ಬೇಸಿಗೆಯಲ್ಲಿ ಎಳನೀರನ್ನು ಕುಡಿಯುವುದರಲ್ಲಿ ಸಿಗುವ ಖುಷಿ ಮತ್ತೊಂದಿಲ್ಲ. ಅದರಲ್ಲಿಯೂ ಎಳನೀರಿನ ಚಿಪ್ಪಿನಲ್ಲಿ ಸಿಗುವ ಗಂಜಿಯಂತೂ ಸಖತ್ ರುಚಿಕರವಾಗಿರುತ್ತದೆ. ಇದನ್ನು ತಿನ್ನುವಾಗ ಒಂದು ರೀತಿ ಐಸ್ಕ್ರೀಮ್ ತಿಂದಂತೆಯೇ ಫೀಲ್ ಆಗುತ್ತದೆ. ಆದರೆ ಎಳನೀರಿನಲ್ಲಿರುವ ಗಂಜಿ ರುಚಿ ನೀಡುವುದಷ್ಟೇ ಅಲ್ಲ. ನಾನಾ ಆರೋಗ್ಯಕರ ಪ್ರಯೋಜನಗಳು ಇದರಿಂದ ಲಭ್ಯವಿದೆ. ಅದೇನಪ್ಪಾ ಅಂತೀರಾ ಈ ಸ್ಟೋರಿ ಓದಿ.
ಹೌದು ಎಳನೀರಿನಲ್ಲಿರುವ ಗಂಜಿಯಲ್ಲಿ ಹೆಚ್ಚಿನ ಪೋಷಕಾಂಶಗಳಿದೆ. ಇದನ್ನು ನೀವು ತಾಜಾವಾಗಿದ್ದ ಕೂಡ ಸೇವಿಸಬಹುದು ಅಥವಾ ಒಣಗಿಸಿ ತಿನ್ನಬಹುದು. ಇದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಗಳು ದೊರೆಯುತ್ತದೆ. ಎಳನೀರಿನಲ್ಲಿ ಸಿಗುವ ಗಂಜಿಯು ಟ್ರೈಗ್ಲಿಸರೈಡ್‌ಗಳು (MCTಗಳು), ಲಾರಿಕ್ ಆಮ್ಲ ಮತ್ತು ಇತರ ಪ್ರಯೋಜನಕಾರಿ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ. ಈ ಬಗ್ಗೆ ಆಹಾರ ತಜ್ಞ ಮತ್ತು ಪೌಷ್ಟಿಕತಜ್ಞ ಅವ್ನಿ ಕೌಲ್ ಅವರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಅವು ಈ ಕೆಳಗಿನಂತಿದೆ.