Covid 19 And H3N2 Virus: ಜನರ ಜೀವ ಹಿಂಡುತ್ತಿರುವ ಕೊರೊನಾ, H3N2 ನಿಂದ ಬಚಾವಾಗಲು ಈ ನೈಸರ್ಗಿಕ ಕ್ರಮ ಫಾಲೋ ಮಾಡಿ!

ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ಮತ್ತು H3N2 ವೈರಸ್ ದೇಶದಲ್ಲಿ ಜನರನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಎರಡೂ ವೈರಸ್‌ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. 129 ದಿನಗಳ ನಂತರ ದೇಶದಲ್ಲಿ ಒಂದೇ ದಿನದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬಂದಿವೆ. ಇದನ್ನು ನಿಯಂತ್ರಿಸಲು ಪರಿಣಾಮಕಾರಿ ಕೆಲವು ನೈಸರ್ಗಿಕ ಕ್ರಮಗಳ ಬಗ್ಗೆ ತಿಳಿಯೋಣ.

First published:

  • 18

    Covid 19 And H3N2 Virus: ಜನರ ಜೀವ ಹಿಂಡುತ್ತಿರುವ ಕೊರೊನಾ, H3N2 ನಿಂದ ಬಚಾವಾಗಲು ಈ ನೈಸರ್ಗಿಕ ಕ್ರಮ ಫಾಲೋ ಮಾಡಿ!

    ದೇಶದಲ್ಲಿ H3N2 ವೈರಸ್ ಪ್ರಕರಣಗಳು ಮತ್ತು ಕೊರೊನಾ ಪ್ರಕರಣಗಳು ಹೆಚ್ಚು ವರದಿಯಾಗಿವೆ. XBB ವೇರಿಯಂಟ್‌ನ ಹೊಸ ಉಪ ವೇರಿಯಂಟ್ XBB 1.16 ಕೊರೊನಾ ಪ್ರಕರಣಗಳ ಹಠಾತ್ ಉಲ್ಬಣಕ್ಕೆ ಕಾರಣ ಎನ್ನಲಾಗಿದೆ. H3N2 ವೈರಸ್ ಕೂಡ ವೇಗವಾಗಿ ಹರಡುತ್ತಿದೆ. ಕೆಮ್ಮು, ಜ್ವರ, ತಲೆನೋವು, ಗಂಟಲು ನೋವು, ಸುಸ್ತು, ಸ್ರವಿಸುವ ಮೂಗು, ಗಂಟಲಿನಲ್ಲಿ ಕಫ ಇದು ರೋಗಿಗಳನ್ನು ಕಾಡುತ್ತಿದೆ.

    MORE
    GALLERIES

  • 28

    Covid 19 And H3N2 Virus: ಜನರ ಜೀವ ಹಿಂಡುತ್ತಿರುವ ಕೊರೊನಾ, H3N2 ನಿಂದ ಬಚಾವಾಗಲು ಈ ನೈಸರ್ಗಿಕ ಕ್ರಮ ಫಾಲೋ ಮಾಡಿ!

    ಇನ್ನು ಎರಡೂ ವೈರಸ್ ಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಈಗಾಗಲೇ ಸರ್ಕಾರಗಳು ಕೆಲವು ನಿಬಂಧನೆಗಳನ್ನು ಹೊರಡಿಸಿದೆ. ಸೋಪ್ ಮತ್ತು ನೀರಿನಿಂದ ಆಗಾಗ್ಗೆ ಕೈಗಳನ್ನು ತೊಳೆಯುವುದು, ಹೊರಗೆ ಓಡಾಡುವಾಗ ಮಾಸ್ಕ್ ಧರಿಸುವುದು, ಹೆಚ್ಚು ಜನಸಂದಣಿಯಿರುವ ಪ್ರದೇಶಗಳಲ್ಲಿ ಓಡಾಟ ತಪ್ಪಿಸುವುದು, ಸೀನುವಾಗ ಮತ್ತು ಕೆಮ್ಮುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು, ಉತ್ತಮ ಆಹಾರ ಸೇವಿಸಬೇಕು.

