ಹೀಗೆ ಮಾಡಬೇಡಿ, ನಿಮ್ಮ ಪ್ರಿಯತಮೆಯ ಆಯುಷ್ಯ ಕಡಿಮೆ ಆಗಬಹುದು!
ಹೊಂದಾಣಿಕೆ ಸರಿ ಇಲ್ಲದಿದ್ದರೆ ಸಂಬಂಧಗಳು ಮುರಿದು ಬೀಳುತ್ತವೆ. ಆದರೆ, ಕೆಲವು ಸಂದರ್ಭಗಳಲ್ಲಿ ನೀವು ಮಾಡುವ ತಪ್ಪು ನಿಮ್ಮ ಸಂಗಾತಿಯ ಆಯುಷ್ಯ ಕಡಿಮೆ ಆಗಬಹುದು! ಅದು ಹೇಗೆ ಅಂತೀರಾ ಅದಕ್ಕೆ ಇಲ್ಲಿದೆ ಉತ್ತರ.
News18 Kannada | June 29, 2020, 11:40 AM IST
1/ 14
ಪ್ರೀತಿ, ಪ್ರೇಮ ಎಂದಾಗ ಅದರಲ್ಲಿ ಜಗಳಗಳು ಸಾಮಾನ್ಯ. ಇನ್ನು, ಕೆಲವೊಮ್ಮೆ ಪ್ರೀತಿಗಿಂತ ಹೆಚ್ಚು ಜಗಳವೇ ತುಂಬಿ ಬಿಡುತ್ತದೆ.
2/ 14
ಸಂಬಂಧಗಳು ಹಳೆಯದಾಗುತ್ತಾ ಹೋದಂತೆ ಕೆಲವೊಮ್ಮೆ ಅವು ಗಟ್ಟಿ ಆದರೆ, ಇನ್ನೂ ಕೆಲವೊಮ್ಮೆ ಸಡಿಲವಾಗಿ ಬಿಡುತ್ತವೆ. ಇದಕ್ಕೆ ನಾನಾ ಕಾರಣಗಳು ಇರಬಹುದು.
3/ 14
ಹೊಂದಾಣಿಕೆ ಸರಿ ಇಲ್ಲದಿದ್ದರೆ ಸಂಬಂಧಗಳು ಮುರಿದು ಬೀಳುತ್ತವೆ. ಆದರೆ, ಕೆಲವು ಸಂದರ್ಭಗಳಲ್ಲಿ ನೀವು ಮಾಡುವ ತಪ್ಪು ನಿಮ್ಮ ಸಂಗಾತಿಯ ಆಯುಷ್ಯ ಕಡಿಮೆ ಆಗಬಹುದು! ಅದು ಹೇಗೆ ಅಂತೀರಾ ಅದಕ್ಕೆ ಇಲ್ಲಿದೆ ಉತ್ತರ.
4/ 14
ನಾವು ಸರಿಯಾಗಿದ್ದೇವೆ ಎಂಬುದನ್ನು ಸಾಬೀತು ಮಾಡಲು ಪದೇಪದೆ ನಮ್ಮ ಸಂಗಾತಿಯ ತಪ್ಪನ್ನು ಎತ್ತಿ ಹೇಳುತ್ತೇವೆ.
5/ 14
ನೀನು ಹಾಗೆ ಮಾಡಬಾರದಿತ್ತು, ಹೀಗೆ ಮಾಡಬಾರದಿತ್ತು, ಇದರಿಂದ ಬೇಸರವಾಗಿದೆ, ಇದು ನನಗೆ ಖುಷಿ ನೀಡುತ್ತಿಲ್ಲ ಎಂದು ಅನೇಕರು ಅಪಸ್ವರ ಎತ್ತುತ್ತಾರೆ. ಹೀಗೆ ಮಾಡುವುದರಿಂದ ಆಕೆಗೆ ಖಿನ್ನತೆ ಕಾಡಬಹುದಂತೆ.
6/ 14
ಈ ರೀತಿಯ ಋಣಾತ್ಮಕ ಹೇಳಿಕೆಗಳಿಂದ ಸಂಗಾತಿಯ ಮನಸ್ಥಿತಿ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ಇದರಿಂದ ಆಯುಷ್ಯ ಕಡಿಮೆ ಆಗಬಹುದು ಎಂದು ತಜ್ಞರು ಹೇಳಿದ್ದಾರೆ.
7/ 14
ಹೆಣ್ಣಿನ ಮನಸ್ಸು ತುಂಬಾನೇ ಸೂಕ್ಷ್ಮ. ನೀವು ಹೇಳುವ ಪ್ರತಿ ವಿಚಾರಗಳು ಅವರು ಗಂಭೀರವಾಗಿ ಪರಿಗಣಿಸುತ್ತಾರೆ. ಟೀಕೆಗಳಿಂದ ಅವರ ಮೇಲೆ ನಮಗೆ ಗೊತ್ತಿಲ್ಲದೆ ಒತ್ತಡ ಸೃಷ್ಟಿ ಆಗುತ್ತದೆ. ಇದರಿಂದ ಆಯಸ್ಸು ಕಡಿಮೆ ಆಗುತ್ತದೆ ಎನ್ನುತ್ತಾರೆ ತಜ್ಞರು.
8/ 14
ಈ ಕುರಿತಂತೆ 1,734 ಜೋಡಿಗಳನ್ನು ತಜ್ಞರ ತಂಡ ಅಧ್ಯಯನಕ್ಕೆ ಒಳಪಡಿಸಿತ್ತು. ಈ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
9/ 14
ಇನ್ನು, ಹೆಣ್ಣುಮಕ್ಕಳು ತಮ್ಮ ಪಾರ್ಟನರ್ ಬಗ್ಗೆ ಟೀಕೆಗಳ ಸುರಿಮಳೆ ಗೈದರೆ ಆಗಲೂ ಗಂಡು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆಯಂತೆ. ಆದರೆ, ಹೆಣ್ಣುಮಕ್ಕಳಿಗೆ ಹೋಲಿಕೆ ಮಾಡಿದರೆ ಗಂಡುಮಕ್ಕಳಲ್ಲಿ ರಿಸ್ಕ್ ಕಡಿಮೆ.
10/ 14
ಹೀಗಾಗಿ ಟೀಕೆಗಳನ್ನು ಮಾಡದೆ, ಹೊಂದಿಕೊಂಡು ಹೋಗಿ ಎನ್ನುತ್ತದೆ ಅಧ್ಯಯನ.
11/ 14
ಹೀಗಾಗಿ, ಟೀಕೆ ಮಾಡಿದರೆ ಏನಾಗುತ್ತದೆ ಎಂದು ಪ್ರಶ್ನೆ ಮಾಡೋ ಬದಲು ಇದನ್ನು ಒಮ್ಮೆ ಓದಿ.