ಯಾವುದೇ ಋತುವಿನಲ್ಲಿ ಬೇಕಾದ್ರೂ ಕೆಮ್ಮು ಬರುವ ಸಾಧ್ಯತೆ ಹೆಚ್ಚು. ಇದು ಕೇವಲ ಚಳಿಗಾಲದಲ್ಲಿ ಬರುವ ಸಮಸ್ಯೆಯಲ್ಲ. ಕೆಲವೊಮ್ಮೆ ಮಾಲಿನ್ಯ ಮತ್ತು ತಣ್ಣೀರು ಕುಡಿಯುದಾಗಲೂ ಸಹ ಕೆಮ್ಮು ಸಮಸ್ಯೆ ಉಂಟಾಗುತ್ತದೆ. ವಿಶೇಷವಾಗಿ ಮಕ್ಕಳು ಹೆಚ್ಚು ಕೆಮ್ಮು ಸಮಸ್ಯೆಗೆ ತುತ್ತಾಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಮ್ಮು ಸಿರಪ್ ರಾಸಾಯನಿಕಯುಕ್ತವಾಗಿದೆ ಎಂದು ಹೇಳಲಾಗುತ್ತಿದೆ.
ಹಾಗಾಗಿ ಕೆಮ್ಮನ್ನು ತೊಡೆದು ಹಾಕಲು ರಾಸಾಯನಿಕಯುಕ್ತ ಕೆಮ್ಮು ಸಿರಪ್ ಬೇರೆಲ್ಲಾ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ. ಇದು ನಿಮ್ಮನ್ನು ಕೆಮ್ಮು ಸಮಸ್ಯೆಯಿಂದ ನಿವಾರಣೆ ಮಾಡುತ್ತದೆ. ಆದರೆ ಕೆಮ್ಮಿನ ಸಿರಪ್ ವಿಷಕಾರಿ ರಾಸಾಯನಿಕ ಹೊಂದಿದೆ ಎಂಬ ದೂರುಗಳು ಸಾಕಷ್ಟು ಕೇಳಿ ಬಂದಿವೆ. ಗ್ಯಾಂಬಿಯಾ, ಉಜ್ಬೇಕಿಸ್ತಾನ್ ಸೇರಿ ಹಲವು ದೇಶಗಳು ಈ ಬಗ್ಗೆ ತಮ್ಮ ಅನುಮಾನ ವ್ಯಕ್ತಪಡಿಸಿವೆ.
ಡಿಇಜಿಗಳಿಂದ ಕಲುಷಿತಗೊಂಡಿರುವ ಭಾರತೀಯ ನಿರ್ಮಿತ ಕೆಮ್ಮಿನ ಸಿರಪ್ ಸೇವಿಸಿ ಸಾಯುತ್ತಿರುವ ಮಕ್ಕಳ ವರದಿಯನ್ನು ಗ್ಯಾಂಬಿಯಾ ಪ್ರಕಟಿಸಿದೆ. ಜನವರಿಯಲ್ಲಿ ಉಜ್ಬೇಕಿಸ್ತಾನ್ ಮತ್ತೊಂದು ದೂರಿನ ವರದಿ ಪ್ರಕಟಗೊಂಡಿದೆ. WHO ಅಕ್ಟೋಬರ್ 2022 ರಲ್ಲಿ ಈ ಕೆಮ್ಮಿನ ಸಿರಪ್ ಬಗ್ಗೆ ಎಚ್ಚರಿಕೆಯನ್ನು ನೀಡಿತು. ಕೆಮ್ಮಿನ ಸಿರಪ್ ಸೇವಿಸಿದ ನಂತರ ಉಜ್ಬೆಕ್ ಅಧಿಕಾರಿಗಳು ಮಕ್ಕಳ ಸಾವು ಸಂಭವಿಸಿದ ಬಗ್ಗೆ ವರದಿ ಮಾಡಿದ್ದಾರೆ.
ಕೆಮ್ಮು ಸಿರಪ್ ಗಳಲ್ಲಿರುವ ವಿಷಕಾರಿ ರಾಸಾಯನಿಕಗಳು, ಕೆಮ್ಮು ಸಿರಪ್‌ನಲ್ಲಿ ಆಲ್ಕೋಹಾಲ್ ಅಂಶ ಎಂದು ತಿಳಿಸಲಾಗಿದೆ. ಹಾಗಾಗಿ ಇವೆಲ್ಲಾ ಬಿಟ್ಟು, ಮನೆಮದ್ದು ಮಾಡುವ ಮೂಲಕ ಕೆಮ್ಮಿನ ಸಮಸ್ಯೆ ಕಡಿಮೆ ಮಾಡಲು ಜನರು ಮುಂದಾಗುತ್ತಿರುವುದು ಕಂಡು ಬಂದಿದೆ. ಕೆಮ್ಮಿನ ಸಿರಪ್ ಬದಲು ಮನೆಯಲ್ಲಿಯೇ ಪರಿಣಾಮಕಾರಿ ಗಿಡಮೂಲಿಕೆಗಳಿಂದ ಶೀತ ಮತ್ತು ಕೆಮ್ಮಿನ ಸಿರಪ್ ಮಾಡುವುದು ಹೇಗೆ ನೋಡೋಣ.
ಪಂಜಾಬ್‌ನಲ್ಲಿ ತಯಾರಿಸಲಾದ ಕೆಮ್ಮಿನ ಸಿರಪ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿತ್ತು, ಈ ಕೆಮ್ಮಿನ ಸಿರಪ್‌ನಲ್ಲಿ ವಿಷಕಾರಿ ರಾಸಾಯನಿಕಗಳು ಇರುವುದು ದೃಢಪಟ್ಟಿದೆ. ಹಾಗಾಗಿ ಗಿಡಮೂಲಿಕೆಗಳ ಶೀತ ಮತ್ತು ಕೆಮ್ಮಿನ ಸಿರಪ್ ಮನೆಮದ್ದು ತಯಾರು ಮಾಡುವುದು ಹೆಚ್ಚಿದೆ. ಬೆಳ್ಳುಳ್ಳಿ. ಔಷಧೀಯ, ಉರಿಯೂತದ, ಆಂಟಿವೈರಲ್ ಮತ್ತು ಆಂಟಿಫಂಗಲ್ ಗುಣಲಕ್ಷಣ ಹೊಂದಿದೆ. ಇದು ಕೆಮ್ಮು ಮತ್ತು ಕಫ ತೆಗೆದು ಹಾಕುತ್ತದೆ.
ಶುಂಠಿ. ಉರಿಯೂತ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್, ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿವೆ. ಕೆಮ್ಮಿನಲ್ಲಿ ಶುಂಠಿ ಚಹಾ ಮತ್ತು ಅದರ ಕಷಾಯ ತೆಗೆದುಕೊಳ್ಳಿ. ನೋಯುತ್ತಿರುವ ಗಂಟಲಿನ ರೋಗಲಕ್ಷಣ ನಿವಾರಿಸಲು ಇದು ಪರಿಣಾಮಕಾರಿ. ತುಳಸಿ ಹಸಿರು ಎಲೆಗಳು ಆಂಟಿಮೈಕ್ರೊಬಿಯಲ್, ಉರಿಯೂತ, ಆಂಟಿಟಸ್ಸಿವ್ ಮತ್ತು ಅಲರ್ಜಿ ವಿರೋಧಿ ಗುಣಲಕ್ಷಣ ಹೊಂದಿದೆ. ಶೀತ ಮತ್ತು ಕೆಮ್ಮಿನ ಸೋಂಕು ನಿವಾರಿಸುತ್ತದೆ.
ಲೆಮೊನ್ಗ್ರಾಸ್. ಲಿಂಬೆರಸವು ಶೀತ, ಕೆಮ್ಮು ಮತ್ತು ಜ್ವರದ ಲಕ್ಷಣ ನಿವಾರಿಸುತ್ತದೆ. ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಈಗ ಬೆಳಿಗ್ಗೆ ನೀರನ್ನು ಕುದಿಸಿ ಮತ್ತು ಚಹಾದ ರೂಪದಲ್ಲಿ ಸೇವಿಸಿ. ಲಿಂಬೆರಸ ಚಹಾವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಮತ್ತು ಶೀತ ಮತ್ತು ಕೆಮ್ಮಿನ ಸಮಸ್ಯೆ ನಿವಾರಿಸುತ್ತದೆ. ಲಿಂಬೆರಸದಲ್ಲಿ ವಿಟಮಿನ್ ಸಿ ಕೂಡ ಇದೆ. ಇದು ಸೋಂಕಿನ ವಿರುದ್ಧ ಹೋರಾಡುತ್ತದೆ.