Breast Cancer: 5 ಹಂತಗಳಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್
Breast Cancer: ಪ್ರತಿವರ್ಷ 2.1 ಮಿಲಿಯನ್ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಎಂಬ ಮಾರಕ ರೋಗವು ಕಂಡುಬರುತ್ತದೆ. ಆರಂಭದಲ್ಲಿ ಸ್ತನ ಕ್ಯಾನ್ಸರ್ ಬಗೆಗಿನ ಲಕ್ಷಣಗಳು ತಿಳಿದುಬಂದರೆ. ಸರಿಯಾದ ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗಬಹುದು.
ಸ್ತನದ ಜೀವಕೋಶದಲ್ಲಿ ಬೆಳೆಯುವ ಕ್ಯಾನ್ಸರ್ ಅನ್ನು ಸ್ತನ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಪುರುಷರಲ್ಲೂ ಸ್ತನ ಕ್ಯಾನರ್ ಕಂಡುಬರುತ್ತದೆ. ಆದರೆ ಪುರುಷರಿಗಿಂತ ಮಹಿಳೆಯರಲ್ಲಿ ಈ ರೋಗ ಕಂಡುಬರುವುದು ಹೆಚ್ಚು.
2/ 9
ಡಬ್ಲ್ಯೂಹೆಚ್ಒ ಪ್ರಕಾರ ಪ್ರತಿವರ್ಷ 2.1 ಮಿಲಿಯನ್ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಎಂಬ ಮಾರಕ ರೋಗವು ಕಂಡುಬರುತ್ತದೆ. ಆರಂಭದಲ್ಲಿ ಸ್ತನ ಕ್ಯಾನ್ಸರ್ ಬಗೆಗಿನ ಲಕ್ಷಣಗಳು ತಿಳಿದುಬಂದರೆ. ಸರಿಯಾದ ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗಬಹುದು.
3/ 9
ವೈದ್ಯರು ಸ್ತನ ಕ್ಯಾನ್ಸರ್ ಅನ್ನು 5 ಹಂತಗಳಲ್ಲಿ ವಿಂಗಡಿಸಿದ್ದಾರೆ. ಅಂದರೆ ಸ್ತನದಲ್ಲಿ ಬೆಳೆದಿರುವ ಗಡ್ಡೆ ಎಷ್ಟು ಬೆಳೆದಿದೆ ಮತ್ತು ಎಷ್ಟು ಭಾಗಕ್ಕೆ ಪಸರಿಸಿದೆ ಎಂಬುದರ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ…
4/ 9
ಹಂತ 0: ಸ್ತನ ಕ್ಯಾನ್ಸರ್ ಅನ್ನು ಪ್ರಾರಂಭದಲ್ಲಿ ಕಂಡುಹಿಡಿಯುವುದು ಕಷ್ಟ. ಮನುಷ್ಯನ ಸ್ತನದಲ್ಲಿ ಗೊತ್ತಿಲ್ಲದೆ ಕ್ಯಾನ್ಸರ್ ಹುಟ್ಟಿಕೊಳ್ಳುತ್ತದೆ. ಇದನ್ನು ಡಕ್ಟಲ್ ಕಾರ್ಸಿನೋಮಿನ್ ಸಿತು (ಡಿಸಿಐಎಸ್) ಎಂದು ಕರೆಯುತ್ತಾರೆ..
5/ 9
ಹಂತ1: ಸ್ತನ ಕ್ಯಾನ್ಸರ್ ಗಡ್ಡೆಯಾಗಿ ಬೆಳೆಯುತ್ತದೆ. ಪ್ರಾರಂಭದಲ್ಲಿ 2 ಸೆಂ.ಮೀಟರ್ಗಿಂತಲೂ ಅಗಲವಾಗಿ ಬೆಳೆಯುತ್ತದೆ. ದುಗ್ಧರಸ ಗ್ರಂಥಿಗಳಲ್ಲಿ ಕೂಡ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
6/ 9
ಹಂತ2: ಗಡ್ಡೆ ಸುಮಾರು 2 ಸೆ. ಮೀಟರ್ಗೆ ದೊಡ್ಡದಾಗಿ ಬೆಳೆಯಲು ಪ್ರಾರಂಭಿಸುತ್ತದೆ. ನಂತರ ಹತ್ತಿರದ ದುಗ್ಧರಸ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಸಮಯದಲ್ಲಿ ಗೆಡ್ಡೆ ಬೆಳೆಯದೇ ಹಾಗೆಯೇ ಉಳಿದುಕೊಳ್ಳುವ ಸಾಧ್ಯತೆಯಿದೆ.
7/ 9
ಹಂತ 3: ನಂತರ ಹಂತ ಹಂತವಾಗಿ ಗಡ್ಡೆಯ ಗಾತ್ರದಲ್ಲಿ ಬದಲಾವಣೆಯಾಗಬಹುದು. 5 ಸೆ. ಮೀಟರ್ಗೂ ಹೆಚ್ಚು ದೊಡ್ಡದಾಗಿ ಬೆಳೆಯಬಹುದು. ಆಕ್ಸಿಲರಿ ದುಗ್ಧರಸ ಗ್ರಂಥಿಗಳ ಮೇಲೆ ಹರಡುತ್ತ ಪರಿಣಾಮ ಬೀರುತ್ತಾ ಬರುತ್ತದೆ.
8/ 9
ಹಂತ 4: ಸ್ತನ ಕ್ಯಾನ್ಸರ್ ಹರಡುತ್ತಾ ಹೋದಂತೆ ಯಕೃತ್, ಶ್ವಾಸಕೋಶ ಅಥವಾ ಮೆದುಳಿನ ಮೇಲೆ ಪರಿಣಾಂಮ ಬೀಳುತ್ತದೆ. ಮೂಳೆಗಳಿಗೂ ಹಾನಿಯಾಗುವ ಸಾಧ್ಯತೆಯಿದೆ.
9/ 9
ಮಹಿಳೆಯರು ಆರಂಭದಲ್ಲೇ ಸ್ತನ ಕ್ಯಾನ್ಸರ್ ಬಗ್ಗೆ ಪತ್ತೆಹಚ್ಚಬೇಕಾದರೆ ಮ್ಯಾಮೊಗ್ರಫಿ ಪರೀಕ್ಷೆಗೆ ಒಳಪಡುವುದು ಉತ್ತಮ. ಆ ಮೂಲಕ ಸ್ತನ ಕ್ಯಾನ್ಸರ್ ಇದೆಯಾ ಎಂದು ಪತ್ತೆ ಹಚ್ಚಬಹುದಾಗಿದೆ.