Chickenpox: ಹೆಚ್ಚಾಗ್ತಿದೆ ಚಿಕನ್ ಪಾಕ್ಸ್; ತಡೆಗಟ್ಟಲು ಈ ಟಿಪ್ಸ್ ಫಾಲೋ ಮಾಡಿ

ಚಿಕನ್ ಪಾಕ್ಸ್ ಸೋಂಕು ವಾರಿಸೆಲ್ಲಾ, ಜೋಸ್ಟರ್ ಎಂಬ ವೈರಸ್ನಿಂದ ಹರಡುತ್ತದೆ. ಉಸಿರಾಟದ ಮೂಲಕ, ಕಲುಷಿತ, ಅನಾರೋಗ್ಯಕರ ಆಹಾರ, ನೀರು ಸೇವನೆಯಿಂದ ಅಥವಾ ಚಿಕನ್ ಪಾಕ್ಸ್ ಇರುವ ವ್ಯಕ್ತಿಯ ನೇರಸಂಪರ್ಕದಿಂದ ಹರಡುತ್ತದೆ.

First published:

  • 19

    Chickenpox: ಹೆಚ್ಚಾಗ್ತಿದೆ ಚಿಕನ್ ಪಾಕ್ಸ್; ತಡೆಗಟ್ಟಲು ಈ ಟಿಪ್ಸ್ ಫಾಲೋ ಮಾಡಿ

    ಬಾಲ್ಯದಲ್ಲಿ ಚಿಕನ್ ಪಾಕ್ಸ್ ಕಂಡು ಬರುವುದು ಸಹಜ. ಇದೊಂದು ವೈರಲ್ ಇನ್ಫೆಕ್ಷನ್ ಆಗಿದೆ. ಚಿಕನ್ ಪಾಕ್ಸ್ ನೋಡಲು ಮೇಲ್ನೋಟದಲ್ಲಿ ಸಾಮಾನ್ಯವಾಗಿ ಕಂಡುಬಂದರೂ ನಾವು ಇದನ್ನು ನಿರ್ಲಕ್ಷಿಸಬಾರದು. ಒಂದು ವೇಳೆ ನಿರ್ಲಕ್ಷಿಸಿದರೆ ಅಪಾಯ ಖಂಡಿತ. ಚಿಕನ್ ಪಾಕ್ಸ್ ಸೋಂಕನ್ನು ತಡೆಗಟ್ಟಬೇಕಾದರೆ ನಾವು ಕೆಲವು ಪಥ್ಯ ಹಾಗೂ ಜೀವನ ಪದ್ಧತಿ ಅನುಸರಿಸುವುದು ಅಗತ್ಯವಾಗಿದೆ.

    MORE
    GALLERIES

  • 29

    Chickenpox: ಹೆಚ್ಚಾಗ್ತಿದೆ ಚಿಕನ್ ಪಾಕ್ಸ್; ತಡೆಗಟ್ಟಲು ಈ ಟಿಪ್ಸ್ ಫಾಲೋ ಮಾಡಿ

    ಚಿಕನ್ ಪಾಕ್ಸ್ ಸೋಂಕು ವಾರಿಸೆಲ್ಲಾ, ಜೋಸ್ಟರ್ ಎಂಬ ವೈರಸ್ನಿಂದ ಹರಡುತ್ತದೆ. ಉಸಿರಾಟದ ಮೂಲಕ, ಕಲುಷಿತ, ಅನಾರೋಗ್ಯಕರ ಆಹಾರ, ನೀರು ಸೇವನೆಯಿಂದ ಅಥವಾ ಚಿಕನ್ ಪಾಕ್ಸ್ ಇರುವ ವ್ಯಕ್ತಿಯ ನೇರಸಂಪರ್ಕದಿಂದ ಹರಡುತ್ತದೆ.

    MORE
    GALLERIES

  • 39

    Chickenpox: ಹೆಚ್ಚಾಗ್ತಿದೆ ಚಿಕನ್ ಪಾಕ್ಸ್; ತಡೆಗಟ್ಟಲು ಈ ಟಿಪ್ಸ್ ಫಾಲೋ ಮಾಡಿ

    ಅದರಲ್ಲಿಯೂ ಮುಖ್ಯವಾಗಿ ಈ ಸೋಂಕು ವೈರಸ್ ಗಾಳಿಯ ಮೂಲಕ ಹರಡುತ್ತದೆ. ಚಿಕನ್ ಪಾಕ್ಸ್ ರೋಗಿಯ ಕಫ ಅಥವಾ ಸೀನುವಾಗ ಹೊರಬೀಳುವ ಹನಿಗಳಿಂದ ಹರಡುತ್ತದೆ. ಮಕ್ಕಳಿಗೆ ಈ ರೋಗ ನಿರೋಧಕ ಚುಚ್ಚು ಮದ್ದು ಕೊಡಿಸದೇ ಇದ್ದಲ್ಲಿ ಚಿಕನ್ ಪಾಕ್ಸ್ ಬರುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಈ ಕಾಯಿಲೆ ಇರುವ ವ್ಯಕ್ತಿಗೆ ಮುಖದ ಮೇಲೆ ಮತ್ತು ಶರೀರದ ಮೇಲೆ ಗುಳ್ಳೆಗಳು 5 ರಿಂದ 6 ದಿನಗಳವರೆಗೆ ಹರಡುವ ಸಾಧ್ಯತೆ ಇದೆ.

    MORE
    GALLERIES

  • 49

    Chickenpox: ಹೆಚ್ಚಾಗ್ತಿದೆ ಚಿಕನ್ ಪಾಕ್ಸ್; ತಡೆಗಟ್ಟಲು ಈ ಟಿಪ್ಸ್ ಫಾಲೋ ಮಾಡಿ

    ಮುಂಜಾಗ್ರತೆ ಕ್ರಮಗಳು: ಚಿಕನ್ ಪಾಕ್ಸ್ ಬಾರದೇ ಇರುವ ಹಾಗೆ ಮಕ್ಕಳಿಗೆ ಎಂಎಂಆರ್ ವಾಕ್ಸಿನ್ ಕೊಡಿಸಬೇಕು. ಒಂದು ವೇಳೆ ಮಕ್ಕಳಿಗೆ ಚಿಕನ್ಸ್ ಪಾಕ್ಸ್ ಬಂದರೆ ಶಾಲೆಗೆ ಕಳುಹಿಸದೇ ವಿಶ್ರಾಂತಿ ನೀಡಬೇಕು. ಇಲ್ಲದಿದ್ದರೆ ಮಕ್ಕಳು ಶಾಲೆಗೆ ಹೋದರೆ ಇತರ ಮಕ್ಕಳಿಗೂ ಚಿಕನ್ ಪಾಕ್ಸ್ ಹರಡುವ ಸಾಧ್ಯತೆ ಇರುತ್ತದೆ.

    MORE
    GALLERIES

  • 59

    Chickenpox: ಹೆಚ್ಚಾಗ್ತಿದೆ ಚಿಕನ್ ಪಾಕ್ಸ್; ತಡೆಗಟ್ಟಲು ಈ ಟಿಪ್ಸ್ ಫಾಲೋ ಮಾಡಿ

    ಚಿಕನ್ ಪಾಕ್ಸ್ ಬಂದಾಗ ಚರ್ಮದ ನೈರ್ಮಲ್ಯ, ಉತ್ತಮ ಆರೈಕೆ ಮತ್ತು ವೈದ್ಯರ ಸಲಹೆಗಳನ್ನು ಪಡೆಯುವುದು ಅಗತ್ಯ. ಜೊತೆಗೆ ಆಂಟಿಸೆಪ್ಟಿಕ್ ಕ್ರಮಗಳನ್ನು ಅನುಸರಿಸಬೇಕು. ಆಳವಾದ ಕಲೆಗಳು ಉಳಿಯದ ಹಾಗೆ ಮಾಡಲು ಆದಷ್ಟು ಗುಳ್ಳೆಗಳನ್ನು ಉಗುರಿನಿಂದ ಮುಟ್ಟದೇ ಇರುವುದು ಒಳ್ಳೆಯದು.ಇಲ್ಲದಿದ್ದರೆ ಇದರಿಂದ ಚರ್ಮದ ಗಾಯದಿಂದ ರೋಗ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

    MORE
    GALLERIES

  • 69

    Chickenpox: ಹೆಚ್ಚಾಗ್ತಿದೆ ಚಿಕನ್ ಪಾಕ್ಸ್; ತಡೆಗಟ್ಟಲು ಈ ಟಿಪ್ಸ್ ಫಾಲೋ ಮಾಡಿ

    ಚಿಕನ್ ಪಾಕ್ಸ್ ಆದಾಗ ಅನುಸರಿಸಬೇಕಾದ ಕ್ರಮ: ಕರಿದ ಹಾಗೂ ಖಾರವಾದ ತಿಂಡಿ ಸಂಪೂರ್ಣವಾಗಿ ತ್ಯಜಿಸಬೇಕು. ಕಹಿಬೇವಿನ ಕಷಾಯದಲ್ಲಿ ಸ್ನಾನ ಮಾಡುವುದು, ಎಳನೀರು ಹಾಗೂ ನೀರನ್ನು ಧಾರಾಳವಾಗಿ ಕುಡಿಯುವುದರಿಂದ ರೋಗವನ್ನು ಶೀಘ್ರದಲ್ಲಿಯೇ ಗುಣಪಡಿಸಿಕೊಳ್ಳಬಹುದು.

