ತೂಕ ನಷ್ಟಕ್ಕೆ ಚಪಾತಿ ಹೇಗೆ ಸಹಾಯ ಮಾಡುತ್ತದೆ? ಚಪಾತಿಯಲ್ಲಿ ಕಾರ್ಬೋಹೈಡ್ರೇಟ್ಗಳು ಅಧಿಕವಾಗಿದ್ದು, ಇದು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ ಮತ್ತು ದೀರ್ಘಕಾಲದವರೆಗೆ ನಮಗೆ ಹೊಟ್ಟೆ ತುಂಬಿರುವ ಭಾವನೆಯನ್ನು ನೀಡುತ್ತದೆ. ಇದು ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸಲು ಮತ್ತು ನಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ನಾವು ಚಪಾತಿಗೆ ಹೆಚ್ಚು ಎಣ್ಣೆ ಬಳಸುವುದಿಲ್ಲ. ಇದು ದೇಹದಲ್ಲಿ ಅನಗತ್ಯ ಕ್ಯಾಲೋರಿ ಸಂಗ್ರಹವಾಗುವುದನ್ನು ತಡೆಯುತ್ತದೆ.
ಹಾಗಾಗಿ ಚಪಾತಿ ಮಾತ್ರ ತಿನ್ನಬೇಡಿ. ಸಲಾಡ್, ಆಲೂಗಡ್ಡೆ, ತರಕಾರಿಗಳು, ಕಾಳುಗಳು ಇತ್ಯಾದಿಗಳೊಂದಿಗೆ ತಿನ್ನಿರಿ. ಈ ಮೂಲಕ ನಿಮ್ಮ ದೇಹದ ತೂಕವನ್ನು ಸ್ಥಿರವಾಗಿರಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಹಾಗಂತ ತೂಕ ಇಳಿಸಿಕೊಳ್ಳಬೇಕು ಎಂದು ಚಪಾತಿ ಜೊತೆಗೆ ಇತರ ಆಹಾರ ಪದಾರ್ಥಗಳನ್ನು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದಲ್ಲ. ಆದರೆ ನೀವು ಬುದ್ಧಿವಂತಿಕೆ ಮತ್ತು ತಿಳುವಳಿಕೆಯಿಂದ ಯಾವ ಆಹಾರವನ್ನು ತಿನ್ನಬೇಕು ಎಂದು ತಿಳಿದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ.