Rose Day 2023: ನಾಳೆ ರೋಸ್‌ ಕೊಟ್ಟು ಪ್ರಪೋಸ್ ಮಾಡಿ! ಅರಳುವ ಗುಲಾಬಿ ಹೂವಂತೆ ನಿಮ್ಮ ಪ್ರೀತಿಯೂ ಅರಳುತ್ತಿರಲಿ!

Valentine's Day: ಫೆಬ್ರವರಿ ಬಂದ ತಕ್ಷಣ, ಪ್ರೀತಿಯ ಭಾವನೆಗಳು ಜಗತ್ತನ್ನು ಆವರಿಸುತ್ತವೆ. ಅದಕ್ಕಾಗಿಯೇ ಈ ತಿಂಗಳನ್ನು ಪ್ರೇಮಿಗಳ ತಿಂಗಳು ಎಂದು ಕರೆಯಲಾಗುತ್ತದೆ. ಪ್ರೇಮಿಗಳು ಈ ಸಮಯಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರೇಮಿಗಳ ವಾರ ಆರಂಭವಾಗಲಿದೆ. ಈ ಏಳು ದಿನಗಳ ವ್ಯಾಲೆಂಟೈನ್ಸ್ ವಾರವು ಗುಲಾಬಿ ದಿನದಿಂದ ಪ್ರಾರಂಭವಾಗುತ್ತದೆ. ಫೆಬ್ರವರಿ 14 ರಂದು ವ್ಯಾಲೆಂಟೈನ್ಸ್ ಡೇ ಕೊನೆಗೊಳ್ಳುತ್ತದೆ. ಹಾಗಿದ್ರೆ ಈ ಗುಲಾಬಿ ದಿನವನ್ನು ಯಾಕೆ ಆಚರಿಸ್ತಾರೆ ಎಂದು ಇಲ್ಲಿ ತಿಳಿಯಿರಿ.

First published:

  • 18

    Rose Day 2023: ನಾಳೆ ರೋಸ್‌ ಕೊಟ್ಟು ಪ್ರಪೋಸ್ ಮಾಡಿ! ಅರಳುವ ಗುಲಾಬಿ ಹೂವಂತೆ ನಿಮ್ಮ ಪ್ರೀತಿಯೂ ಅರಳುತ್ತಿರಲಿ!

    ಪ್ರೇಮಿಗಳ ವಾರವೆಂದರೆ ಪ್ರೇಮಿಗಳು ಯಾವಾಗಲೂ ಎದುರು ನೋಡುತ್ತಾರೆ. ನಾಳೆ ಗುಲಾಬಿ ದಿನ. ಪ್ರೇಮಿಗಳ ದಿನದಂದು ಈ ದಿನ ಬಹಳ ಮುಖ್ಯ. ನೀವು ಇಷ್ಟಪಡುವ ವ್ಯಕ್ತಿಗೆ ಪ್ರೀತಿಯನ್ನು ವ್ಯಕ್ತಪಡಿಸುವ ದಿನ. ಈ ದಿನದಿಂದು ಗ್ರೀನ್​ ಸಿಗ್ನಲ್ ಸಿಕ್ಕರೆ ನಂತರದ ವಾರಗಳೆಲ್ಲವನ್ನೂ ಎಂಜಾಯ್​​ ಮಾಡ್ಬಹುದು.

    MORE
    GALLERIES

  • 28

    Rose Day 2023: ನಾಳೆ ರೋಸ್‌ ಕೊಟ್ಟು ಪ್ರಪೋಸ್ ಮಾಡಿ! ಅರಳುವ ಗುಲಾಬಿ ಹೂವಂತೆ ನಿಮ್ಮ ಪ್ರೀತಿಯೂ ಅರಳುತ್ತಿರಲಿ!

    ರೋಸ್​ ಡೇಯ ದಿನದಂದು ಗುಲಾಬಿಗಳನ್ನು ನೀಡುವ ಮೂಲಕ ತನ್ನ ಸಂಗಾತಿಗೆ ಪ್ರೇಮ ನಿವೇದನೆಯನ್ನು ತೋರ್ಪಡಿಸಬಹುದು. ಆದ್ದರಿಂದ ನಾಳೆಯ ದಿನ ನಿಮ್ಮ ಸಂಗಾತಿಗೆ ಗುಲಾಬಿ ಹೂವನ್ನು ನೀಡಬಹುದು.