    MORE
    GALLERIES

  • 38

    Covid 19 And H3N2 Virus: ಜನರ ಜೀವ ಹಿಂಡುತ್ತಿರುವ ಕೊರೊನಾ, H3N2 ನಿಂದ ಬಚಾವಾಗಲು ಈ ನೈಸರ್ಗಿಕ ಕ್ರಮ ಫಾಲೋ ಮಾಡಿ!

    ಇನ್ನು ಎರಡೂ ವೈರಸ್ ಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಕೆಲವು ವಿಷಯಗಳ ಬಗ್ಗೆ ಗಮನ ಹರಿಸಬೇಕು. ರೋಗ ನಿರೋಧಕ ಶಕ್ತಿ ಬಲಪಡಿಸುವ ಪದಾರ್ಥ ಸೇವಿಸಿ. ಸೋಂಕು, ವೈರಸ್ ವಿರುದ್ಧ ಹೋರಾಡಲು ಶಕ್ತಿ ಬೇಕು. ಹಾಗಾದ್ರೆ ತಜ್ಞರು ಹೇಳಿರುವ ಈ ಕ್ರಮಗಳನ್ನು ಫಾಲೋ ಮಾಡಿ. ವೈರಸ್ ನಿಂದ ಬಚಾವಾಗಿ.

    MORE
    GALLERIES

  • 48

    Covid 19 And H3N2 Virus: ಜನರ ಜೀವ ಹಿಂಡುತ್ತಿರುವ ಕೊರೊನಾ, H3N2 ನಿಂದ ಬಚಾವಾಗಲು ಈ ನೈಸರ್ಗಿಕ ಕ್ರಮ ಫಾಲೋ ಮಾಡಿ!

    ಹೆಚ್ಚು ಪ್ರೋಟೀನ್ ಭರಿತ ಆಹಾರ ಸೇವಿಸಿ. ಪ್ರತಿದಿನ ಪ್ರೊಟೀನ್ ಭರಿತ ಆಹಾರ ಸೇವಿಸಿದರೆ ಅದು ನಿಮ್ಮ ಸ್ನಾಯುಗಳನ್ನು ನಿರ್ಮಿಸುವುದು, ಅಂಗಾಂಶವನ್ನು ನಿರ್ಮಿಸುವುದು ಮತ್ತು ಸರಿಪಡಿಸುವುದು, ಗುಣಪಡಿಸುವುದು ಮತ್ತು ಚೇತರಿಕೆಯ ಪ್ರಕ್ರಿಯೆ ಹೆಚ್ಚಿಸುತ್ತದೆ. ಹಾಲಿನ ಉತ್ಪನ್ನಗಳು, ಮೊಸರು, ಪನೀರ್, ಸೋಯಾ, ಕಾಳುಗಳು, ಬೀಜಗಳು ಮತ್ತು ಬೇಯಿಸಿದ ಮೊಟ್ಟೆ ಸೇವಿಸಿ.

    MORE
    GALLERIES

  • 58

    Covid 19 And H3N2 Virus: ಜನರ ಜೀವ ಹಿಂಡುತ್ತಿರುವ ಕೊರೊನಾ, H3N2 ನಿಂದ ಬಚಾವಾಗಲು ಈ ನೈಸರ್ಗಿಕ ಕ್ರಮ ಫಾಲೋ ಮಾಡಿ!

    ಜೀವಸತ್ವಗಳು ಮತ್ತು ಖನಿಜಗಳನ್ನು ಸೇವಿಸಿ. ಇದು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ. ತಾಜಾ ಋತುಮಾನದ ಹಣ್ಣುಗಳು ಮತ್ತು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಇವುಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಡಿ, ಸತು ಮತ್ತು ಸೆಲೆನಿಯಮ್ ಯುಕ್ತ ಪದಾರ್ಥ ಸೇವಿಸಿ.

