ಪ್ರತಿದಿನ ಅಡುಗೆ ಮಾಡುವಾಗ ಹಸಿರು ಮೆಣಸಿನಕಾಯಿಯನ್ನು ಕತ್ತರಿಸಬೇಕು. ಆದರೆ ಅದನ್ನು ಕತ್ತರಿಸಿದ ನಂತರ ಕೈ ಉರಿಯಲು ಆರಂಭವಾಗುತ್ತದೆ. ಈ ವೇಳೆ ಕೆಳಗೆ ತಿಳಿಸಲಾಗಿರುವ ಕೆಲವೊಂದಷ್ಟು ಟಿಪ್ಸ್ ಅನ್ನು ಫಾಲೋ ಮಾಡಿ. ಹೀಗೆ ಮಾಡುವುದರಿಂದ ಕೈಗಳನ್ನು ಉರಿಯುವುದರಿಂದ ತಪ್ಪಿಸಿಕೊಳ್ಳಬಹುದು. ಅಲ್ಲದೇ ಮೆಣಸಿನಕಾಯಿಯನ್ನು ಹೇಗೆ ಕತ್ತರಿಸಬೇಕು ಎಂಬುವುದನ್ನು ಕೂಡ ಕಲಿತುಕೊಳ್ಳುತ್ತೀರಿ.
ಚಾಪಿಂಗ್ ಬೋರ್ಡ್ ಬಳಸಿ: ಮೆಣಸಿನಕಾಯಿಯನ್ನು ಕತ್ತರಿಸಲು ಚಾಕುವಿನ ಬದಲಿಗೆ ಚಾಪಿಂಗ್ ಬೋರ್ಡ್ ಅಥವಾ ಕತ್ತರಿ ಬಳಸುವುದು ಉತ್ತಮ. ಇದು ಕೈಗಳನ್ನು ಉರಿಸುವುದಿಲ್ಲ. ನೀವು ಚಾಪಿಂಗ್ ಬೋರ್ಡ್ ಹೊಂದಿಲ್ಲದಿದ್ದರೆ, ಇದಕ್ಕಾಗಿ ರೋಲಿಂಗ್ ಪಿನ್ ಅನ್ನು ಬಳಸಬಹುದು. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)