Nail Art: ಮದುವೆ ದಿನಕ್ಕೆ ಇಲ್ಲಿದೆ ಸಿಂಪಲ್ ನೈಲ್ ಆರ್ಟ್ ಐಡಿಯಾಗಳು
Bridal Nail Art Ideas: ಮದುವೆ ಸೀಸನ್ ಆರಂಭವಾಗಿದೆ. ಮದುವೆ ಎಂದ ಮೇಲೆ ಮದುಮಗಳ ತಯಾರಿ ಭರ್ಜರಿಯಾಗಿಯೇ ನಡೆಯುತ್ತದೆ. ತ್ವಚೆಯ ಆರೈಕೆಯಿಂದ ಹಿಡಿದು ಹಾಕುವ ಬಟ್ಟೆಯವರೆಗೆ ಎಲ್ಲವೂ ಮುಖ್ಯವಾಗುತ್ತದೆ. ಹಾಗೆಯೇ ಉಗುರು ಸಹ. ಈ ಮದುವೆಯ ದಿನ ಎಲ್ಲವೂ ಚೆನ್ನಾಗಿದ್ದು ಉಗುರು ಸಿಂಪಲ್ ಆಗಿದ್ದರೆ ಚೆಂದ ಕಾಣುವುದಿಲ್ಲ. ಅದಕ್ಕೆ ಮದುವೆಯ ದಿನ ಉಗುರಿನ ಅಲಂಕಾರ ಮಾಡಲು ಕೆಲ ಐಡಿಯಾ ಇಲ್ಲಿದ್ದು, ಟ್ರೈ ಮಾಡಬಹುದು.
ಮದುಮಗಳು ಎಲ್ಲರಿಗಿಂತಲೂ ವಿಭಿನ್ನವಾಗಿ ಕಾಣಬೇಕು, ಮದುವೆಯ ದಿನ ಎಲ್ಲರ ಕಣ್ಣು ಸಹ ಆಕೆಯ ಮೇಲೆ ಇರುತ್ತದೆ. ಹಾಗಾಗಿ ಪರ್ಫೆಕ್ಟ್ ಆಗಿ ರೆಡಿಯಾಗುವುದು ಮುಖ್ಯ. ಅದಕ್ಕೆ ಸಹಾಯ ಮಾಡೋದು ಈ ನೈಲ್ ಆರ್ಟ್. ನಿಮ್ಮ ಉಗುರು ಚೆಂದ ಇದ್ದರೆ ನಿಮ್ಮ ಲುಕ್ ಸೂಪರ್ ಆಗಿ ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ.
2/ 8
ಗೋಲ್ಡ್ ಆಕ್ಸೆಂಟ್ ಜೆಲ್ ನೈಲ್ಸ್: ಉಗುರಿಗೆ ಗೋಲ್ಡ್ ಬಣ್ಣ ಹಚ್ಚುವುದು ಸುಂದರವಾಗಿ ಕಾಣುತ್ತದೆ ಅದರ ಜೊತೆಗೆ ರಾಯಲ್ಲುಕ್ ಸಹ ನೀಡುತ್ತದೆ ಎನ್ನಬಹುದು. ಕೇವಲ ಒಂದು ಜೆಲ್ ನೈಲ್ ಪಾಲಿಶ್ ಹಚ್ಚಿ ಅದರ ಮೇಲೆ ಗೋಲ್ಡನ್ ಬಣ್ಣದ ಹರಳುಗಳನ್ನು ಅಥವಾ ಸ್ಟಿಕರ್ ಹಚ್ಚಿದರೆ ಸೂಪರ್ ಆಗಿ ಕಾಣುತ್ತದೆ.
3/ 8
ಸ್ಟಡ್ ನೇಲ್ ಆರ್ಟ್: ನಿಮಗೆ ಇಷ್ಟವಾಗುವ ಬಣ್ಣದ ನೈಲ್ ಪಾಲಿಶ್ ಹಚ್ಚಿ, ಅದರ ಮೇಲೆ ವಿವಿಧ ಡಿಸೈನ್ಗಳ ಹರಳನ್ನು ಅಂಟಿಸಬಹುದು. ಕೇವಲ ಅರ್ಧ ಉಗುರಿಗೆ ನೈಲ್ ಪಾಲಿಶ್ ಹಚ್ಚಿ ಉಳಿದ ಕಡೆ ಈ ಹರಳು ಹಚ್ಚುವುದು ಸಹ ಸುಂದರವಾಗಿ ಕಾಣುತ್ತದೆ.
4/ 8
ಗ್ಲಿಟರ್ ನೇಲ್ ಆರ್ಟ್: ಈ ಗ್ಲಿಟರ್ ನಿಮ್ಮ ಉಗುರಿನ ಅಂದವನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನೈಲ್ ಪಾಲಿಶ್ ಹಚ್ಚಿ, ಅದರ ಮೇಲೆ ಗ್ಲಿಟರ್ ಹಾಕುವುದು ಒಳ್ಳೆಯದು.
5/ 8
ಫ್ರೆಂಚ್ ಮೆನ್ಯೂಕ್ಯೂರ್: ಫ್ರೆಂಚ್ ಮೆನ್ಯೂಕ್ಯೂರ್ ಸಹ ನಿಮಗೆ ಸಿಂಪಲ್ ಆಗಿ ಸುಂದರ ಲುಕ್ ನೀಡುತ್ತದೆ. ಇದನ್ನು ನೀವು ಮನೆಯಲ್ಲಿ ಮಾಡಲಾಗದಿದ್ದರೆ, ಪಾರ್ಲರ್ ಹೋಗಿ ಮಾಡಿಸಿಕೊಳ್ಳಬಹುದು.
6/ 8
ಮಾರ್ಬಲ್ ನೈಲ್ಸ್: ಮಾರ್ಬಲ್ ಶೈಲಿಯೂ ಬಹಳ ವಿಭಿನ್ನವಾಗಿರುತ್ತದೆ. ಇದನ್ನು ನೀವು 2 ರಿಂದ 3 ನೈಲ್ ಪಾಲಿಶ್ ಬಳಸಿ ಮಾಡಬಹುದು. ರಿಸೆಪ್ಷನ್ ಸಮಯದಲ್ಲಿ ಈ ಆರ್ಟ್ ಬಹಳ ಸುಂದರವಾಗಿ ಕಾಣುತ್ತದೆ.
7/ 8
ವೆರೈಟಿ ಡಿಸೈನ್: ನೀವು ನಿಮ್ಮ ಉಗುರಿನ ಬೇರೆ ನಿಮಗೆ ಬೇಕಾದ ಚಿತ್ರವನ್ನು ಬಿಡಿಸಬಹುದು, ಹೂವುಗಳು, ಹಾರ್ಟ್ ಹೀಗೆ. ಒಂದೊಂದು ಉಗುರಿಗೆ ಒಂದೊಂದು ಬಣ್ಣವನ್ನು ಸಹ ಹಚ್ಚಬಹುದು.
8/ 8
ನಕಲಿ ಉಗುರುಗಳು: ಮಾರುಕಟ್ಟೆಯಲ್ಲಿ ನಿಮಗೆ ನಕಲಿ ಉಗುರುಗಳು ಲಭ್ಯವಿದೆ, ಅದನ್ನು ಸಹ ನೀವು ಬಳಸಬಹುದು.ನಿಮ್ಮ ಬಟ್ಟೆಗೆ ಸರಿ ಹೊಂದುವ ನಕಲಿ ಉಗುರುಗಳು ನಿಮಗೆ ಸಿಗುತ್ತದೆ.