    MORE
    GALLERIES

  • 79

    Chickenpox: ಹೆಚ್ಚಾಗ್ತಿದೆ ಚಿಕನ್ ಪಾಕ್ಸ್; ತಡೆಗಟ್ಟಲು ಈ ಟಿಪ್ಸ್ ಫಾಲೋ ಮಾಡಿ

    [caption id="attachment_976255" align="alignnone" width="1600"] ಅದರಲ್ಲಿಯೂ ಮುಖ್ಯವಾಗಿ ಈ ಸೋಂಕು ವೈರಸ್ ಗಾಳಿಯ ಮೂಲಕ ಹರಡುತ್ತದೆ. ಚಿಕನ್ ಪಾಕ್ಸ್ ರೋಗಿಯ ಕಫ ಅಥವಾ ಸೀನುವಾಗ ಹೊರಬೀಳುವ ಹನಿಗಳಿಂದ ಹರಡುತ್ತದೆ. ಮಕ್ಕಳಿಗೆ ಈ ರೋಗ ನಿರೋಧಕ ಚುಚ್ಚು ಮದ್ದು ಕೊಡಿಸದೇ ಇದ್ದಲ್ಲಿ ಚಿಕನ್ ಪಾಕ್ಸ್ ಬರುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಈ ಕಾಯಿಲೆ ಇರುವ ವ್ಯಕ್ತಿಗೆ ಮುಖದ ಮೇಲೆ ಮತ್ತು ಶರೀರದ ಮೇಲೆ ಗುಳ್ಳೆಗಳು 5 ರಿಂದ 6 ದಿನಗಳವರೆಗೆ ಹರಡುವ ಸಾಧ್ಯತೆ ಇದೆ.

    [/caption]

    MORE
    GALLERIES

  • 89

    Chickenpox: ಹೆಚ್ಚಾಗ್ತಿದೆ ಚಿಕನ್ ಪಾಕ್ಸ್; ತಡೆಗಟ್ಟಲು ಈ ಟಿಪ್ಸ್ ಫಾಲೋ ಮಾಡಿ

    ಅದರಲ್ಲಿಯೂ ಗರ್ಭಿಣಿಯರು, ವೃದ್ಧರಿಗೆ, ಚಿಕನ್ ಪಾಕ್ಸ್ ಬಂದಾಗ ವೈದ್ಯರ ಸಲಹೆ ಬಹಳ ಅಗತ್ಯವಾಗಿರುತ್ತದೆ. ಆಗಾಗ ತುರಿಕೆಯಿಂದ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುವುದರಿಂದ ಉಗುರುಗಳನ್ನು ಕತ್ತರಿಸುವುದು ಉತ್ತಮ.

    MORE
    GALLERIES

  • 99

    Chickenpox: ಹೆಚ್ಚಾಗ್ತಿದೆ ಚಿಕನ್ ಪಾಕ್ಸ್; ತಡೆಗಟ್ಟಲು ಈ ಟಿಪ್ಸ್ ಫಾಲೋ ಮಾಡಿ

    ಇನ್ಫೆಕ್ಷನ್ ಇದ್ದಲ್ಲಿ ಆ್ಯಂಟಿ ಬಯೋಟಿಕ್ಸ್ ಔಷಧಗಳ ಅವಶ್ಯಕತೆ ಇರುತ್ತದೆ. ಒಬ್ಬ ವ್ಯಕ್ತಿಗೆ ಒಮ್ಮೆ ಚಿಕನ್ ಪಾಕ್ಸ್ ಬಂದರೆ ಆ ವ್ಯಕ್ತಿಯು ರೋಗ ನಿರೋಧಕ ಶಕ್ತಿಯನ್ನು ಪಡೆಯುತ್ತಾನೆ. ಚಿಕನ್ ಪಾಕ್ಸ್ ಎರಡನೇ ಸಲ ಬಂದರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES