ಪೋಷಕರೇ ಮಕ್ಕಳ ತಲೆಗೆ ಹೊಡೆಯುತ್ತೀರಾ? ಹಾಗಿದ್ರೆ ಈ ಸ್ಟೋರಿ ಓದಿ
ಪುಟ್ಟ ಮಕ್ಕಳ ತಲೆಗೆ ಹೊಡೆಯುವುದು ಅಪಾಯಕಾರಿ, ಇದರಿಂದ ಮಾನಸಿಕ ಕಾಯಿಲೆಗೀಡಾಗುವ ಸಾಧ್ಯತೆಗಳಿವೆ. ಇದರಿಂದ ವಿಚಾರವೊಂದನ್ನು ಅರಿತುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುವ ಅಪಾಯವೂ ಇರುವುದಾಗಿ ತಿಳಿದು ಬಂದಿದೆ.
ಚಿಕ್ಕ ಮಕ್ಕಳು ಕಿತಾಪತಿ ಮಾಡಿದಾಗ ತಂದೆ ತಾಯಿ ಮಕ್ಕಳ ತಲೆಗೆ ಹೊಡೆಯುವುದು ಸಾಮಾನ್ಯ. ಮಕ್ಕಳು ತಪ್ಪು ಮಾಡಿದಾಗ ಆ ಕೂಡಲೇ ಅವರಿಗೆ ತಪ್ಪಿನ ಅರಿವಾಗಿಸಲು ತಂದೆ ತಾಯಿ ಹೀಗೆ ಮಾಡುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಆದರೆ ಇದನ್ನು ಹೊರತುಪಡಿಸಿ ಶಿಸ್ತು ಕಲಿಸಬಹುದಾದ ಹಲವಾರು ವಿಧಾನಗಳಿವೆ.
2/ 7
ವಾಸ್ತವವಾಗಿ ಮಕ್ಕಳ ತಲೆಗೆ, ತಲೆಯ ಹಿಂಭಾಗಕ್ಕೆ ಹೊಡೆಯುವುದರಿಂದ ಸಾಕಷ್ಟು ಹಾನಿಯಿದೆ. ಹೌದು ಇದು ನಂಬಲು ಸಾಧ್ಯವಿಲ್ಲದಿದ್ದರೂ ಸತ್ಯ. ಸಂಶೋಧನೆಯೊಂದರಿಂದ ಬಹಿರಂಗವಾದ ಮಾಹಿತಿಯೊಂದು ಪೋಷಕರನ್ನು ಚಿಂತೆಗೀಡು ಮಾಡುವುದರಲ್ಲಿ ಅನುಮಾನವಿಲ್ಲ.
3/ 7
ಪುಟ್ಟ ಮಕ್ಕಳ ತಲೆಗೆ ಹೊಡೆಯುವುದು ಅಪಾಯಕಾರಿ, ಇದರಿಂದ ಮಾನಸಿಕ ಕಾಯಿಲೆಗೀಡಾಗುವ ಸಾಧ್ಯತೆಗಳಿವೆ.
4/ 7
ಇದರಿಂದ ವಿಚಾರವೊಂದನ್ನು ಅರಿತುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುವ ಅಪಾಯವೂ ಇರುವುದಾಗಿ ತಿಳಿದು ಬಂದಿದೆ.
5/ 7
ಆಸ್ಟಿನ್ ಸ್ಮಿತ್ ಯುನಿವರ್ಸಿಟಿ ಆಫ್ ಟೆಕ್ಸಾಸ್'ನಿಂದ ನಡೆಸಿದ ಈ ಅಧ್ಯಯನಕ್ಕಾಗಿ ಸಂಶೋಧಕರು 50 ವರ್ಷಗಳ ದಾಖಲೆಗಳನ್ನು ಅಧ್ಯಯನ ಮಾಡಿದ್ದಾರೆ. ಈ ಮೂಲಕ 16000 ಮಕ್ಕಳ ಜೀವನದ ಕುರಿತಾಗಿ ಅಧ್ಯಯನ ನಡೆಸಿದ್ದಾರೆ.
6/ 7
ಅಧ್ಯಯನದ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಎಲ್ಲಾ ಮಕ್ಕಳ ನಡುವೆ ಒಂದು ಧನಾತ್ಮನಕ ಸಂಬಂಧ ಬೆಳಕಿಗೆ ಬಂದಿದ್ದು, ಮಕ್ಕಳ ತಲೆಗೆ ಹೊಡೆಯುವುದರಿಂದ ಅವರು ಶಿಸ್ತು ಬದ್ಧರಾಗುವುದಿಲ್ಲ, ಅದೊಂದು ತಪ್ಪು ಕಲ್ಪನೆ.
7/ 7
ಈ ರೀತಿ ಮಾಡುವುದರಿಂದ ಮಕ್ಕಳ ಜೀವನ ಕ್ರಮದಲ್ಲಿ ಹೆಚ್ಚಿನ ಬದಲಾವಣೆಯಾಗುವುದಿಲ್ಲ. ಅವರ ಆರೋಗ್ಯದ ಮೇಲೆ ಹಾನಿಯುಂಟಾಗುತ್ತದೆ ಎಂದಿದ್ದಾರೆ.