    MORE
    GALLERIES

  • 38

    Rose Day 2023: ನಾಳೆ ರೋಸ್‌ ಕೊಟ್ಟು ಪ್ರಪೋಸ್ ಮಾಡಿ! ಅರಳುವ ಗುಲಾಬಿ ಹೂವಂತೆ ನಿಮ್ಮ ಪ್ರೀತಿಯೂ ಅರಳುತ್ತಿರಲಿ!

    ಕೆಂಪು ಬಣ್ಣದ ಗುಲಾಬಿ ಹೂವುಗಳು ಪ್ರೀತಿಯ ಸಂಕೇತವೆಂದು ಪ್ರೇಮಿಗಳು ನಂಬುತ್ತಾರೆ ಮತ್ತು ಹಳದಿ ಬಣ್ಣದ ಹೂವು ಸ್ನೇಹದ ಸಂಕೇತವಾಗಿದೆ. ಆದ್ದರಿಂದ ನಿಮ್ಮ ಪ್ರೇಮಿಗೆ ಯಾವ ಬಣ್ಣದ ಗುಲಾಬಿಯನ್ನು ನೀಡಬೇಕೆಂದು ಮೊದಲೇ ನಿರ್ಧರಿಸಿ.

    MORE
    GALLERIES

  • 48

    Rose Day 2023: ನಾಳೆ ರೋಸ್‌ ಕೊಟ್ಟು ಪ್ರಪೋಸ್ ಮಾಡಿ! ಅರಳುವ ಗುಲಾಬಿ ಹೂವಂತೆ ನಿಮ್ಮ ಪ್ರೀತಿಯೂ ಅರಳುತ್ತಿರಲಿ!

    ಪ್ರೀತಿಪಾತ್ರರಿಗೆ ಪ್ರಪೋಸ್ ಮಾಡಲು ಕೆಂಪು ಗುಲಾಬಿ ಒಳ್ಳೆಯದು. ಆದರೆ ನೀವು ಹೊಸದನ್ನು ಪ್ರಸ್ತಾಪಿಸಲು ಬಯಸಿದರೆ, ಪ್ರೇಮಿ ತಜ್ಞರ ಪ್ರಕಾರ ಬಿಳಿ ಗುಲಾಬಿ ಉತ್ತಮವಾಗಿದೆ. ಈ ಪ್ರೇಮಿಗಳ ದಿನದಂದು, ನಿಮ್ಮ ಪ್ರೀತಿಪಾತ್ರರಿಗೆ ಬಿಳಿ ಗುಲಾಬಿಯೊಂದಿಗೆ ಪ್ರಪೋಸ್ ಮಾಡಿ ನಿಮ್ಮ ಸಂಗಾತಿಯ ಮನವೊಲಿಸಿ.

    MORE
    GALLERIES

  • 58

    Rose Day 2023: ನಾಳೆ ರೋಸ್‌ ಕೊಟ್ಟು ಪ್ರಪೋಸ್ ಮಾಡಿ! ಅರಳುವ ಗುಲಾಬಿ ಹೂವಂತೆ ನಿಮ್ಮ ಪ್ರೀತಿಯೂ ಅರಳುತ್ತಿರಲಿ!

    ವಾಸ್ತವವಾಗಿ, ಗುಲಾಬಿಯನ್ನು ಇಷ್ಟಪಡದ ಹುಡುಗಿಯರು ಬಹಳ ಕಡಿಮೆ. ಇದಲ್ಲದೆ, ಪ್ರೇಮಿಗಳು ಮತ್ತು ಗುಲಾಬಿಗಳು ಬಹಳ ನಿಕಟ ಸಂಬಂಧವನ್ನು ಹೊಂದಿವೆ. ಒಂದು ಕಾಲದಲ್ಲಿ ಪ್ರೇಮಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಈ ಗುಲಾಬಿ ಹೂವನ್ನೇ ಅಸ್ತ್ರವಾಗಿ ಬಳಸುತ್ತಿದ್ದರು. ಈಗಲೂ ಅದೇ ಟ್ರೆಂಡ್ ಮುಂದುವರಿದಿದೆ.

