Chia Seeds: ಚಿಯಾ ಬೀಜಗಳು ಆರೋಗ್ಯಕ್ಕೆ ಒಳ್ಳೆಯದು ಅಂತ ಅತಿಯಾಗಿ ತಿನ್ಬೇಡಿ, ಇಲ್ಲದೇ ಇರೋ ರೋಗವೆಲ್ಲಾ ಬರುತ್ತೆ

Chia Seeds: ಚಿಯಾ ಬೀಜಗಳು ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ ಆದರೆ ಅವುಗಳನ್ನು ಮಿತವಾಗಿ ತಿಂದರೆ ಉತ್ತಮ. ಹಾಗಿದ್ರೆ ಚಿಯಾ ಬೀಜಗಳನ್ನು ತಿನ್ನೋದ್ರಿಂದ ದೇಹದ ಆರೋಗ್ಯದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದನ್ನು ಈ ಲೇಖನದಲ್ಲಿದೆ ಓದಿ.

First published:

  • 18

    Chia Seeds: ಚಿಯಾ ಬೀಜಗಳು ಆರೋಗ್ಯಕ್ಕೆ ಒಳ್ಳೆಯದು ಅಂತ ಅತಿಯಾಗಿ ತಿನ್ಬೇಡಿ, ಇಲ್ಲದೇ ಇರೋ ರೋಗವೆಲ್ಲಾ ಬರುತ್ತೆ

    ಚಿಯಾ ಬೀಜಗಳು ಜನಪ್ರಿಯ ಸೂಪರ್‌ಫುಡ್ ಆಗಿದ್ದು, ಅವುಗಳು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯ ಮತ್ತು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಚಿಯಾ ಬೀಜಗಳು ಹೆಚ್ಚಿನ ಪೌಷ್ಠಿಕಾಂಶದ ಮೌಲ್ಯದಿಂದಾಗಿ ಗ್ರಾಹಕರಲ್ಲಿ ಜನಪ್ರಿಯವಾಗಿದ್ದು ಇದು ಫೈಬರ್, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು ಮತ್ತು ಖನಿಜಗಳ ಆಗರವಾಗಿದೆ.

    MORE
    GALLERIES

  • 28

    Chia Seeds: ಚಿಯಾ ಬೀಜಗಳು ಆರೋಗ್ಯಕ್ಕೆ ಒಳ್ಳೆಯದು ಅಂತ ಅತಿಯಾಗಿ ತಿನ್ಬೇಡಿ, ಇಲ್ಲದೇ ಇರೋ ರೋಗವೆಲ್ಲಾ ಬರುತ್ತೆ

    ಚಿಯಾ ಬೀಜಗಳನ್ನು ಅತಿಯಾದ ಪ್ರಮಾಣದಲ್ಲಿ ತಿನ್ನುವುದರಿಂದ ಕೆಲವು ಸಂಭಾವ್ಯ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಈ ಲೇಖನದಲ್ಲಿ, ಚಿಯಾ ಬೀಜಗಳು ನಮ್ಮ ಆರೋಗ್ಯಕ್ಕೆ ಹೇಗೆ ಅನಾನುಕೂಲತೆಯನ್ನು ಉಂಟು ಮಾಡಬಹುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳೋಣ.

    MORE
    GALLERIES

  • 38

    Chia Seeds: ಚಿಯಾ ಬೀಜಗಳು ಆರೋಗ್ಯಕ್ಕೆ ಒಳ್ಳೆಯದು ಅಂತ ಅತಿಯಾಗಿ ತಿನ್ಬೇಡಿ, ಇಲ್ಲದೇ ಇರೋ ರೋಗವೆಲ್ಲಾ ಬರುತ್ತೆ

    ಜೀರ್ಣಕಾರಿ ಸಮಸ್ಯೆಗಳು: ಚಿಯಾ ಬೀಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದರಿಂದ ಕೆಲವು ಜೀರ್ಣಕಾರಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಉಬ್ಬರ, ಗ್ಯಾಸ್ ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತವೆ. ಏಕೆಂದರೆ ಚಿಯಾ ಬೀಜಗಳಲ್ಲಿ ಹೆಚ್ಚಿನ ಫೈಬರ್ ಅಂಶವು ಹೊಟ್ಟೆಯ ಅಸ್ವಸ್ಥತೆ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.

    MORE
    GALLERIES

  • 48

    Chia Seeds: ಚಿಯಾ ಬೀಜಗಳು ಆರೋಗ್ಯಕ್ಕೆ ಒಳ್ಳೆಯದು ಅಂತ ಅತಿಯಾಗಿ ತಿನ್ಬೇಡಿ, ಇಲ್ಲದೇ ಇರೋ ರೋಗವೆಲ್ಲಾ ಬರುತ್ತೆ

    ಕಡಿಮೆ ರಕ್ತದೊತ್ತಡ: ಚಿಯಾ ಬೀಜಗಳು ರಕ್ತವನ್ನು ತೆಳುಗೊಳಿಸುವ ಗುಣಲಕ್ಷಣಗಳನ್ನು ಹೊಂದಿವೆ. ಇದು ರಕ್ತದೊತ್ತಡದ ಕುಸಿತಕ್ಕೆ ಕಾರಣವಾಗಬಹುದು. ಈಗಾಗಲೇ ರಕ್ತ ತೆಳುವಾಗಿಸುವ ಅಥವಾ ಕಡಿಮೆ ರಕ್ತದೊತ್ತಡ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ಚಿಯಾ ಬೀಜಗಳು ಅಪಾಯಕಾರಿಯಾಗಿದೆ.

