Holiday: ಬೇಸಿಗೆ ರಜೆಗೆ ನಿಮ್ಮ ಮಕ್ಕಳನ್ನು ಟ್ರಿಪ್ ಕರ್ಕೊಂಡು ಹೋಗೋಕೆ ಈ ಸ್ಥಳಗಳು ಬೆಸ್ಟ್!
Holiday Destinations: ಮಾರ್ಚ್ ತಿಂಗಳ ಆರಂಭವಾಗಲು ಕೆಲವೇ ಕೆಲವು ದಿನ ಬಾಕಿ ಉಳಿದಿದೆ.. ಪರೀಕ್ಷೆಗಳೆಲ್ಲಾ ಪ್ರಾರಂಭವಾಗಿವೆ. ಮಕ್ಕಳಿಗೆ ರಜೆಯ ಮಜಾ ಶುರುವಾಗಲಿದೆ. ಹೀಗಾಗಿ ಮಕ್ಕಳನ್ನು ಈ ರಜಾ ಸಮಯದಲ್ಲಿ ಸುತ್ತಾಡಿಸಲು ಕರೆದುಕೊಂಡು ಹೋಗಲು ಪೋಷಕರು ಕಾಯುತ್ತಿರುತ್ತಾರೆ. ಆದರೆ ಯಾವ ಸ್ಥಳಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಬೇಕು ಎನ್ನುವ ಗೊಂದಲ ಇರುವ ಪೋಷಕರಿಗಾಗಿ ಮಾಹಿತಿ ಇಲ್ಲಿದೆ
ಗೋವಾ: ನಿಮ್ಮ ಮಕ್ಕಳ ಹಾಲಿಡೇ ಜೊತೆಗೆ ನೀವು ಎಂಜಾಯ್ ಮಾಡಬೇಕು ಅಂದರೆ ಗೋವಾ ಉತ್ತಮವಾದ ಸ್ಥಾನ.. ಗೋವಾದ ಬೀಚ್ ನಲ್ಲಿ ನಿಮ್ಮ ಮಕ್ಕಳ ಜೊತೆಗೆ ಸಿಕ್ಕಾಪಟ್ಟೆ ಎಂಜಾಯ್ ಮಾಡಬಹುದು.
2/ 8
ಜೈಪುರ ರಾಜಸ್ಥಾನ: ನಿಮ್ಮ ಮಕ್ಕಳನ್ನು ಈ ರಜೆಯಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಜೈಪುರ ಉತ್ತಮವಾದ ಸ್ಥಾನ.. ಅರಮನೆಗಳನ್ನು ನೋಡುವುದರ ಜೊತೆಗೆ ಒಂಟೆ ಹಾಗೂ ಆನೆಗಳ ಜೊತೆಗೆ ಸವಾರಿ ಮಾಡಿಸಬಹುದು.
3/ 8
ಮುನ್ನಾರ್ ಕೇರಳ: ಬೇಸಿಗೆಯ ಆರಂಭದಲ್ಲಿ ಹೆಚ್ಚು ಬಿಸಿಲು ಇರುವ ಜಾಗಕ್ಕೆ ನಿಮ್ಮ ಮಕ್ಕಳನ್ನು ಪ್ರವಾಸ ಕರೆದುಕೊಂಡು ಹೋಗುವುದಕ್ಕಿಂತ ಹಸಿರು ಇರುವ ಪ್ರದೇಶಕ್ಕೆ ಪ್ರವಾಸ ಕರೆದುಕೊಂಡು ಹೋಗುವುದು ಸೂಕ್ತ.. ಹೀಗಾಗಿ ಪಶ್ಚಿಮಘಟ್ಟಗಳ ಸಾಲಿರುವ ಕೇರಳದ ಮನ್ನಾರ್ ಗೆ ಮಕ್ಕಳನ್ನು ಕರೆದುಕೊಂಡು ಹೋಗಿ
4/ 8
ಮಸ್ಸೂರಿ: ಬೇಸಿಗೆ ಆರಂಭವಾಗಿರುವುದರಿಂದ ಈ ಸಮಯದಲ್ಲಿ ಆಹ್ಲಾದಕರ ವಾತಾವರಣ ನಿಮಗೂ ಹಾಗೂ ನಿಮ್ಮ ಮಕ್ಕಳಿಗೆ ಬೇಕಾಗಿರುತ್ತದೆ.. ಹೀಗಾಗಿ ಹಿಮ ಪ್ರದೇಶದಿಂದ ಕೂಡಿರುವ ಮಸ್ಸೂರಿಗೆ ನಿಮ್ಮ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ.
5/ 8
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಬೇಸಿಗೆಯ ರಜಾ ದಿನದಲ್ಲಿ ನಿಮ್ಮ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಅತ್ಯುತ್ತಮ ಸ್ಥಳಗಳಲ್ಲಿ ಒಂದು.. ಮೈಸೂರುಅರಮನೆ ಮೃಗಾಲಯ, ಚಾಮುಂಡಿ ಬೆಟ್ಟ ನಿಮ್ಮ ಮಕ್ಕಳಿಗೆ ಕಂಡಿತವಾಗಿಯೂ ಇಷ್ಟ ಆಗುತ್ತದೆ.
6/ 8
ಊಟಿ: ಕ್ವೀನ್ ಅಫ್ ಹಿಲ್ ಸ್ಟೇಷನ್ ಎಂದೇ ಖ್ಯಾತಿ ಪಡೆದಿರುವ ಊಟಿ ಬೇಸಿಗೆಯಲ್ಲಿ ಪ್ರವಾಸ ಕೈಗೊಳ್ಳಲು ಉತ್ತಮವಾದ ಸ್ಥಳಗಳಲ್ಲಿ ಒಂದು.
7/ 8
ಅಂಡಮಾನ್ ನಿಕೋಬಾರ್ : ಕೇಂದ್ರಾಡಳಿತ ಪ್ರದೇಶ ಅಂಡಮಾನ್ ನಿಕೋಬಾರ್ ಸಮುದ್ರತೀರ, ಅಲ್ಲಿನ ವಿಶೇಷವಾದ ವಾತಾವರಣ ಈ ಬೇಸಿಗೆಯಲ್ಲಿ ನಿಮ್ಮ ಮಕ್ಕಳೊಂದಿಗೆ ಪ್ರವಾಸ ಮಾಡಲು ಸೂಕ್ತವಾದ ಜಾಗ
8/ 8
ಮನಾಲಿ: ಕಾಶ್ಮೀರದ ಅತಿ ಪ್ರಸಿದ್ಧ ಪ್ರವಾಸಿ ತಾಣ ಮನಾಲಿಗೆ ಈ ಬೇಸಿಗೆಯಲ್ಲಿ ನಿಮ್ಮ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ.. ಮನಾಲಿಯ ಆಹ್ಲಾದಕರ ವಾತಾವರಣ ನಿಮ್ಮ ಮಕ್ಕಳಿಗೆ ಇಷ್ಟವಾಗುತ್ತದೆ.