ಇತ್ತೀಚಿನ ದಿನಗಳಲ್ಲಿ ಮಿಕ್ಸರ್-ಗ್ರೈಂಡರ್ ಇಲ್ಲದೇ ಅಡುಗೆಮನೆಯಲ್ಲಿ ಕೆಲಸ ಮಾಡಲು ಆಗುವುದೇ ಇಲ್ಲ ಎಂದು ಎಲ್ಲರಿಗೂ ತಿಳಿದಿದೆ. ಮಿಕ್ಸಿ ಗ್ರೈಡರ್ನಿಂದ ಹಿಟ್ಟು, ಕಾಳುಗಳು ಮತ್ತು ಮಸಾಲೆಗಳನ್ನು ನಿಮಿಷಗಳಲ್ಲಿಯೇ ರುಬ್ಬಿ ಮಾಡಬಹುದು. ಇಲ್ಲದಿದ್ದರೆ ಅಡುಗೆ ಮಾಡಲೂ ಆಗುವುದಿಲ್ಲ. ಆದರೆ ಮಿಕ್ಸರ್ ಜಾರ್ಗಳನ್ನು ಬಳಸಿದ ನಂತರ ಅವುಗಳನ್ನು ನೀರಿನಿಂದ ತೊಳೆದು ಪಕ್ಕಕ್ಕೆ ಇಡುತ್ತೇವೆ. ಹೀಗಿದ್ದರೂ ಆಗಾಗ ಅವುಗಳನ್ನು ಬಳಸುವುದರಿಂದ ಜಾರ್ ಮತ್ತು ಮಿಕ್ಸರ್ಗಳು ಜಾಮ್ ಆಗುತ್ತದೆ. ರುಬ್ಬಿದ ಮಿಶ್ರಣ ಮತ್ತು ಕೊಳಕು ಅವುಗಳಲ್ಲಿ ಕುಳಿತುಕೊಳ್ಳುತ್ತದೆ. ಹಾಗಾದರೆ ಅವುಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಸಾಬೂನಿನಿಂದ ಜಾರ್ ಮತ್ತು ಮಿಕ್ಸರ್ಗಳನ್ನು ತೊಳೆದರೆ, ಅದರಲ್ಲಿರುವ ರಾಸಾಯನಿಕಗಳು ಹೊಟ್ಟೆಗೆ ಸೇರಿಕೊಂಡು ಹೊಸ ಸಮಸ್ಯೆ ಉಂಟಾಗುವ ಅಪಾಯವಿದೆ. ಈಗ ಮಿಕ್ಸರ್ ಗ್ರೈಂಡರ್ ಮತ್ತು ಮಿಕ್ಸ್ ಜಾರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸುವುದು ಹೇಗೆ ಎಂಬುವುದನ್ನು ಮೊದಲು ತಿಳಿದುಕೊಳ್ಳಿ.
ಮಿಕ್ಸರ್ ಅನ್ನು ಅಡುಗೆಮನೆಯಲ್ಲಿ ಇಡುವುದರಿಂದ ಅದರ ಮೇಲೆ ಎಣ್ಣೆ ಮತ್ತು ಇತರ ವಸ್ತುಗಳು ಶೇಖರಗೊಂಡು ಕೊಳಕು ಎದ್ದು ಕಾಣುವಂತೆ ಮಾಡುತ್ತದೆ. ಆದ್ದರಿಂದಲೇ ಕಾಲಕಾಲಕ್ಕೆ ಅವುಗಳನ್ನು ಶುಚಿಗೊಳಿಸದಿದ್ದರೆ ಎಣ್ಣೆಯು ಶೇಖರಣೆಯಾಗುತ್ತಲೇ ಇರುತ್ತದೆ. ಆದರೆ ಮಿಕ್ಸರ್ ಗ್ರೈಂಡರ್ ಮೇಲೆ ಸಂಗ್ರಹವಾಗಿರುವ ಕೊಳೆಯನ್ನು ಸುಲಭವಾಗಿ ಸ್ವಚ್ಛಗೊಳಿಸಲು ಎಷ್ಟು ವಿಧಾನಗಳಿವೆ ಎಂಬುದನ್ನು ನಾವು ನಿಮಗೆ ಹೇಳಿಕೊಡುತ್ತಿದ್ದೇವೆ. ಈ ಸರಳ ವಿಧಾನವನ್ನು ಅನುಸರಿಸಿ ಶುಚಿಗೊಳಿಸುವುದರಿಂದ ನಿಮ್ಮ ಮಿಕ್ಸರ್ ಹೊಸದರಂತೆ ಹೊಳೆಯುವುದು ಖಚಿತ.
Vinegar: ವಿನೆಗರ್ ಗೃಹೋಪಯೋಗಿ ವಸ್ತುಗಳನ್ನು ಸ್ವಚ್ಛಗೊಳಿಸಲು ಅತ್ಯುತ್ತಮವಾದ ಕ್ಲೀನಿಂಗ್ ಏಜೆಂಟ್. ವಿನೆಗರ್ ಅನ್ನು ನೀರಿನಲ್ಲಿ ಕರಗಿಸಿದ ನಂತರ, ಅದನ್ನು ಸ್ಪಂಜಿನೊಂದಿಗೆ ಸ್ವಲ್ಪ ತೆಗೆದುಕೊಂಡು ಮಿಕ್ಸರ್ ಗ್ರೈಂಡರ್ನ ಬಾಡಿಯನ್ನು ಒರೆಸಿ. ಹೀಗೆ ಮಾಡಿದರೆ ಮಿಕ್ಸಿ ಸ್ವಚ್ಛವಾಗಿ ಹೊಸದರಂತೆ ಹೊಳೆಯುತ್ತದೆ. ನಿತ್ಯ ಹೀಗೆ ಮಾಡುವುದರಿಂದ ಕೊಳೆ, ಹಳೆ ಕಲೆಗಳು ಸುಲಭವಾಗಿ ಮಾಯವಾಗುತ್ತವೆ. (Photo:Canva)