ಮೆಡಿಕಲ್ ಶಾಪ್ಗೆ ತೆರಳಿ ಔಷಧಿಗಳನ್ನು ಖರೀದಿಸುವಾಗ ಮೊದಲು ಗಮನಿಸಬೇಕಾಗಿರವುದು ಔಷಧದ ಹೆಸರು, ಬಳಿಕ ಮುಕ್ತಾಯ ದಿನಾಂಕವನ್ನು ನೋಡಬೇಕು. ಆದರೆ ಕೆಲವರು ಇದರ ಬಗ್ಗೆ ಹೆಚ್ಚು ತಲೆ ಕಡೆಸುವುದಿಲ್ಲ. ಶಾಪ್ನಲ್ಲಿ ನೀಡಿದ ಔಷಧಿ ಯಾವುದೆಂದು ನೋಡದೆ ಹಾಗೆಯೇ ತೆಗೆದುಕೊಂಡು ಬರುವವರು ಇದ್ದಾರೆ. ಆದರೆ ಔಷಧಿ ಹೊದಿಕೆಯ ಮೇಲೆ ನೀಡಿರುವ ಚಿಹ್ನೆಗಳನ್ನು ಸರಿಯಾಗಿ ಗಮನಿಸಬೇಕಿದೆ. ಏಕೆಂದರೆ..
XRx ಚಿಹ್ನೆಗಳು: XRx ಅನ್ನು ಸಾಮಾನ್ಯವಾಗಿ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳ ಮೇಲೆ ಬರೆಯಲಾಗುತ್ತದೆ. ಈ ಔಷಧಗಳು ವ್ಯಸನಕಾರಿ. ಯಾವುದೇ ಮೆಡಿಕಲ್ ಸ್ಟೋರ್ ಪ್ರಿಸ್ಕ್ರಿಪ್ಷನ್ ಇಲ್ಲದೆ ಈ ಔಷಧಿಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಔಷಧಿಗಳ ಮಾರಾಟದ ಸಂದರ್ಭದಲ್ಲಿ, ಅವರು 2 ವರ್ಷಗಳವರೆಗೆ ಪ್ರಿಸ್ಕ್ರಿಪ್ಷನ್ ಪ್ರತಿಯನ್ನು ಇಟ್ಟುಕೊಳ್ಳಬೇಕು.