    MORE
    GALLERIES

  • 68

    Covid 19 And H3N2 Virus: ಜನರ ಜೀವ ಹಿಂಡುತ್ತಿರುವ ಕೊರೊನಾ, H3N2 ನಿಂದ ಬಚಾವಾಗಲು ಈ ನೈಸರ್ಗಿಕ ಕ್ರಮ ಫಾಲೋ ಮಾಡಿ!

    ಎರಡೂ ವೈರಸ್ ಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಪ್ರೋಬಯಾಟಿಕ್‌ ಸಮೃದ್ಧ ಆಹಾರ ಸೇವಿಸಿ. ಮೊಸರು, ಮಜ್ಜಿಗೆ, ಕಾಟೇಜ್ ಚೀಸ್ ಮತ್ತು ಇತರೆ ಹುದುಗಿಸಿದ ಆಹಾರ ಸೇವಿಸಿ. ಪ್ರಿ-ಬಯೋಟಿಕ್‌ ಆಹಾರ ಸೇವಿಸಿ. ಈ ವಸ್ತುಗಳು ಹೊಟ್ಟೆ ಮತ್ತು ಕರುಳಿನಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾ ತೊಡೆದು ಹಾಕುತ್ತವೆ.

    MORE
    GALLERIES

  • 78

    Covid 19 And H3N2 Virus: ಜನರ ಜೀವ ಹಿಂಡುತ್ತಿರುವ ಕೊರೊನಾ, H3N2 ನಿಂದ ಬಚಾವಾಗಲು ಈ ನೈಸರ್ಗಿಕ ಕ್ರಮ ಫಾಲೋ ಮಾಡಿ!

    ಗಿಡಮೂಲಿಕೆಗಳು ಮತ್ತು ಮಸಾಲೆ ಸೇವನೆಯು ನಿಮಗೆ ಜ್ವರ ಮತ್ತು ಕಫ, ಕೆಮ್ಮು ನಿವಾರಣೆಗೆ ಉತ್ತಮ ಪರಿಹಾರಗಳಾಗಿವೆ. ಉರಿಯೂತ, ಆಂಟಿಮೈಕ್ರೊಬಿಯಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿವೆ. ತುಳಸಿ, ಒಣ ಶುಂಠಿ, ಲಿಂಬೆರಸ, ಬೆಳ್ಳುಳ್ಳಿ, ಅರಿಶಿನ, ಕರಿಮೆಣಸು, ಕೊತ್ತಂಬರಿ ಇತ್ಯಾದಿ ಆಹಾರದಲ್ಲಿ ಸೇರಿಸಿ.

    MORE
    GALLERIES

  • 88

    Covid 19 And H3N2 Virus: ಜನರ ಜೀವ ಹಿಂಡುತ್ತಿರುವ ಕೊರೊನಾ, H3N2 ನಿಂದ ಬಚಾವಾಗಲು ಈ ನೈಸರ್ಗಿಕ ಕ್ರಮ ಫಾಲೋ ಮಾಡಿ!

    ಒಮೆಗಾ 3 ಮತ್ತು ಒಮೆಗಾ 6 ಸಮೃದ್ಧ ಬಾದಾಮಿ, ವಾಲ್ನಟ್ಸ್, ಚಿಯಾ ಬೀಜಗಳು, ಅಗಸೆ ಬೀಜಗಳು, ಕುಂಬಳಕಾಯಿ ಬೀಜಗಳು ಮತ್ತು ಸೂರ್ಯಕಾಂತಿ ಬೀಜ ಸೇವಿಸಿ. ತೆಂಗಿನ ನೀರು, ನಿಂಬೆ ನೀರು, ತಾಜಾ ಮನೆಯಲ್ಲಿ ತಯಾರಿಸಿದ ಸೂಪ್‌, ಮಜ್ಜಿಗೆ ಮತ್ತು ಹಸಿರು ಚಹಾ ಸೇವಿಸಿ. ಹೆಚ್ಚು ನೀರು ಕುಡಿಯಿರಿ.

    MORE
    GALLERIES