಾತಿ ಬೆಳಗಿನ ತಿಂಡಿಗೆ ಮಾಡುವುದು ಹೇಗೆ ನೋಡೋಣ.

    MORE
    GALLERIES

  • 47

    Morning Breakfast: ಗರಿ ಗರಿ ಬೆಂಡೆಕಾಯಿ ಮತ್ತು ಚಪಾತಿ ಬೆಳಗ್ಗಿನ ತಿಂಡಿಗೆ ಬೆಸ್ಟ್​ ಆಯ್ಕೆ!

    ಗರಿಗರಿಯಾದ ಬೆಂಡೆಕಾಯಿ ಖಾದ್ಯ ಮಾಡಲು ಬೇಕಾಗುವ ಪದಾರ್ಥಗಳು ಹೀಗಿವೆ. ಕತ್ತರಿಸಿದ ಬೆಂಡೆಕಾಯಿ ಅರ್ಧ ಕೆಜಿ, ಆವಕಾಡೊ ಎಣ್ಣೆ 2 ಟೀಸ್ಪೂನ್, ಜೀರಿಗೆ 1 ಟೀಸ್ಪೂನ್, ಕತ್ತರಿಸಿದ ಈರುಳ್ಳಿ 1, ಶುಂಠಿ 1 ಇಂಚು ಕತ್ತರಿಸಿದ್ದು, ಬೆಳ್ಳುಳ್ಳಿ ಕತ್ತರಿಸಿದ್ದು 1 ಟೀಸ್ಪೂನ್, ಅರಿಶಿನ 1/4 ಟೀಚಮಚ, ರುಚಿಗೆ ಉಪ್ಪು ಬೇಕು.

    MORE
    GALLERIES

  • 57

    Morning Breakfast: ಗರಿ ಗರಿ ಬೆಂಡೆಕಾಯಿ ಮತ್ತು ಚಪಾತಿ ಬೆಳಗ್ಗಿನ ತಿಂಡಿಗೆ ಬೆಸ್ಟ್​ ಆಯ್ಕೆ!

    ಗರಿಗರಿಯಾದ ಬೆಂಡೆಕಾಯಿ ತಯಾರಿಸುವ ವಿಧಾನ ಹೀಗಿದೆ. ಮೊದಲು ಬೆಂಡೆಕಾಯಿ ತೊಳೆದು ಒಣಗಿಸಿ. ಈಗ ಅದನ್ನು ಮಧ್ಯಮ ಗಾತ್ರದಲ್ಲಿ ತುಂಡುಗಳಾಗಿ ಕತ್ತರಿಸಿ. ಈಗ ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಆವಕಾಡೊ ಎಣ್ಣೆ ಸೇರಿಸಿ. ಜೀರಿಗೆ ಹಾಕಿ ಫ್ರೈ ಮಾಡಿ. ನಂತರ ಕತ್ತರಿಸಿದ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ಉದ್ದವಾಗಿ ಕತ್ತರಿಸಿದ ಈರುಳ್ಳಿ ಹಾಕಿ ಫ್ರೈ ಮಾಡಿ.

    MORE
    GALLERIES

  • 67

    Morning Breakfast: ಗರಿ ಗರಿ ಬೆಂಡೆಕಾಯಿ ಮತ್ತು ಚಪಾತಿ ಬೆಳಗ್ಗಿನ ತಿಂಡಿಗೆ ಬೆಸ್ಟ್​ ಆಯ್ಕೆ!

    ಸ್ವಲ್ಪ ಸಮಯದ ನಂತರ ಕತ್ತರಿಸಿದ ಬೆಂಡೆಕಾಯಿ ಸೇರಿಸಿ. ಈರುಳ್ಳಿಯೊಂದಿಗೆ ಸಂಪೂರ್ಣವಾಗಿ ಮಿಶ್ರಣ ಮಾಡಿ. ನಂತರ ಅರಿಶಿನ ಮತ್ತು ಉಪ್ಪು, ಖಾರ ಸೇರಿಸಿ. ನಂತರ ನಿಮಗೆ ಬೇಕಾದ ಮಸಾಲಾ ಸೇರಿಸಬಹುದು. ಈಗ ಚೆನ್ನಾಗಿ ಫ್ರೈ ಮಾಡಿ. ಡ್ರೈ ಆದ ನಂತರ ಮತ್ತೊಮ್ಮೆ ಮಿಕ್ಸ್ ಮಾಡಿ ಸರ್ವ್ ಮಾಡಿ.

    MORE
    GALLERIES

  • 77

    Morning Breakfast: ಗರಿ ಗರಿ ಬೆಂಡೆಕಾಯಿ ಮತ್ತು ಚಪಾತಿ ಬೆಳಗ್ಗಿನ ತಿಂಡಿಗೆ ಬೆಸ್ಟ್​ ಆಯ್ಕೆ!

    ಈಗ ಬೆಂಡೆಕಾಯಿ ಖಾದ್ಯಕ್ಕೆ ಗೋಧಿ ಹಿಟ್ಟಿನ ಚಪಾತಿ ಮಾಡಿ. ನಿಮಗೆ ಬೇಕಾದಷ್ಟು ಗೋಧಿ ಹಿಟ್ಟು ತೆಗೆದುಕೊಂಡು ನೀರು ಹಾಕುತ್ತಾ ನಾದಿಕೊಳ್ಳಿ. 5 ನಿಮಿಷದ ನಂತರ ಚಿಕ್ಕ ಉಂಡೆ ಮಾಡಿ, ಚಪಾತಿ ಲಟ್ಟಿಸಿ. ತವೆಯ ಮೇಲೆ ಸ್ವಲ್ಪ ಎಣ್ಣೆ ಹಾಕಿ ಚಪಾತಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ಸರ್ವ್ ಮಾಡಿ. ಬೆಂಡೆಕಾಯಿ ಮತ್ತು ಚಪಾತಿ ಸವಿಯಿರಿ.

    MORE
    GALLERIES