ಕ್ರೂಸಿಫೆರಸ್ ತರಕಾರಿ ತಿನ್ನಿ: ಕೋಸುಗಡ್ಡೆ, ಎಲೆಕೋಸು, ಹೂಕೋಸು ಮತ್ತು ಕೊಲಾರ್ಡ್ ಗ್ರೀನ್ಸ್ ಗಳಂತಹ ಕ್ರೂಸಿಫೆರಸ್ ತರಕಾರಿ ತಿನ್ನಿ. ಇದು ಕ್ಯಾನ್ಸರ್ ತಡೆಗೆ ಸಹಕಾರಿ ಅಂತಾರೆ ತಜ್ಞರು. ಕ್ರೂಸಿಫೆರಸ್ ತರಕಾರಿಗಳು ವಿಟಮಿನ್ ಸಿ, ಇ ಮತ್ತು ಕೆ ಹಾಗೂ ಫೈಬರ್ ಅಂಶ ಹೊಂದಿವೆ. ಕ್ರೂಸಿಫೆರಸ್ ತರಕಾರಿಗಳು ಪ್ರಾಸ್ಟೇಟ್, ಕೊಲೊರೆಕ್ಟಲ್, ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್ ಕಡಿಮೆ ಮಾಡುತ್ತದೆ.