ಆರೋಗ್ಯ ಆಪ್ಟಿಮೈಜಿಂಗ್ ಬಯೋಹ್ಯಾಕರ್, ಸೈಕಾಲಜಿ ಸ್ಪೆಷಲಿಸ್ಟ್ ಟಿಮ್ ಗ್ರೇ ಅವರು ತಮ್ಮ Instagram ಖಾತೆಯಲ್ಲಿನ ಪೋಸ್ಟ್‌ನಲ್ಲಿ ಸನ್ಗ್ಲಾಸ್ ಕಣ್ಣಿನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಿದ್ದಾರೆ. ಸೂರ್ಯನ ನೇರಳಾತೀತ ಕಿರಣಗಳು ಚರ್ಮ ಮತ್ತು ಕಣ್ಣುಗಳಿಗೆ ಹಾನಿ ಮಾಡುತ್ತದೆ. ಹಾಗಾಗಿ ಅನೇಕ ಮಂದಿ ತಮ್ಮ ಕಣ್ಣಿಗೆ ಸನ್‌ಸ್ಕ್ರೀನ್ ಅನ್ನು ಧರಿಸುತ್ತಾರೆ. ಆದರೆ ಇವುಗಳನ್ನು ಬಳಸುವುದರಿಂದ ಕಣ್ಣಿನ ಆರೋಗ್ಯ ಹಾಳಾಗುತ್ತದೆ. ಅಲ್ಲದೇ ಇದಕ್ಕೆ ಕಾರಣವೇನು ಎಂಬುವುದನ್ನು ಕೂಡ ಟಿಮ್ ಗ್ರೇ ತಿಳಿಸಿದ್ದಾರೆ.
ಮೆದುಳಿಗೆ ತಪ್ಪು ಸಂಕೇತಗಳು: ಸೂರ್ಯನ ತೀವ್ರತೆಯಿಂದಾಗಿ ಸೂರ್ಯನಿಂದ ಬರುವ ಕಿರಣಗಳನ್ನು ಕಣ್ಣುಗಳು ಶೋಧಿಸುತ್ತವೆ. ಕಣ್ಣುಗಳು ಪಿಟ್ಯುಟರಿ ಮತ್ತು ಪೀನಲ್ ಗ್ರಂಥಿಗಳಿಗೆ ಸಂಕೇತಗಳನ್ನು ಕಳುಹಿಸುತ್ತವೆ, ಅದು ಬಿಸಿಲಿನ ಬಗ್ಗೆ ಮೆದುಳಿಗೆ ತಿಳಿಸುತ್ತದೆ. ಆದರೆ, ಸನ್‌ಗ್ಲಾಸ್‌ಗಳನ್ನು ಧರಿಸುವುದರಿಂದ ಮೋಡ ಕವಿದಂತೆ ಕಾಣಿಸುತ್ತದೆ. ಇದರಿಂದ ಬಿಸಿಲನ್ನು ತಡೆದುಕೊಳ್ಳಲು ಮೆದುಳು ಚರ್ಮಕ್ಕೆ ಅಗತ್ಯ ಸಂಕೇತಗಳನ್ನು ನೀಡುವುದಿಲ್ಲ. ಸನ್ಗ್ಲಾಸ್ ಧರಿಸುವುದರಿಂದ ಮಾನವ ದೇಹದ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ ಮತ್ತು ನಿದ್ರಾಹೀನತೆಗೆ ಕಾರಣವಾಗುತ್ತದೆ. ಇದು ತೀವ್ರ ಆಯಾಸ, ಖಿನ್ನತೆ, ಋತುಮಾನದ ಪ್ರಭಾವದ ಅಸ್ವಸ್ಥತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ಈ ಬಗ್ಗೆ ಕೊಲಂಬಿಯಾ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ನಡೆಸಿದ್ದು, 'ಯುವಿ ಕಿರಣಗಳನ್ನು ತಡೆಯದಿದ್ದರೆ ಸನ್ ಗ್ಲಾಸ್ ಕಣ್ಣಿಗೆ ಹಾನಿಕಾರಕ. ಸಾಮಾನ್ಯವಾಗಿ ಕಣ್ಣುಗಳು ಬೆಳಕಿಗೆ ಹೊಂದಿಕೊಳ್ಳುತ್ತವೆ. ಗಾಢವಾದ ಸನ್ಗ್ಲಾಸ್ ಧರಿಸಿದಾಗ, ಬೆಳಕು ಮಂದವಾದಾಗ ಕಣ್ಣುಗಳು ನೈಸರ್ಗಿಕವಾಗಿ ದೃಷ್ಟಿಗೆ ಹಿಗ್ಗುತ್ತವೆ. ಈ ಸಮಯದಲ್ಲಿ ಸನ್ ಗ್ಲಾಸ್ ಯುವಿ ಕಿರಣಗಳನ್ನು ತಡೆಯದಿದ್ದರೆ ಅದು ಕಣ್ಣುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.