ಆ್ಯಡಮ್ ಮಿಕಿವಿಕ್ಜ್ ವಿಶ್ವವಿದ್ಯಾಲಯದ ಮ್ಯಾಗ್ಡಲೀನಾ ವಿಂಕೆಲ್ ನೇತೃತ್ವದ ಹೊಸ ಅಧ್ಯಯನವು ಆಲೂಗಡ್ಡೆ ಮತ್ತು ಟೊಮೆಟೊಗಳಂತಹ ತರಕಾರಿಗಳಲ್ಲಿ ಉತ್ಪತ್ತಿಯಾಗುವ ರಾಸಾಯನಿಕಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ ಎಂದು ಕಂಡುಹಿಡಿದಿದೆ. ಸೋಲನೇಸಿ ಕುಟುಂಬದ ಸಸ್ಯಗಳಲ್ಲಿ ಗ್ಲೈಕೋಲ್ಕಲಾಯ್ಡ್‌ಗಳು ರಾಸಾಯನಿಕ ರಕ್ಷಣಾ ಕಾರ್ಯವಿಧಾನದ ಭಾಗವಾಗಿದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.
ವಿಶ್ವದಾದ್ಯಂತ ಸಾವಿಗೆ ಕ್ಯಾನ್ಸರ್ ಅತ್ಯಂತ ಸಾಮಾನ್ಯ ಕಾರಣವಾಗಿದೆ ಎಂದು ಸಂಶೋಧಕರು ಬರೆದಿದ್ದಾರೆ. 2020 ರಲ್ಲಿ ಸುಮಾರು 1.9 ಕೋಟಿ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ ಮತ್ತು ಕ್ಯಾನ್ಸರ್ ನಿಂದಾಗಿ ಒಂದು ಕೋಟಿ ಸಾವುಗಳು ದಾಖಲಾಗಿವೆ. ಮುಂದಿನ 20 ವರ್ಷಗಳಲ್ಲಿ, ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 28 ದಶಲಕ್ಷಕ್ಕೆ ಹೆಚ್ಚಾಗುತ್ತದೆ ಎಂಬ ಆತಂಕಕಾರಿ ವಿಚಾರ ಹೊರಬಿದ್ದಿದೆ.
ಸೋಲನೈನ್ ಕ್ಯಾನ್ಸರ್-ಉಂಟುಮಾಡುವ ರಾಸಾಯನಿಕಗಳನ್ನು ಪ್ರತಿಬಂಧಿಸುವಲ್ಲಿ ಪರಿಣಾಮಕಾರಿಯಾಗಿದೆ, ಸೋಲಾಮಾರ್ಜಿನ್ ಯಕೃತ್ತಿನ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ ಮತ್ತು ಜೊತೆಗೆ, ಸೋಲನೈನ್ ಕ್ಯಾನ್ಸರ್ ಕಾಂಡಕೋಶಗಳನ್ನು ಗುರಿಯಾಗಿಸುತ್ತದೆ. ಈ ದಿಕ್ಕಿನಲ್ಲಿ, ಕಡಿಮೆ ಹಾನಿಕಾರಕ ಕ್ಯಾನ್ಸರ್ ಚಿಕಿತ್ಸೆಗಳನ್ನು ಕಂಡುಹಿಡಿಯಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ.