Christmas Gifts: ಮಕ್ಕಳಿಗೆ ಕ್ರಿಸ್ಮಸ್ ಗಿಫ್ಟ್ ಕೊಡೋಕೆ ಇಲ್ಲಿದೆ ಮಸ್ತ್ ಐಡಿಯಾಗಳು
Christmas Gifts for Kids: ಕ್ರಿಸ್ಮಸ್ ಎಂದರೆ ಮೊದಲು ನೆನಪಾಗುವುದು ಕ್ರಿಸ್ಮಸ್ ಗಿಫ್ಟ್. ಅದರಲ್ಲೂ ಮಕ್ಕಳಿಗೆ ಈ ಸಮಯದಲ್ಲಿ ಏನು ಗಿಫ್ಟ್ ಸಿಗುತ್ತದೆ ಎನ್ನುವ ಬಗ್ಗೆ ಬಹಳ ಕುತೂಹಲ ಇರುತ್ತದೆ. ನೀವು ಸಹ ಮಕ್ಕಳಿಗೆ ಗಿಫ್ಟ್ ಕೊಡುವ ಆಲೋಚನೆಯಲ್ಲಿದ್ದರೆ ಕೆಲ ಐಡಿಯಾಗಳು ಇಲ್ಲಿದೆ.
ಸ್ಟೋರಿ ಬುಕ್: ಮಕ್ಕಳಿಗೆ ಕಥೆ ಪುಸ್ತಕಗಳನ್ನು ಕೊಡುವುದು ನಿಜಕ್ಕೂ ಬೆಸ್ಟ್ ಐಡಿಯಾ ಎನ್ನಬಹುದು. ನೀತಿ ಕಥೆಗಳ ಪುಸ್ತಕ ಮಕ್ಕಳಿಗೆ ಇಷ್ಟವಾಗುತ್ತದೆ ಹಾಗೂ ಅವರ ಬೆಳವಣಿಗೆಗೆ ಸಹ ಸಹಾಯ ಮಾಡುತ್ತದೆ.
2/ 8
ಕಿಚನ್ ಸೆಟ್: ಹೆಣ್ಣು ಮಕ್ಕಳಿಗೆ ಗಿಫ್ಟ್ ಕೊಡುವುದಾದರೆ ಕಿಚನ್ ಸೆಟ್ ಉತ್ತಮ ಎನ್ನಬಹುದು. ಪುಟ್ಟ ಪುಟ್ಟ ಕಿಚನ್ ಸೆಟ್ಗಳು ಮಾರುಕಟ್ಟೆಯಲ್ಲಿ ವಿಭಿನ್ನ ರೀತಿಯಲ್ಲಿ ಸಹ ಲಭ್ಯವಿದೆ. ಇದು ಮಕ್ಕಳು ಉತ್ತಮವಾಗಿ ಸಮಯ ಕಳೆಯಲು ಸಹಾಯ ಮಾಡುತ್ತದೆ.
3/ 8
ಪೇಯ್ಟಿಂಗ್ ವಸ್ತುಗಳು: ಮಕ್ಕಳಿಗೆ ಚಿತ್ರ ಬಿಡಿಸುವುದು ಎಂದರೆ ಬಹಳ ಇಷ್ಟ. ಹಾಗಾಗಿ ಪೇಯ್ಟಿಂಗ್ ಬಾಕ್ಸ್, ಕ್ರೇಯನ್ಸ್ ಅಥವಾ ಬುಕ್ಗಳನ್ನು ಸಹ ಗಿಫ್ಟ್ ಕೊಡಬಹುದು. ಚಿತ್ರ ಬಿಡಿಸುವುದರಿಂದ ಮಕ್ಕಳಲ್ಲಿ ಕ್ರಿಯಶೀಲತೆ ಹೆಚ್ಚಾಗುತ್ತದೆ.
4/ 8
ಸೈಕಲ್: ಮಕ್ಕಳಿಗೆ ಸೈಕಲ್ ಎಂದರೆ ಬಹಳ ಇಷ್ಟವಾಗುತ್ತದೆ. ಇದು ಮಕ್ಕಳ ದೈಹಿಕ ಬೆಳವಣಿಗೆಗೆ ಸಹ ಸಹಾಯ ಮಾಡುತ್ತದೆ. ಈ ಬಾರಿ ಕ್ರಿಸ್ಮಸ್ಗೆ ನೀವು ಮಕ್ಕಳಿಗೆ ಸೈಕಲ್ ಗಿಫ್ಟ್ ಕೊಡಬಹುದು.
5/ 8
ಬಟ್ಟೆ: ಚಳಿಗಾಲದ ಸಮಯದಲ್ಲಿ ಮಕ್ಕಳಿಗೆ ವಿಭಿನ್ನ ಕಲೆಕ್ಷನ್ ಲಭ್ಯವಿರುತ್ತದೆ. ಕ್ಯೂಟ್ ಕ್ಯೂಟ್ ಬಟ್ಟೆಗಳನ್ನು ಗಿಫ್ಟ್ ಕೊಡಬಹುದು. ಇದರ ಜೊತೆಗೆ ಕಿವಿ ಓಲೆ, ಸರ ಹೀಗೆ ಬಟ್ಟೆಗೆ ಮ್ಯಾಚ್ ಆಗುವ ಆಭರಣಗಳನ್ನು ಸಹ ಕೊಡಬಹುದು.
6/ 8
ಕಾರು ಮತ್ತು ಇತರ ಆಟದ ಸಾಮಾನುಗಳು: ಮಕ್ಕಳಿಗೆ ಅದರಲ್ಲೂ ಗಂಡು ಮಕ್ಕಳಿಗೆ ಕಾರು ಎಂದರೆ ಅದೇನೋ ಪ್ರೀತಿ ಇರುತ್ತದೆ. ಹಾಗೆಯೇ ಇತರ ಆಟದ ಸಾಮಾನುಗಳು ಎಂದರೆ ಸಹ ಇಷ್ಟ. ಹಾಗಾಗಿ ನೀವು ಕಾರು ಹಾಗೂ ಬೇರೆ ಆಟದ ಸಾಮಾನುಗಳನ್ನು ಗಿಫ್ಟ್ ಕೊಡಬಹುದು.
7/ 8
ಬೌನ್ಸಿ ಹೌಸ್: ನೀವು ಯಾವುದಾದರೂ ಜಾತ್ರೆ ಅಥವಾ ಮೇಳಗಳಿಗೆ ಹೋದರೆ ಅಲ್ಲಿ ಮಕ್ಕಳು ಜಂಪ್ ಮಾಡುವ ಕೆಲ ಆಟಗಳನ್ನು ನೋಡಿರಬಹುದು. ಆ ರೀತಿಯ ಬೌನ್ಸಿ ಹೌಸ್ಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಇದನ್ನು ಸಹ ನೀವು ಗಿಫ್ಟ್ ಕೊಡಬಹುದು.
8/ 8
ಈ ರೀತಿಯ ಆಟಿಕೆಗಳು ಮಾತ್ರವಲ್ಲದೇ ಬುದ್ದಿ ಚುರುಕು ಮಾಡುವ ಹಾಗೂ ಮೆದುಳಿಗೆ ಕೆಲಸ ನೀಡುವ ಹಲವಾರು ಆಟಿಕೆಗಳು ಸಹ ಸಿಗುತ್ತದೆ. ಅವುಗಳನ್ನು ನೀಡುವುದು ಒಳ್ಲೆಯ ಆಯ್ಕೆ.