Butter Milk: ಮಜ್ಜಿಗೆ ಕುಡಿದರೆ ಏನೆಲ್ಲಾ ಪ್ರಯೋಜನ ಸಿಗಲಿದೆ ಗೊತ್ತಾ?
ಬೇಸಿಗೆಯಲ್ಲಿ ಮಜ್ಜಿಗೆಗಂತೂ ಫುಲ್ ಡಿಮ್ಯಾಂಡ್. ಆದರೆ ಮಳೆಗಾಲದಲ್ಲಿ ಕೊಂಚ ಕಡಿಮೆ, ಆದರೂ ಹಳ್ಳಿ ಪ್ರದೇಶದ ಜನರು ಬೇಸಿಯಾದರು ಸರಿ, ಮಳೆಯಾದರ ಸರಿ ಮಜ್ಜಿಗೆ ಬೇಕೆ ಬೇಕು.
News18 Kannada | November 29, 2020, 3:26 PM IST
1/ 10
ಅನೇಕರು ಮಜ್ಜಿಗೆಯೆಂದರೆ ಹಿಂಜರಿಯುತ್ತಾರೆ. ಕುಡಿಯಲು ಹಿಂದೇಟು ಹಾಕುತ್ತಾರೆ. ಆದರೆ ಅದರಲ್ಲಿ ಅಡಗಿರುವ ಸತ್ವವನ್ನು ತಿಳಿದುಕೊಂಡರೆ ಕುಡಿಯಲಾರದವನು ಕೂಡ ಮಜ್ಜಿಯನ್ನು ಸೇವಿಸಿಯಾನು.
2/ 10
ಬೇಸಿಗೆಯಲ್ಲಿ ಮಜ್ಜಿಗೆಗಂತೂ ಫುಲ್ ಡಿಮ್ಯಾಂಡ್. ಆದರೆ ಮಳೆಗಾಲದಲ್ಲಿ ಕೊಂಚ ಕಡಿಮೆ, ಆದರೂ ಹಳ್ಳಿ ಪ್ರದೇಶದ ಜನರು ಬೇಸಿಯಾದರು ಸರಿ, ಮಳೆಯಾದರ ಸರಿ ಮಜ್ಜಿಗೆ ಬೇಕೆ ಬೇಕು.
3/ 10
ಮಜ್ಜಿಗೆಗೆ ಹಸಿಮೆಣಸು, ಉಪ್ಪು, ಜೀರಿಗೆ ಪುಡಿ, ಚಾಟ್ ಮಸಾಲಾ, ಕೊತ್ತಂಬರಿ ಸೊಪ್ಪು, ಶುಂಠಿ, ಬೇವಿನ ಸೊಪ್ಪು, ಬೆಳ್ಳುಳ್ಳಿ ಮೊದಲಾದವುಗಳನ್ನು ಕೊಂಚ ಕೊಂಚವಾಗಿ ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ಕುಡಿದರೆ ಬೇಸಿಗೆಗೆ ಇದಕ್ಕಿಂತ ಉತ್ತಮವಾದ ಪೇಯ ಇನ್ನೊಂದಿಲ್ಲ
4/ 10
ಮಜ್ಜಿಗೆ ಕುಡಿದರೆ ಏನೆಲ್ಲಾ ಪ್ರಯೋಜನ ಸಿಗುತ್ತದೆ ಗೊತ್ತಾ? ಇಲ್ಲಿದೆ ಮಾಹಿತಿ
5/ 10
ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು: ಮಜ್ಜಿಗೆ ಕುಡಿದರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಇನ್ನು ಮಜ್ಜಿಗೆಯಲ್ಲಿ ಸೇರಿಸಿರುವ ಜೀರಿಗೆ ಪುಡಿ ಮೊದಲಾದ ಮಸಾಲೆ ಪದಾರ್ಥಗಳು ಜೀರ್ಣಕ್ರಿಯೆಗೆ ಇನ್ನಷ್ಟು ಸಹಕರಿಸಿ ಜೀರ್ಣಕ್ರಿಯೆಯನ್ನು ಸುಲಭ ಮತ್ತು ಪರಿಪೂರ್ಣಗೊಳಿಸುತ್ತವೆ.
6/ 10
ದೇಹದ ತಾಪಮಾನವನ್ನು ತಣಿಸುತ್ತದೆ: ಬೇಸಿಗೆಯ ಬಿಸಿಗೆ ದೇಹವೂ ಬಿಸಿಯಾಗುತ್ತದೆ. ಇದನ್ನು ತಣಿಸಲು ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆವರು ಹರಿಯಬೇಕಾಗುತ್ತದೆ. ಮಜ್ಜಿಗೆಯ ಸೇವನೆ ಈ ತೊಂದರೆಯನ್ನು ತಡೆಯುತ್ತದೆ ಹಾಗೂ ದೇಹವನ್ನು ತಂಪಾಗಿಡಲು ನೆರವಾಗುತ್ತದೆ.
7/ 10
ಹೊಟ್ಟೆ ಉಬ್ಬರಿಕೆ ಮೊದಲಾದ ಸಮಸ್ಯೆಗೆ ರಾಮಬಾಣ: ಮೊದ;ಏ ಹೇಳಿದ.ತೆ ಮಜ್ಜಿಗೆ ಹಲವಾರು ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ. ಹೊಟ್ಟೆ ಉಬ್ಬರಿಸುವಿಕೆ ಮಜ್ಜೆಗೆ ಕುಡಿದರೆ ಸರಿಯಾಗುತ್ತದೆ.
8/ 10
ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಮಸಾಲೆ ಹೊಟ್ಟೆ ಸೇರುವುದರಿಂದ ಇವು ಹೊಟ್ಟೆಯಲ್ಲಿ ಉರಿ, ಆಮ್ಲೀಯತೆ ಮೊದಲಾದ ತೊಂದರೆಗಳನ್ನು ಉಂಟುಮಾಡಬಹುದು. ಆದರೆ ಹಾಲಿನಲ್ಲಿರುವ ಪ್ರೋಟೀನುಗಳು ಮಜ್ಜಿಗೆಯಲ್ಲಿಯೂ ಇದ್ದು ಈ ಉರಿ ತರಿಸುವ ಮಸಾಲೆಗಳನ್ನು ತಟಸ್ಥವಾಗಿಸುತ್ತವೆ.
9/ 10
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಹೊರತಾಗಿ ವಿವಿಧ ಪ್ರೋಟೀನುಗಳು, ವಿಟಮಿನ್ ಬಿ, ಪೊಟ್ಯಾಸಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇವೆಲ್ಲವೂ ಆರೋಗ್ಯಕ್ಕೆ ಪೂರಕವಾಗಿವೆ. ಪರಿಣಾಮವಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
10/ 10
ರಕ್ತದೊತ್ತಡ ನಿವಾರಣೆಗೆ: ಮಜ್ಜಿಗೆಯನ್ನು ಸೇವಿಸುದರಿಂದ ರಕ್ತದೊತ್ತಡ ನಿವಾರಣೆಯಾಗುತ್ತದೆ, ಮಾತ್ರವಲ್ಲದೆ ದೇಹವನ್ನು ತಂಪಾಗಿರಿಸುತ್ತದೆ.