ಇತ್ತೀಚಿನ ದಿನಗಳಲ್ಲಿ ಲೆಹೆಂಗಾಗಳಲ್ಲಿ ಸಾಕಷ್ಟು ವೆರೈಟಿ ಡಿಸೈನ್ಗಳು ಬಂದಿದೆ. ಈ ರೀತಿಯ ಸ್ಟೈಲಿಶ್ ಲೆಹೆಂಗಾಗಳನ್ನು ವಿಶೇಷ ಕಾರ್ಯಕ್ರಮಗಳಲ್ಲಿ ಧರಿಸಲಾಗುತ್ತದೆ. ಈ ವಿಚಾರವಾಗಿ ಮಾತನಾಡುವುದಾರೆ ಇದೀಗ ಹಲವಾರು ಬಣ್ಣದ ಲೆಹೆಂಗಾಗಳು ಮಾರುಕಟ್ಟೆಗೆ ಬಂದಿದೆ. ಜನ ಕೂಡ ಲೆಹೆಂಗಗಳತ್ತ ವಾಲುತ್ತಿದ್ದಾರೆ. ನಿಮ್ಮ ಲುಕ್ ಹೆಚ್ಚಿಸಲು ಮತ್ತು ಹೈಲೆಟ್ ಆಗಿ ಕಾಣಿಸಿಕೊಳ್ಳಲು ಲೆಹೆಂಗಾವನ್ನು ಧರಿಸಬಹುದಾಗಿದೆ.
ಪಿಂಕ್ ಜರ್ದೋಸಿ ಲೆಹೆಂಗಾ ಜೊತೆಗೆ ಮುತ್ತಿನ ಆಭರಣ ಎದ್ದು ಕಾಣುತ್ತದೆ. ಹಾಗಾಗಿ ಇತ್ತೀಚೆಗೆ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ತಮ್ಮ ವಿವಾಹದ ಸಂದರ್ಭದಲ್ಲಿ ಈ ರೀತಿಯ ಲೆಹೆಂಗಾ ಮತ್ತು ಆಭರಣ ಧರಿಸಿ ಅದ್ಭುತವಾಗಿ ಕಾಣಿಸಿಕೊಂಡಿದ್ದರು. ಮತ್ತೊಂದೆಡೆ ಜರ್ದೋಸಿ ಫ್ಲೋರಲ್ ಬ್ಲೌಸ್ ಹಾಗೂ ಲೆಹೆಂಗಾದೊಂದಿಗೆ ಅನಾಮಿಕಾ ಖನ್ನಾ ಕೂಡ ದುಪಟ್ಟಾ ಧರಿಸಿ, ಮುತ್ತಿನ ಸ್ಕಲ್ಲೊಪ್ ಫಿನಿಶ್ನೊಂದಿಗೆ ಮದುವೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದರು.
ಸೆಲೆಬ್ರಿಟಿಗಳಾದ ಕಿಯಾರಾ ಅಡ್ವಾಣಿ, ಅಥಿಯಾ ಶೆಟ್ಟಿ, ಆಲಿಯಾ ಭಟ್, ರಿಚಾ ಚಡ್ಡಾ ಮತ್ತು ಕರಿಷ್ಮಾ ತನ್ನಾ ತಮ್ಮ ವಿವಾಹದ ದಿನದಂದು ಕ್ರೀಮ್, ಪಿಂಕ್ ಹೀಗೆ ವಿವಿಧ ಬಣ್ಣದ ಉಡುಗೆಯನ್ನು ಧರಿಸಿದ್ದರು. ಸೀರೆ ಹಾಗೂ ಲೆಹೆಂಗಾ ಎರಡೂ ಸಹ ಮದುವೆಯ ವೇಳೆ ಹೆಣ್ಣು ಮಕ್ಕಳಿಗೆ ಕಂಪ್ಲೀಟ್ ಲುಕ್ ನೀಡುತ್ತದೆ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)