ಕಬ್ಬಿಣ ಅಥವಾ ಮಣ್ಣಿನ ಪಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರು ಭಾವಿಸುತ್ತಾರೆ ಆದರೆ ನಾನ್ ಸ್ಟಿಕ್ ಪಾತ್ರೆಗಳು ತೈಲ ಸೇವನೆಯನ್ನು ಕಡಿಮೆ ಮಾಡಲು ಮುಖ್ಯ ಆಶಯವಾಗಿದೆ ಆದರೆ ನೀವು ನಾನ್ ಸ್ಟಿಕ್ ಕುಕ್ ವೇರ್ ಖರೀದಿಸಿದರೆ, ನೀವು ಖಂಡಿತವಾಗಿಯೂ ಎಣ್ಣೆಯನ್ನು ಉಳಿಸಬಹುದು. ಇವು ಕೊಂಚ ಕಾಸ್ಟ್ಲಿ ಆಗಿರಬಹುದು. ಹಾಗಾಗಿ ಬೆಲೆ ಹೆಚ್ಚಿದ್ದರೂ ಖರೀದಿಸುವುದು ಉತ್ತಮ. ಈ ವಿಚಾರದಲ್ಲಿ ಎಂದಿಗೂ ರಾಜಿ ಆಗಬೇಡಿ.
ಎಣ್ಣೆಯನ್ನು ಹಾಕಲು ಒಂದು ಲೋಟ ಅಥವಾ ಚಮಚವನ್ನು ಬಳಸಿ. ನೀವು ಎಣ್ಣೆಯನ್ನು ಪ್ಯಾಕೆಟ್ ಅಥವಾ ಡಬ್ಬದಲ್ಲಿ ಖರೀದಿಸುತ್ತೀರಾ. ಈ ವೇಳೆ ಕೆಲವರು ಅಡುಗೆ ಮಾಡುವಾಗ ಎಣ್ಣೆಯನ್ನು ಡಬ್ಬಿ ಅಥವಾ ಪ್ಯಾಕೆಟ್ನಿಂದ ನೇರವಾಗಿ ಪ್ಯಾನ್ ಅಥವಾ ಅಡುಗೆ ಪಾತ್ರೆಗೆ ಸುರಿಯುತ್ತಾರೆ. ಆದರೆ ಹೀಗೆ ಮಾಡಿದರೆ ಎಣ್ಣೆ ಹೆಚ್ಚು ಬಳಕೆಯಾಗುತ್ತದೆ. ಆದ್ದರಿಂದ ಚಮಚ ಅಥವಾ ಲೋಟದ ಮೂಲಕ ಅಡುಗೆಗೆ ಬೇಕಾದಷ್ಟು ಎಣ್ಣೆಯನ್ನು ಬೆರೆಸಬಹುದು.