ಆಲಿವ್ ಎಣ್ಣೆಯನ್ನು ಸಾಮಾನ್ಯವಾಗಿ ಯುರೋಪಿಯನ್ ಅಡುಗೆಗಳಲ್ಲಿ ಬಳಸಲಾಗುತ್ತದೆ. ಬೇಕಿಂಗ್, ಫ್ರೈಯಿಂಗ್, ಸಲಾಡ್ ಡ್ರೆಸ್ಸಿಂಗ್ ಸೇರಿದಂತೆ ವಿವಿಧ ಪದಾರ್ಥಗಳ ತಯಾರಿಕೆಗೆ ಈ ಎಣ್ಣೆ ಬೇಕಾಗುತ್ತದೆ. ವಿಟಮಿನ್ ಇ ಸಮೃದ್ಧವಾಗಿರುವ ಈ ಎಣ್ಣೆಯು ಉತ್ಕರ್ಷಣ ನಿರೋಧಕವಾಗಿಯೂ ಪರಿಣಾಮಕಾರಿಯಾಗಿದೆ. ಆದರೆ ಹೆಚ್ಚಾಗಿ ವರ್ಜಿನ್ ಆಲಿವ್ ಎಣ್ಣೆಯು ಕೊಲೆಸ್ಟಾಲ್ ಹೊಂದಿರುವವರ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಅಧ್ಯಯನವೊಂದರ ಮೂಲಕ ತಿಳಿದು ಬಂದಿದೆ.