    MORE
    GALLERIES

  • 58

    Chia Seeds: ಚಿಯಾ ಬೀಜಗಳು ಆರೋಗ್ಯಕ್ಕೆ ಒಳ್ಳೆಯದು ಅಂತ ಅತಿಯಾಗಿ ತಿನ್ಬೇಡಿ, ಇಲ್ಲದೇ ಇರೋ ರೋಗವೆಲ್ಲಾ ಬರುತ್ತೆ

    ಅಲರ್ಜಿಯ ಪ್ರತಿಕ್ರಿಯೆಗಳು: ಕೆಲವು ಜನರಿಗೆ ಈ ಬೀಜಗಳ ಸೇವನೆಯಿಂದ ಅಲರ್ಜಿಯ ಪ್ರಕ್ರಿಯೆ ಉಂಟಾಗುವ ಸಾಧ್ಯತೆ ಇದೆ. ಈ ಬೀಜಗಳನ್ನು ತಿಂದಾಗ ಅವರಿಗೆ ಚರ್ಮದ ದದ್ದು, ಕಣ್ಣುಗಳು ಅಥವಾ ಗಂಟಲಿನ ತುರಿಕೆ ಅಥವಾ ಉಸಿರಾಟದ ತೊಂದರೆಗಳು ಕಂಡುಬರುತ್ತವೆ. ಎಳ್ಳು ಬೀಜಗಳು ಅಥವಾ ಸಾಸಿವೆ ಬೀಜಗಳಿಗೆ ಅಲರ್ಜಿಯನ್ನು ಹೊಂದಿರುವ ಜನರು ಚಿಯಾ ಬೀಜಗಳಿಗೆ ಅಲರ್ಜಿಯನ್ನು ಹೊಂದುವ ಸಾಧ್ಯತೆಯಿದೆ.

    MORE
    GALLERIES

  • 68

    Chia Seeds: ಚಿಯಾ ಬೀಜಗಳು ಆರೋಗ್ಯಕ್ಕೆ ಒಳ್ಳೆಯದು ಅಂತ ಅತಿಯಾಗಿ ತಿನ್ಬೇಡಿ, ಇಲ್ಲದೇ ಇರೋ ರೋಗವೆಲ್ಲಾ ಬರುತ್ತೆ

    ಔಷಧಗಳೊಂದಿಗೆ ಸೇವನೆ: ಚಿಯಾ ಬೀಜಗಳು ರಕ್ತದೊತ್ತಡ ಮತ್ತು ಮಧುಮೇಹ ಔಷಧಿಗಳನ್ನು ಒಳಗೊಂಡಂತೆ ಕೆಲವು ಔಷಧಿಗಳೊಂದಿಗೆ ಸೇರಿಕೊಳ್ಳುತ್ತವೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಚಿಯಾ ಬೀಜಗಳನ್ನು ಸೇರಿಸುವ ಮೊದಲು ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸುವುದು ಅತ್ಯಗತ್ಯ.

    MORE
    GALLERIES

  • 78

    Chia Seeds: ಚಿಯಾ ಬೀಜಗಳು ಆರೋಗ್ಯಕ್ಕೆ ಒಳ್ಳೆಯದು ಅಂತ ಅತಿಯಾಗಿ ತಿನ್ಬೇಡಿ, ಇಲ್ಲದೇ ಇರೋ ರೋಗವೆಲ್ಲಾ ಬರುತ್ತೆ

    ರಕ್ತಸ್ರಾವದ ಹೆಚ್ಚಿದ ಅಪಾಯ:  ಚಿಯಾ ಬೀಜಗಳನ್ನು ವಿಶೇಷವಾಗಿ ಆಸ್ಪಿರಿನ್ ಅಥವಾ ವಾರ್ಫರಿನ್‌ನಂತಹ ರಕ್ತ ತೆಳುಗೊಳಿಸುವ ಔಷಧಿಗಳೊಂದಿಗೆ ತಿಂದಾಗ ರಕ್ತಸ್ರಾವದ ಅಪಾಯವು ಹೆಚ್ಚಾಗಬಹುದು.

    MORE
    GALLERIES

  • 88

    Chia Seeds: ಚಿಯಾ ಬೀಜಗಳು ಆರೋಗ್ಯಕ್ಕೆ ಒಳ್ಳೆಯದು ಅಂತ ಅತಿಯಾಗಿ ತಿನ್ಬೇಡಿ, ಇಲ್ಲದೇ ಇರೋ ರೋಗವೆಲ್ಲಾ ಬರುತ್ತೆ

    ಹಾರ್ಮೋನುಗಳ ಅಸಮತೋಲನ: ಚಿಯಾ ಬೀಜಗಳು ದೇಹದಲ್ಲಿನ ಈಸ್ಟ್ರೊಜೆನ್ ಪರಿಣಾಮಗಳನ್ನು ಅನುಕರಿಸುವ ಫೈಟೊಸ್ಟ್ರೋಜೆನ್‍ಗಳನ್ನು ಹೊಂದಿರುತ್ತವೆ. ಇದು ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ. (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು, ಸಾರ್ವಜನಿಕರ ಅಭಿಪ್ರಾಯದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES