ಪೇರಳೆ ಹಣ್ಣು ಮೂಲತಃ ಮಧ್ಯ ಅಮೇರಿಕಾ, ದಕ್ಷಿಣ ಅಮೇರಿಕಾ, ಕೆರಿಬಿಯನ್ ಮತ್ತು ಮೆಕ್ಸಿಕೊದ ಸಸ್ಯವಾಗಿದೆ. ಈ ಹಣ್ಣು ಅಂಡಾಕಾರ ಮತ್ತು ಹಳದಿ-ಹಸಿರು ಬಣ್ಣದಲ್ಲಿರುತ್ತದೆ. ಅದರ ಒಳಭಾಗ ಅಂದರೆ ತಿರುಳು ಕೆಂಪು ಮತ್ತು ಬಿಳಿ ಬಣ್ಣದಲ್ಲಿರುತ್ತದೆ. ಅದರ ಎಲೆಗಳು ಉದ್ದವಾಗಿರುತ್ತದೆ. ಈ ಹಣ್ಣು ಪ್ರಪಂಚದಾದ್ಯಂತ ಫೇಮಸ್ ಆಗಿದೆ. ಇದರ ಎಲೆಗಳು ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಪೇರಳೆ ಎಲೆಗಳನ್ನು ಅನೇಕ ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ.
ಹರ್ಬಲ್ ಚಹಾವು ಪ್ರಯೋಜನಕಾರಿಯಾಗಬಲ್ಲದು: ತೂಕ ನಷ್ಟಕ್ಕೆ ಪೇರಳೆ ಎಲೆಗಳು ಸಹಾಯಕವಾಗಿದೆ ಎಂದು ಹೇಳಲಾಗುತ್ತದೆ ಆದರೆ, ನೀವು ಸಕ್ಕರೆ ಪಾನೀಯಗಳ ಬದಲಿಗೆ ಗಿಡಮೂಲಿಕೆ ಚಹಾವನ್ನು ಸೇವಿಸಿದಾಗ ನೀವು ತೂಕವನ್ನು ಕಳೆದುಕೊಳ್ಳಬಹುದು. ಹಾಗಾಗಿ ಪೇರಳೆ ಎಲೆಗಳ ಚಹಾವು ನಿಮಗೆ ಪರೋಕ್ಷವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಆದರೆ ಅದನ್ನು ಪರಿಣಾಮಕಾರಿ ಪರಿಹಾರವೆಂದು ಪರಿಗಣಿಸಬೇಡಿ.