ಮಧುಮೇಹವೂ ಈ ಸಮಸ್ಯೆಗೆ ಕಾರಣವಾಗಬಹುದು. ಆಕಳಿಕೆಯು ಹೈಪೊಗ್ಲಿಸಿಮಿಯಾದ ಆರಂಭಿಕ ಲಕ್ಷಣವಾಗಿದೆ. ಕಡಿಮೆ ರಕ್ತದ ಗ್ಲೂಕೋಸ್ ಮಟ್ಟದಿಂದಾಗಿ ಆಕಳಿಕೆ ಸಂಭವಿಸುತ್ತದೆ. ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಹೊಂದಿರುವ ರೋಗಿಗಳು ರಾತ್ರಿ ವೇಳೆ ಸಾಕಷ್ಟು ಬಾರಿ ನಿದ್ರೆ ಇಲ್ಲದೇ ಕಷ್ಟ ಅನುಭವಿಸುತ್ತಾರೆ. ಆದ್ದರಿಂದ ಅವರಿಗೆ ಸಾಕಷ್ಟು ನಿದ್ರೆ ಬರುವುದಿಲ್ಲ. ಇದು ಮರುದಿನ ಆಯಾಸ ಮತ್ತು ಆಕಳಿಕೆಗೆ ಕಾರಣವಾಗುತ್ತದೆ. ಈ ರೋಗವು ಉಸಿರಾಟದ ತೊಂದರೆಯನ್ನೂ ಉಂಟುಮಾಡುತ್ತದೆ.
ನಿದ್ರಾಹೀನತೆಯು ಒಬ್ಬ ವ್ಯಕ್ತಿಯು ರಾತ್ರಿಯಲ್ಲಿ ಮಲಗಲು ಸಾಧ್ಯವಾಗದ ರೋಗವಾಗಿದೆ. ಸಾಮಾನ್ಯವಾಗಿ ನಿದ್ರೆ ಬಂದ ನಂತರ ಒಮ್ಮೆ ಎದ್ದರೆ ಮತ್ತೆ ನಿದ್ರೆ ಬರುವುದಿಲ್ಲ. ಪರಿಣಾಮವಾಗಿ ರಾತ್ರಿಯಲ್ಲಿ ನಿದ್ರೆ ಪೂರ್ಣಗೊಳ್ಳುವುದಿಲ್ಲ ಮತ್ತು ಹೀಗಾಗಿ ಅಂತಹ ವ್ಯಕ್ತಿಯು ದಿನದಲ್ಲಿ ಸಾಕಷ್ಟು ಆಕಳಿಸುತ್ತಾರೆ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)