    MORE
    GALLERIES

  • 68

    Rose Day 2023: ನಾಳೆ ರೋಸ್‌ ಕೊಟ್ಟು ಪ್ರಪೋಸ್ ಮಾಡಿ! ಅರಳುವ ಗುಲಾಬಿ ಹೂವಂತೆ ನಿಮ್ಮ ಪ್ರೀತಿಯೂ ಅರಳುತ್ತಿರಲಿ!

    ರೋಸ್ ಡೇ ಎಂಬುದು ನಾವು ನಮ್ಮ ಪ್ರೀತಿಪಾತ್ರರಿಗೆ ಪದಗಳ ಮೂಲಕ ಏನೂ ಹೇಳದೆ ಪ್ರೀತಿಯನ್ನು ಹೂವಿನ ಮೂಲಕ ಹೇಳುವ ದಿನವಾಗಿದೆ. ಐ ಲವ್ ಯೂ ಎಂದು ಹೇಳದೆ ಗುಲಾಬಿ ಹೂವನ್ನು ನೀಡುವ ಮೂಲಕ ಪ್ರೇಮಿಗೆ ಪ್ರಪೋಸ್ ಮಾಡಬಹುದು.

    MORE
    GALLERIES

  • 78

    Rose Day 2023: ನಾಳೆ ರೋಸ್‌ ಕೊಟ್ಟು ಪ್ರಪೋಸ್ ಮಾಡಿ! ಅರಳುವ ಗುಲಾಬಿ ಹೂವಂತೆ ನಿಮ್ಮ ಪ್ರೀತಿಯೂ ಅರಳುತ್ತಿರಲಿ!

    ಇಂದು ಮತ್ತು ನಾಳೆ ಗುಲಾಬಿ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಗುಲಾಬಿಯನ್ನು ಕೊಟ್ಟು ನೇರವಾಗಿ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸುವವರು ನಾಳೆ ಹೆಚ್ಚು ಕಾಣುತ್ತಾರೆ. ಗುಲಾಬಿ ವ್ಯಾಪಾರಸ್ಥರ ಪಾಲಿಗೆ ಇದು ನಗದಿನ ಎಂಬ ಪ್ರಚಾರವೂ ಇದೆ. ಈ ಮೂಲಕ ನಮಗೆ ಇಷ್ಟವಾದವರಿಗೆ ಗುಲಾಬಿ ಹೂ ಕೊಡುವುದು ವಾಡಿಕೆಯಾಗಿದ್ದರಿಂದ ಈಗ ಅವುಗಳ ಬೇಡಿಕೆಯ ಜೊತೆಗೆ ಬೆಲೆಯೂ ಗಗನಕ್ಕೇರುವಂತಾಗಿದೆ.

    MORE
    GALLERIES

  • 88

    Rose Day 2023: ನಾಳೆ ರೋಸ್‌ ಕೊಟ್ಟು ಪ್ರಪೋಸ್ ಮಾಡಿ! ಅರಳುವ ಗುಲಾಬಿ ಹೂವಂತೆ ನಿಮ್ಮ ಪ್ರೀತಿಯೂ ಅರಳುತ್ತಿರಲಿ!

    ಈ ರೋಸ್ ಡೇ ಕೇವಲ ಪ್ರೇಮಿಗಳಿಗೆ ಮಾತ್ರವಲ್ಲ. ಈ ದಿನ, ನೀವು ಪ್ರೀತಿಸುವವರಿಗೆ ಕೆಂಪು ಬಣ್ಣವನ್ನು ಹೊರತುಪಡಿಸಿ ಯಾವುದೇ ಬಣ್ಣದ ಗುಲಾಬಿಯನ್ನು ನೀಡುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ನೀವು ಯಾವುದೇ ಬಣ್ಣದ ಗುಲಾಬಿಯನ್ನು ನೀಡುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಆದರೆ ಇದು ಅವರ ಯೋಚನೆಗೆ ತಕ್ಕಂತಿರುತ್ತದೆ.

    MORE
    GALLERIES